ಚಿಕ್ಕಮಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನ ಆಶೀರ್ವಾದ ಮಾಡಿ ಸಂಪೂರ್ಣ ಬಹುಮತದಿಂದ ನಮ್ಮದೇ ಸರ ಕಾರ ರಚನೆಯಾದರೆ ಉತ್ತಮ ಆಡಳಿತ ನೀಡುತ್ತೇವೆ. ಇಲ್ಲ ದಿದ್ದರೆ ವಿರೋಧ ಪಕ್ಷದ ಸ್ಥಾನದಲ್ಲಿ ಕೂತು ಕೆಲಸ ಮಾಡು ತ್ತೇವೆ.
ಯಾರೊಂದಿಗೂ ಕೈ ಜೋಡಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಘೋಷಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಹಿಂದೆ ಧರ್ಮಸಿಂಗ್ ಅವರಿಗೆ ಬೆಂಬಲ ಕೊಟ್ಟು ನೋಡಿದ್ದೇನೆ. ನನ್ನ ಮಗ
ಬಿಜೆಪಿ ಜತೆ ಸಖ್ಯ ಬೆಳೆಸಿಯೂ ಸಾಕಾಗಿದೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ಬಹುಮತ ದೊರೆಯ ದಿದ್ದಲ್ಲಿ ಕಾಂಗ್ರೆಸ್ ಅಥವಾ
ಬಿಜೆಪಿ ಯಾರನ್ನೂ ಬೆಂಬಲಿಸದೆ ಮರ್ಯಾದೆ ಯಿಂದ ವಿರೋಧ ಪಕ್ಷದ ಸ್ಥಾನದಲ್ಲಿ ಕೂತು ಕೆಲಸ ಮಾಡಲಿದೆ’ ಎಂದು ಹೇಳಿದರು.
ನನ್ನಿಂದ ಮುಖ್ಯಮಂತ್ರಿ ಹುದ್ದೆ ತಪ್ಪಿಹೋಯಿತು ಎಂದು ಸಿದ್ದರಾಮಯ್ಯ ಎಲ್ಲ ಕಡೆ ಹೇಳಿಕೊಂಡು ಬರುತ್ತಾರೆ. ಆದರೆ, ವಾಸ್ತವವಾಗಿ 1996ರಲ್ಲಿ 38 ಮಂದಿ ಲಿಂಗಾಯತರಿದ್ದರು. 4 ಮಂದಿ ಇವರ ಸಮುದಾಯದವರಿದ್ದರು, ಹೆಗಡೆ ಇವರಿಗೆ ಅಧಿಕಾರ ನೀಡುತ್ತಿದ್ದರಾ?
ನಾನು ಪ್ರಧಾನಿಯಾಗಿ ಹೋಗಿರುತ್ತಿದ್ದೆ. ನಂತರ ನಾಲ್ಕು ದಿನ ಆದ ಮೇಲೆ ಸಿದ್ದರಾಮಯ್ಯನನ್ನು ಮನೆಗೆ ಕಳುಹಿಸುತ್ತಿದ್ದರು.
●ದೇವೇಗೌಡ, ಮಾಜಿ ಪ್ರಧಾನಿ
-ಉದಯವಾಣಿ