ಕರ್ನಾಟಕ

ಆಸ್ಪತ್ರೆಯಲ್ಲಿ ಅದಲಿ ಬದಲಿಯಾದ ಮಗು ! ಕೊನೆಗೆ ಇತ್ಯರ್ಥ ಮಾಡಿದ್ದು ಹೇಗೆ ಗೊತ್ತೇ..?

Pinterest LinkedIn Tumblr

ಕಲಬುರಗಿ: ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಅದಲಿ ಬದಲಿ ಪ್ರಕರಣ ಡಿಎನ್ಎ ಪರೀಕ್ಷೆ ಬಳಿಕ ಇದೀಗ ಇತ್ಯರ್ಥಗೊಂಡಿದೆ.

ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಡಿಸೆಂಬರ್ 14 ರಂದು ವೈದ್ಯರು ಮಾಡಿದ್ದ ಎಡವಟ್ಟಿನಿಂದಾಗಿ ನವಜಾತ ಶಿಶುಗಳು ಅದಲು ಬದಲಾಗಿದ್ದವು. ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ನಂದಮ್ಮ ಎಂಬುವವರಿಗೆ ಗಂಡು ಮಗು ಕೊಟ್ಟು, ಗಂಡುವಿಗೆ ಜನ್ಮ ನೀಡಿದ್ದ ನಜ್ಮಾ ಬೇಗಂ ಎಂಬುವವರಿಗೆ ಹೆಣ್ಣು ಮಗುವನ್ನು ಕೊಟ್ಟಿದ್ದರು. ಬಳಿಕ ತಪ್ಪಿನ ಅರಿವಾದ ಸಿಬ್ಬಂದಿ ಮಕ್ಕಳನ್ನು ಅವರ ತಾಯಂದಿರಿಗೆ ನೀಡಲು ಪ್ರಯತ್ನಿಸಿದ್ದರು.

ಆದರೆ, ನಂದಮ್ಮ ಅವರ ಕುಟುಂಬ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ನಂದಮ್ಮ ಗಂಡುವಿಗೆ ಜನ್ಮವನ್ನು ನೀಡಿದ್ದು, ಬೇರೆಯವರು ಹೆತ್ತ ಹೆಣ್ಣು ಮಗುವನ್ನು ಇದೀಗ ನಮಗೆ ನೀಡುತ್ತಿದ್ದಾರೆಂದು ಹೇಳಿ ಪ್ರತಿಭಟನೆ ನಡೆಸಲು ಆರಂಭಿಸಿದ್ದರು.

ಇದರಂತೆ ನಜ್ಮಾ ಬೇಗಂ ಕೂಡ ನಾನು ಗಂಡುವಿಗೆ ಜನ್ಮವನ್ನು ನೀಡಿದ್ದು ನಾನು ಹೆತ್ತ ಮಗುವನ್ನು ಬೇರೆಯವರಿಗೆ ಕೊಡುವುದಿಲ್ಲ ಎಂದು ಹೇಳಿದ್ದರು.

ವೈದ್ಯರು ಎಷ್ಟೇ ಹೇಳಿದರೂ ಕೇಳದ ನಂದಮ್ಮ ಅವರ ಕುಟುಂಬಸ್ಥರು ನಮಗೆ ಗಂಡು ಮಗುವೇ ಬೇಕೆಂದು ಪಟ್ಟು ಹಿಡಿದು ಕುಳಿತಿದ್ದರು. ಇಬ್ಬರೂ ತಾಯಂದಿರು ಮಕ್ಕಳಿಗೆ ಹಾಲುಣಿಸಲು ನಿರಾಕರಿಸಿದ್ದರು. ಸಮಸ್ಯೆ ದೊಡ್ಡದಾದ ಹಿನ್ನಲೆಯಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ರಕ್ತ ಪರೀಕ್ಷೆಯ ವರದಿಯಂತೆ ತಾಯಂದಿರಿಗೆ ನೀಡಲಾಗಿರುವ ಮಕ್ಕಳಿಗೆ ಹಾಲುಣಿಸುವಂತೆ ಸೂಚನೆ ನೀಡಿದ್ದರು.

ಬಳಿಕ ಮಕ್ಕಳ ಹಾಗೂ ಪೋಷಕರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಡಿಎನ್ ಪರೀಕ್ಷೆಗೆ ಕಳುಹಿಸಿದ್ದರು. ಇದೀಗ ಇದರ ವರದಿ ಬಂದಿದ್ದು ನಂದಮ್ಮ ಅವರು ಹೆಣ್ಣುವಿಗೆ ಜನ್ಮ ನೀಡಿದ್ದಾರೆಂದು ತಿಳಿದುಬಂದಿದೆ. ಡಿಎನ್ಎ ಪರೀಕ್ಷೆ ಬಳಿಕವೂ ನಂದಮ್ಮ ಅವರ ಕುಟುಂಬಸ್ಥರು ಮಗುವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಅಲ್ಲದೆ ಮಗುವನ್ನು ಆಸ್ಪತ್ರೆಯಲ್ಲಿಯೇ ಇರಿಸಿದ್ದಾರೆಂದು ತಿಳಿದುಬಂದಿದೆ.

Comments are closed.