ಬೆಂಗಳೂರು: ಪ್ರೀತಿಸಿ ಮದುವೆಯಾಗುವ ಜೋಡಿಗೆ ರಾಜ್ಯ ಸರ್ಕಾರ ₹50 ಸಾವಿರದಿಂದ ₹1 ಲಕ್ಷ ಪ್ರೋತ್ಸಾಹ ಧನ ನೀಡಲಿ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ಬುಧವಾರ ಕುರಿಗಳ ಮದುವೆ ಮಾಡುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಿತು. ಇದೇ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ಪ್ರೇಮಿಗಳ ದಿನದಂದು ಕೇಂದ್ರ ಸರ್ಕಾರ ಒಂದು ದಿನದ ರಜೆ ಘೋಷಿಸಬೇಕು ಎಂದರು.
ಪ್ರೀತಿಗೆ ಯಾವುದೇ ಜಾತಿ ಅಥವಾ ಸಮುದಾಯಗಳಿಲ್ಲ, ಪ್ರೇಮಿಗಳ ದಿನಕ್ಕೆ ನಾವು ವಿರೋಧಿಸಬಾರದು. ಪ್ರೀತಿಸಿ ಮದುವೆ ಆಗುವ ಜೋಡಿಗೆ ರಾಜ್ಯ ಸರ್ಕಾರ ₹50 ಸಾವಿರದಿಂದ ₹1ಲಕ್ಷ ಪ್ರೋತ್ಸಾಹ ಧನ ನೀಡಬೇಕು ಎಂದರು.