ಆರೋಗ್ಯ

ತಾಯಿಯ ಎದೆ ಹಾಲು ಹೆಚ್ಚಾಗಲು ಇಲ್ಲಿದೆ ಸರಳ ಉಪಾಯ…

Pinterest LinkedIn Tumblr

ಬೆಂಗಳೂರು : ಮಕ್ಕಳಿಗೆ ತಾಯಿ ಹಾಲು ತುಂಬಾ ಅಮೂಲ್ಯವಾದದ್ದು. ತಾಯಿ ಹಾಲು ಮಗುವಿಗೆ ಸರಿಯಾಗಿ ದೊರೆಯದಿದ್ದರೆ ಅದರ ಬೆಳವಣಿಗೆ ಹಾಗು ಬುದ್ಧಿಶಕ್ತಿ ಕುಂಠಿತವಾಗುತ್ತದೆ. ಅದಕ್ಕಾಗಿ ತಾಯಿಯ ಹಾಲನ್ನು ಮಗುವಿನ ಪಾಲಿನ ಅಮೃತ ಎನ್ನುತ್ತಾರೆ. ಕೆಲವು ತಾಯಿಯಂದಿರಿಗೆ ಎದೆ ಹಾಲು ಸರಿಯಾಗಿ ಉತ್ಪತ್ತಿಯಾಗುವುದಿಲ್ಲ. ಇದರಿಂದ ಮಗುವಿಗೆ ಸರಿಯಾಗಿ ಹಾಲು ಕೂಡ ಸಿಗುವುದಿಲ್ಲ. ಆದ್ದರಿಂದ ಎದೆ ಹಾಲು ಉತ್ಪತ್ತಿಯಾಗಲು ಕೆಲವು ಮನೆಮದ್ದುಗಳಿವೆ. ಅವುಗಳನ್ನು ಬಳಸಿದರೆ ಈ ಸಮಸ್ಯೆ ದೂರವಾಗುತ್ತದೆ.

ಒಂದು ಲೋಟ ಹಾಲಿಗೆ 1 ಚಮಚ ಜೀರಿಗೆ ಪುಡಿ, 1 ಚಮಚ ಸಕ್ಕರೆಯನ್ನು ಸೇರಿಸಿ ಮಿಕ್ಸ್ ಮಾಡಿ ದಿನ ರಾತ್ರಿ ಮಲಗುವ ಮೊದಲು ತಪ್ಪದೆ ಕುಡಿಯಿರಿ.

ಒಂದು ಲೋಟ ನೀರಿಗೆ 1 ಚಮಚ ಮಂತ್ಯೆ ಕಾಳನ್ನು ಹಾಕಿ ರಾತ್ರಿಯಿಡಿ ನೆನೆಸಿಡಿ. ಬೆಳಿಗ್ಗೆ ಆ ಮಿಶ್ರಣವನ್ನು ಕುದಿಸಿ ನಂತರ ಆರಿಸಿ ಸೋಸಿ ಕುಡಿಯಿರಿ. ಇದರಿಂದ ತಾಯಿ ಹಾಲು ಬೇಗ ಹೆಚ್ಚುತ್ತದೆ.

ಒಂದು ಲೋಟ ಬಿಸಿ ನೀರಿಗೆ 1 ಚಮಚ ಸೋಂಪು ಕಾಳನ್ನು ಹಾಕಿ ½ ಗಂಟೆ ನೆನೆಸಿಡಿ ನಂತರ ನೀರನ್ನು ಸೋಸಿ ಕುಡಿಯಿರಿ.’

ಪ್ರತಿದಿನ ಹೀಗೆ ಮಾಡುವುದರಿಂದ ತಾಯಿ ಹಾಲು ವೃದ್ಧಿಯಾಗಿ ಮಕ್ಕಳ ಬೆಳವಣಿಗೆಗೆ ಸಹಾಯಕವಾಗುತ್ತದೆ.

Comments are closed.