ಅಂತರಾಷ್ಟ್ರೀಯ

ನಿಜವಾದ ಪ್ರೀತಿ ಇದು…ಆಕೆ ಸಾಯುವ 18 ಗಂಟೆ ಮೊದಲು ಆಸ್ಪತ್ರೆಯ ಬೆಡ್ ಮೇಲೆಯೇ ಮದುವೆಯಾದ !

Pinterest LinkedIn Tumblr

ವಾಷಿಂಗ್ಟನ್: ಕ್ಯಾನ್ಸರ್ ಪೀಡಿತ ಮಹಿಳೆಯೊಬ್ಬರು ಆಸ್ಪತ್ರೆಯ ಬೆಡ್ ಮೇಲೆಯೇ ಮದುವೆಯಾಗಿ, ನಂತರ 18 ಗಂಟೆಯ ಬಳಿಕ ಸಾವನ್ನಪ್ಪಿರುವ ಮನಕಲಕುವ ಘಟನೆ ಡಿಸೆಂಬರ್ 21 ರಂದು ಅಮೆರಿಕದ ಹಾರ್ಟ್ ಫೋರ್ಡ್ ನಗರದ ಫ್ರಾನ್ಸಿಸ್ ಆಸ್ಪತ್ರೆಯಲ್ಲಿ ನಡೆದಿದೆ.

ಹೀದರ್ ಮೋಶರ್ ಸಾವನ್ನಪ್ಪಿದ ನವ ವಧು. ಹೀದರ್ ಸ್ತನ ಕ್ಯಾನ್ಸರ್ ನಾಲ್ಕನೇ ಹಂತದ ಸ್ಥಿತಿಯನ್ನು ತಲುಪಿದ್ದ ಹಿನ್ನೆಲೆಯಲ್ಲಿ ವೈದ್ಯರು ಬದುಕುವುದು ಕಷ್ಟ ಎಂದು ತಿಳಿಸಿದ್ದರು. ಈ ಕಾರಣಕ್ಕೆ ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ವಧುವಿನಂತೆ ಶ್ವೇತ ವರ್ಣದ ಗೌನ್ ಧರಿಸಿ ಆಸ್ಪತ್ರೆಯ ಬೆಡ್ ಮೇಲೆಯೇ ಹೀದರ್ ತಮ್ಮ ಬಹು ದಿನಗಳ ಗೆಳಯ ಡೇವಿಡ್ ಮೋಶರ್ ನೊಂದಿಗೆ ಉಂಗುರ ಬದಲಿಸಿಕೊಳ್ಳುವ ಮೂಲಕ ಮದುವೆಯಾಗಿದ್ದರು. ಮದುವೆ ಬಳಿಕ 18 ಗಂಟೆಯಲ್ಲಿಯೇ 31 ವರ್ಷದ ಮನಶಾಸ್ತ್ರಜ್ಞೆ ಹೀದರ್ ಸಾವನ್ನಪ್ಪಿದ್ದಾರೆ.

ಪ್ರೀತಿ ಶುರುವಾಗಿದ್ದು ಹೀಗೆ: ಹೀದರ್ ನನಗೆ 2015ರಲ್ಲಿ ಸ್ವಿಂಗ್ ಡ್ಯಾನ್ಸಿಂಗ್ ಕ್ಲಾಸ್‍ನಲ್ಲಿ ಪರಿಚಯವಾಗಿದ್ದಳು. ಅಂದಿನಿಂದ ನಮ್ಮಿಬ್ಬರ ಒಡನಾಟ ಆರಂಭವಾಗಿತ್ತು. ಡಿಸೆಂಬರ್ 23, 2016ರಂದು ನಾನು ಆಕೆಗೆ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಲು ಹೋದಾಗ ಹೀದರ್‍ಗೆ ಕ್ಯಾನ್ಸರ್ ಇರೋದು ಗೊತ್ತಾಯಿತು. ಆದರೂ ನಾನು ವಿಚಲಿತನಾಗದೇ ಪ್ರಪೋಸ್ ಮಾಡಿ ಆಕೆಯನ್ನು ಕುದುರೆ ಗಾಡಿಯೊಂದರಲ್ಲಿ ಕರೆದುಕೊಂಡು ತಿರುಗಾಡಿದೆ. ಇನ್ನು ಮುಂದೆ ಹೀದರ್ ಜೀವನದ ರಸ್ತೆಯಲ್ಲಿ ಒಂಟಿಯಾಗಬಾರದು ಅಂತಾ ನಿರ್ಧರಿಸಿದೆ ಎಂದು ಡೇವಿಡ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಶಸ್ತ್ರ ಚಿಕಿತ್ಸೆ ಮತ್ತು ಕೀಮೊಥೆರಪಿ ಬಳಿಕವೂ ಹೀದರ್ ಸ್ತನ ಕ್ಯಾನ್ಸರ್ ನಾಲ್ಕನೇಯ ಹಂತವನ್ನು ತಲುಪಿದರು. ಕ್ಯಾನ್ಸರ್ ನಾಲ್ಕನೇ ಹಂತಯ ತಲುಪಿದ ಬಳಿಕ ಹೀದರ್ ರನ್ನು ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್ ನಲ್ಲಿ ಇರಿಸಲಾಗಿತ್ತು. ಹೀದರ್ ಮತ್ತು ಡೇವಿಡ್ ಕುಟುಂಬಸ್ಥರು ಇಬ್ಬರ ಮದುವೆಯನ್ನು 2017ರ ಡಿಸೆಂಬರ್ 30 ರಂದು ನಿಗದಿಗೊಳಿಸಿದ್ದರು. ಆದರೆ ವೈದ್ಯರು ಹೀದರ್ ಬದುಕುಳಿಯುವ ಸಾಧ್ಯತೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಮದುವೆ ಬೇಗ ನಿಗದಿ ಮಾಡುವಂತೆ ಸೂಚಿಸಿದರು.

ವೈದ್ಯರ ಸಲಹೆಯ ಮೇರೆಗೆ ಡಿಸೆಂಬರ್ 22ರಂದು ಮದುವೆ ನಿಗದಿ ಮಾಡಲಾಯಿತು. ಹೀದರ್ ಆಸ್ಪತ್ರೆಯ ಬೆಡ್ ಮೇಲೆ ವೈಟ್ ಗೌನ್ ಧರಿಸಿ ವಧುವಾಗಿ ರೆಡಿಯಾದರು. ಇತ್ತ ಡೇವಿಡ್ ಕಪ್ಪು ಬಣ್ಣದ ಸೂಟ್ ಧರಿಸಿ ಆಸ್ಪತ್ರೆಗೆ ಬಂದು ಆಪ್ತ ಬಂಧುಗಳ ಸಮ್ಮುಖದಲ್ಲಿಯೇ ಹೀದರ್ ಬೆರಳಿಗೆ ಉಂಗುರು ತೊಡಿಸಿದರು.

ದಿನಗಳ ಪುನಾರವರ್ತನೆ: ಡೇವಿಡ್ ಬಹು ದಿನಗಳ ಗೆಳತಿ ಹೀದರ್ ಗೆ ಉಂಗುರು ತೊಡಿಸುವ ವೇಳೆ ನೆರೆದಿದ್ದ ಕುಟುಂಬಸ್ಥರೆಲ್ಲಾ ಭಾವುಕರಾಗಿರುವುದನ್ನು ಫೋಟೋಗಳಲ್ಲಿ ಕಾಣಬಹುದು. ಮದುವೆ ಆದ ಬಳಿಕ ಹೀದರ್ 18 ಗಂಟೆ ಬಳಿಕ ಅಂದರೆ ಡಿಸೆಂಬರ್ 23 ರಂದು ಸಾವನ್ನಪ್ಪಿದ್ದಾರೆ. ಹೀದರ್ ಅಂತ್ಯ ಸಂಸ್ಕಾರವನ್ನು ಈ ಮೊದಲು ಮದುವೆಗೆ ನಿಶ್ಚಯ ಮಾಡಿದ್ದ ದಿನಾಂಕವಾದ ಡಿಸೆಂಬರ್ 30ರಂದು ಮಾಡಲಾಗಿದೆ.

Comments are closed.