ಕರ್ನಾಟಕ

ಕಲಬುರಗಿ ಅಪ್ಪನ ಗುಡಿ, ದರ್ಗಾ ದರ್ಶನ ಪಡೆದ ರಾಹುಲ್

Pinterest LinkedIn Tumblr

ಕಲಬುರಗಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಲ್ಲಿನ ಆರಾಧ್ಯ ದೈವ ಮಹಾದಾಸೋಹಿ ಶರಣಬಸವೇಶ್ವರ ದೇವಾಲಯ ಹಾಗೂ ಖ್ವಾಜಾ ಬಂದಾ ನವಾಜ್ ದಗರ್ಾಕ್ಕೆ ಸೋಮವಾರ ರಾತ್ರಿ ಭೇಟಿ ನೀಡಿ ದರ್ಶನ ಪಡೆದುಕೊಂಡರು. ಈ ಮೂಲಕ ತಮ್ಮ ವಿರುದ್ಧ ಬಿಜೆಪಿ ಟೀಕೆಗೆ ದೈವಸ್ಥಗಳಿಗೆ ಹೋಗುವ ಮೂಲಕವೇ ಉತ್ತರ ನೀಡಿದರು.

ಎನ್ವಿ ಮೈದಾನದಲ್ಲಿ ಜನಾಶೀವರ್ಾದ ಕಾಂಗ್ರೆಸ್ ಯಾತ್ರೆ ಮುಗಿಯುತ್ತಲೇ 9.45ಕ್ಕೆ ನೇರವಾಗಿ ಶರಣಬಸವೇಶ್ವರ ಮಹಾದಾಸೋಹ ಪೀಠಕ್ಕೆ ತೆರಳಿದರು. ಶರಣಬಸವೇಶ್ವರ ಸನ್ನಿಧಿಯ ದರ್ಶನ ಪಡೆದ ಬಳಿಕ, ಪೀಠಾಧಿಪತಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರನ್ನು ದಾಸೋಹ ಮನೆಯಲ್ಲಿ ಭೇಟಿ ಮಾಡಿ ಆಶೀವರ್ಾದ ಪಡೆದುಕೊಂಡರು.

ರಾಹುಲ್ರನ್ನು ಸನ್ಮಾನಿಸಿ ಸ್ಮರಣಿಕೆ ನೀಡಿದ ಡಾ.ಅಪ್ಪ, ಶರಣಬಸವೇಶ್ವರ ಹಾಗೂ ಸಂಸ್ಥಾನದ ಸಮಗ್ರ ವಿವರಗಳಿರುವ ಕೃತಿಯನ್ನು ನೀಡಿದರು. ಪುಸ್ತಕಗಳನ್ನು ಕುತೂಹಲದಿಂದ ರಾಗಾ ನೋಡಿ ಕಣ್ಣಿಗೆ ಸ್ಪಶರ್ಿಸಿಕೊಂಡರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಶತಮಾನೋತ್ಸವ ಆಚರಿಸಿದ್ದು, ಅದರಡಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು ಹಾಗೂ ಶರಣಬಸವ ವಿಶ್ವವಿದ್ಯಾಲಯ ಆರಂಭಿಸಿದ ಬಗ್ಗೆ ಅಪ್ಪ ಅವರು ರಾಹುಲ್ಗೆ ವಿವರ ಮಾಹಿತಿ ನೀಡಿದರು.

ಅಪ್ಪ ಅವರ ಶೈಕ್ಷಣಿಕ ಹಾಗೂ ಧಾಮರ್ಿಕ ಕಾರ್ಯವನ್ನು ಮುಕ್ತಕಂಠದಿಂದ ಗಾಂಧಿ ಹೊಗಳಿದ ರಾಹುಲ್, ನಾಡಿನ ಪ್ರಗತಿಗೆ ಕೊಡುಗೆ ಅಪಾರವಾಗಿದೆ ಎಂದು ಶ್ಲಾಘಿಸಿ ಅಭಿನಂದಿಸಿದರು. ನಿಮ್ಮಂಥವರ ಸೇವೆಗೆ ದೇಶದ ಉನ್ನತ ಗೌರವಗಳು ಸಲ್ಲಬೇಕು ಎಂದು ಆಶಿಸಿದರು.

ನಂತರ ಖ್ವಾಜಾ ಬಂದಾ ನವಾಜ್ ದಗರ್ಾಕ್ಕೆ ತೆರಳಿ ಚಾದರ್ ಸಮಪರ್ಿಸಿದರು. ನಂತರ ಸಜ್ಜಾದೆ ನಶೀನ್ ಸೈಯದ್ ಖುಸ್ರೋ ಹುಸೇನಿ ಅವರನ್ನು ಭೇಟಿ ಮಾಡಿ ದರ್ಶನ ಪಡೆದರು. ಅವರನ್ನು ದಗರ್ಾದಿಂದ ಸನ್ಮಾನಿಸಲಾಯಿತು.

Comments are closed.