ಬೆಂಗಳೂರು: ಶಾಸಕ ಹ್ಯಾರಿಸ್ ಮಗ ಮೊಹಮ್ಮದ್ ನಲಪಾಡ್ ವಿದ್ವತ್ ಎಂಬುವರರ ಮೇಲೆ ನಡೆಸಿದ ಹಲ್ಲೆಯ ದೃಶ್ಯಾವಳಿಗಳನ್ನು ಸಿಸಿ ಕ್ಯಾಮರಾದಿಂದ ಖುದ್ದು ಪೊಲೀಸರೇ ನಾಶ ಮಾಡುತ್ತಿರುವ ಬೀತಿ ಶುರುವಾಗಿದ್ದು, ಕೂಡಲೇ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಬಹಿರಂಗ ಪಡಿಸುವಂತೆ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಶಾಸಕ ಎನ್.ಎ.ಹ್ಯಾರಿಸ್ ಪುತ್ರನನ್ನು ಕಾಪಾಡಲು ಪೊಲೀಸರು ಪ್ರಯತ್ನ ನಡೆಸಿದ್ದಾರೆ. ಇದು ಈ ಪ್ರಕರಣದ ಹಲವು ಹಂತದಲ್ಲಿ ಸಾಬೀತಾಗಿದೆ. ಯುಬಿ ಸಿಟಿ ಖಾಸಗಿ ಹೋಟೆಲ್ನಲ್ಲಿ ದಾಂಧಲೆ ನಡೆಸಿದ ಸಂದರ್ಭ ದಾಖಲಾದ ಸಿಸಿಟಿವಿ ವಿವರವನ್ನು ಪೊಲೀಸರೇ ನಾಶಪಡಿಸಿದ್ದಾರೆ.
ಗಾಂಜಾ ನಶೆಯಲ್ಲಿ ತೇಲುತ್ತಿದ್ದ ನಲಪಾಡ್ ಹಾಗೂ ಆತನ ಸ್ನೇಹಿತರು ನಶೆಯಲ್ಲಿಯೇ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರೇ ಈತನನ್ನು ಕಾಪಾಡಲು ಪೊಲೀಸರು ಪ್ರಯತ್ನ ನಡೆಸಿದ್ದಾರೆ. ಈ ಪ್ರಕರಣದ ಹಲವು ಹಂತದಲ್ಲಿ ಸಾಬೀತಾಗಿದೆ. ಇದೀಗ ಯುಬಿ ಸಿಟಿ ಖಾಸಗಿ ಹೋಟೆಲ್ನಲ್ಲಿ ದಾಂಧಲೆ ನಡೆಸಿದ ಸಂದರ್ಭ ದಾಖಲಾದ ಸಿಸಿಟಿವಿ ವಿವರವನ್ನು ಪೊಲೀಸರೇ ನಾಶಪಡಿಸಿದ್ದಾರೆ.