ಕರ್ನಾಟಕ

ಆರೆಸ್ಸೆಸ್‌ ಬ್ಯಾನ್‌ ಮಾಡೋದಕ್ಕೆ ನೆಹರು, ಇಂದಿರಾ ಕೈಯಲ್ಲೇ ಆಗಿಲ್ಲ, ಸಿದ್ದರಾಮಯ್ಯಗೆ ಮುಟ್ಟಕ್ಕೂ ಆಗಲ್ಲ: ಈಶ್ವರಪ್ಪ

Pinterest LinkedIn Tumblr


ದಾವಣಗೆರೆ: ಜವಾಹರ ಲಾಲ್‌ ನೆಹರು ಮತ್ತು ಇಂದಿರಾಗಾಂಧಿ ಕೈಯಲ್ಲಿಯೇ ಬಿಜೆಪಿ, ಆರ್‌ಎಸ್‌ಎಸ್‌ ಅನ್ನು ಬ್ಯಾನ್‌ ಮಾಡೋದಕ್ಕೆ ಆಗಲಿಲ್ಲ. ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕೈಯಲ್ಲಿ ಆರ್‌ಎಸ್‌ಎಸ್‌ ಅನ್ನು ಮುಟ್ಟುವುದಕ್ಕೂ ಆಗುವುದಿಲ್ಲ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ತಿಳಿಸಿದ್ದಾರೆ.

ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರದ ಹಿಂದುಳಿದ ವರ್ಗಗಳ ಮೋರ್ಚಾದ ಸಮಾವೇಶದಲ್ಲಿ ಮಾತನಾಡಿದರು.

ಕರಾವಳಿ, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ 21 ಜನ ಬಿಜೆಪಿ ಕಾರ್ಯಕರ್ತರ ಕಗ್ಗೊಲೆ ನಡೆದಿದೆ. ಕರಾವಳಿಯಲ್ಲಿ ಹೂವಿನ ವ್ಯಾಪಾರಿ ಪ್ರಶಾಂತ ಪೂಜಾರಿ ಕೊಲೆ ವಿರೋಧಿಸಿ ಪ್ರತಿಭಟನೆಗೆ ಮುಂದಾದರೆ ನಮ್ಮನ್ನು ಕೋಮುವಾದಿಗಳು ಎನ್ನುತ್ತಾರೆ ಎಂದರು.

ಕರಾವಳಿಯಲ್ಲಿ ಗೋ ಕಳ್ಳರು ರಾತ್ರೋರಾತ್ರಿ ಹಸುಗಳನ್ನು ಕಸಾಯಿ ಖಾನೆಗೆ ಹಿಡಿದುಕೊಂಡು ಹೋಗುತ್ತಾರೆ. ಮನೆಯಲ್ಲಿನ ಹೆಣ್ಣು ಮಕ್ಕಳು ವಿರೋಧಿಸಿದರೆ ಚಾಕು ತೋರಿಸುತ್ತಾರೆ. ಹಿಂದೂಗಳ ಕೊಲೆಗಳ ಹಿಂದೆ ಪಿಎಫ್‌ಐ ಸಂಘಟನೆ ಕೈವಾಡವಿದ್ದು, ಅದನ್ನು ಬ್ಯಾನ್‌ ಮಾಡಿ ಎಂದು ಸಿಎಂಗೆ ಹೇಳಿದರೆ, ಆರ್‌ಎಸ್‌ಎಸ್‌ನ್ನು ಬ್ಯಾನ್‌ ಮಾಡುತ್ತೇನೆ ಎನ್ನುತ್ತಾರೆ. ಆದರೆ ಆರ್‌ಎಸ್‌ಎಸ್‌ ಅನ್ನು ಬ್ಯಾನ್‌ ಮಾಡೋದಕ್ಕೆ ಸಿಎಂ ಅಲ್ಲ ಯಾರಿಂದಲೂ ಸಾಧ್ಯವಿಲ್ಲ ಎಂದು ಆಕ್ರೋಶ ಭರಿತರಾಗಿ ನುಡಿದರು.

Comments are closed.