ಕರಾವಳಿ

ಅಕ್ರಮ ಗಾಂಜಾ ಮಾರಾಟ : ಗಾಂಜಾ ಸಹಿತಾ ಆರೋಪಿ ಸೆರೆ

Pinterest LinkedIn Tumblr

ಮಂಗಳೂರು, ಫೆಬ್ರವರಿ 4: ಇಕೊನಾಮಿಕ್ಸ್ ಎಂಡ್ ನಾರ್ಕೋಟಿಕ್ ಕ್ರೈಂ ಪೊಲೀಸರು ಮಾದಕ ದ್ರವ್ಯ ಸಾಗಾಟ / ಮಾರಾಟ ಮಾಡುವವರ ಪತ್ತೆಯ ಬಗ್ಗೆ ಮಂಗಳೂರು ನಗರದಲ್ಲಿ ನಡೆಸಿರುವ ವಿಶೇಷ ಕಾರ್ಯಾಚರಣೆಯಲ್ಲಿ ನಗರದ ಆಡಂಕುದ್ರು ನೇತ್ರಾವತಿ ಸೇತುವೆ ಬಳಿ ಕಣಚ್ಚೂರು ಸೀಸನಿಂಗ್ ಇಂಡಸ್ಟ್ರೀಸ್ ಮುಂಭಾಗದಲ್ಲಿ ಬೈಕ್ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾಸರಗೋಡು ಉಪ್ಪಳಗೇಟ್ ಶಾರದಾನಗರ ಮುಸೋಡಿಯ ಅರುಣ್ ಕುಮಾರ್ (21) ಬಂಧಿತ ಆರೋಪಿ. ಆರೋಪಿಯಿಂದ 20 ಸಾವಿರ ರೂ. ಮೌಲ್ಯದ 1.100 ಕಿ.ಗ್ರಾಂ ಗಾಂಜಾ, 65 ಸಾವಿರ ರೂ. ಮೌಲ್ಯದ ಬೈಕ್, 1 ಸಾವಿರ ರೂ. ಮೌಲ್ಯದ ಮೊಬೈಲ್ ಸಹಿತ 86 ಸಾವಿರ ರೂ. ಮೌಲ್ಯದ ಸೊತ್ತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ರವರ ಆದೇಶದಂತೆ ಡಿಸಿಪಿಗಳಾದ ಹನುಮಂತರಾಯ ಹಾಗೂ ಉಮಾ ಪ್ರಶಾಂತ್ ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಕೆ.ಎಂ.ಶರೀಫ್, ಪಿಎಸ್‌ಐ ಲತಾ ಕೆ.ಎನ್., ಸಿಬ್ಬಂದಿಗಳಾದ ಲಕ್ಷ್ಮೀಶ, ಶಾಜು ನಾಯರ್, ಕಿಶೋರ್ ಪೂಜಾರಿ, ಶ್ರೀಲತಾ, ಜಾಯ್ಸ್, ಭಾಸ್ಕರ ಮುಂತಾದವರು ಪಾಲ್ಗೊಂಡಿದ್ದರು.

Comments are closed.