ಕರ್ನಾಟಕ

ರಾಜ್ಯ ಚುನಾವಣೆ ಎದುರಿಸಲು ಬಿಜೆಪಿಗೆ ಆರೆಸ್ಸೆಸ್ ಸಾಥ್

Pinterest LinkedIn Tumblr


ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಸಂಘ ಪರಿವಾರವನ್ನು ಅಧಿಕೃತವಾಗಿ ಕಣಕ್ಕಿಳಿಸಲು ಆರೆಸ್ಸೆಸ್ ನಿರ್ಧರಿಸಿದೆ.

ಪಕ್ಷದ ಕಾರ್ಯಕರ್ತರ ಜೊತೆಗೆ ಸಂಘ ಪರಿವಾರದ ಕಾರ್ಯಕರ್ತರಿಗೂ ಚುನಾವಣಾ ಜವಾಬ್ದಾರಿ ವಹಿಸಲಾಗುತ್ತದೆ. ಪ್ರತೀ ಬೂತಿಗೂ ಒಬ್ಬೊಬ್ಬ ಆರೆಸ್ಸೆಸ್ ನಾಯಕರನ್ನು ಉಸ್ತುವಾರಿಯನ್ನಾಗಿ ನಿಯೋಜಿಸಲು ನಿರ್ಧರಿಸ ಲಾಗಿದೆ. ಬಜರಂಗದಳ, ವಿಶ್ವ ಹಿಂದೂ ಪರಿಷತ್, ಎಬಿವಿಪಿ ಮುಂತಾದ ಸಂಘ ಪರಿವಾರದ ಕಾರ್ಯಕರ್ತರಿಗೂ ಜವಾಬ್ದಾರಿ ಹಂಚಲು ಆರೆಸ್ಸೆಸ್ ತೀರ್ಮಾ ನಿಸಿದೆ.

ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಗೊಳಿಸಲು ಆರೆಸ್ಸೆಸ್ ರಣತಂತ್ರ ಹೆಣೆಯುತ್ತಿದೆ. ರಾಜ್ಯದಲ್ಲಿ ಸಿದ್ದ ರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಪಕ್ಷವನ್ನು ಎದುರಿಸುವುದು ಬಿಜೆಪಿಗೆ ಕಠಿಣವಾಗಲಿದೆ. ಈ ಹಿನ್ನೆಲೆಯಲ್ಲಿ ಬೂತ್ ಮಟ್ಟದಲ್ಲೇ ಪಕ್ಷ ಸಂಘಟನೆಗೆ ಸಂಘ ಪರಿವಾರದ ನಾಯಕರೇ ಮುಂದಾಗಿದ್ದಾರೆ.

Comments are closed.