ಕರ್ನಾಟಕ

ರಸ್ತೆ ದುರಸ್ತಿಗೆ ಮೋದಿಗೆ ಪತ್ರ ಬರೆದ ಬಾಲಕಿಗೆ ಪ್ರಧಾನಿ ಕಾರ್ಯಾಲಯದಿಂದ ಸ್ಪಂದನೆ

Pinterest LinkedIn Tumblr


ಬಾಗಲಕೋಟೆ: ನಮ್ಮೂರ ರಸ್ತೆ ಸರಿಯಿಲ್ಲ. ಅದನ್ನು ಸರಿ ಮಾಡಿಸಿ ಎಂದು ಮುಧೋಳ ನಗರದ ವಿದ್ಯಾರ್ಥಿನಿ ಬರೆದ ಪತ್ರಕ್ಕೆ ಪ್ರಧಾನಮಂತ್ರಿ ಕಾರ್ಯಾಲಯದಿಂದ ಸ್ಪಂದನೆ ದೊರಕಿದೆ.

ನಗರದ ಸಾಯಿ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಒಂಭತ್ತನೇ ತರಗತಿ ಓದುತ್ತಿರುವ, ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ಬಾಲಕಿ ಅರ್ಪಿತಾ ಮದುಬಾಯಿ, ಗ್ರಾಮದಲ್ಲಿ ರಸ್ತೆ ಸುಧಾರಣೆ ಆಗುತ್ತಿಲ್ಲ. ಮಳೆಗಾಲದಲ್ಲಿ ಕೆಸರು ತುಂಬಿರುತ್ತೆ. ಇದರಿಂದ ಅನೇಕ ಬಾಲಕಿಯರಿಗೆ ಶಾಲೆಗೆ ಹೋಗಲು ಆಗುತ್ತಿಲ್ಲ. ರಸ್ತೆ ಸರಿ ಮಾಡಿಸಿ ಎಂದು ಪ್ರಧಾನಮಂತ್ರಿಗೆ ಪತ್ರ ಬರೆದಿದ್ದಳು.

ಇದೀಗ ಪ್ರಧಾನಮಂತ್ರಿ ಕಾರ್ಯಾಲಯದಿಂದ ಉತ್ತರ ಬಂದಿದ್ದು, ಬಾಲಕಿ ಹೇಳಿರುವ ಸಮಸ್ಯೆ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದ್ದು, ಅದರ ಪ್ರತಿಯನ್ನು ಬಾಲಕಿಗೂ ಕಳಿಸಿದ್ದಾರೆ.

ರಸ್ತೆ ಸುಧಾರಣೆಗಾಗಿ ಬಾಲಕಿ ತಂದೆ ಅನೇಕರಿಗೆ ಮನವಿ ಮಾಡಿದ್ದರೂ ಸೂಕ್ತ ಸ್ಪಂದನೆ ದೊರಕಿರಲಿಲ್ಲವಂತೆ. ಹಾಗಾಗಿ ಬಾಲಕಿ ಅರ್ಪಿತಾ ಪ್ರಧಾನಮಂತ್ರಿಯವರ ಮೊರೆ ಹೋಗಿದ್ದಳು.

Comments are closed.