ರಾಷ್ಟ್ರೀಯ

ತ್ರಿವಳಿ ತಲಾಕ್‌ ಕರಡು ವಿಧೇಯಕಕ್ಕೆ ಜೈ ಎಂದ ಉ.ಪ್ರದೇಶ

Pinterest LinkedIn Tumblr


ಲಖನೌ: ತ್ರಿವಳಿ ತಲಾಕ್‌ನ್ನು ದಂಡನಾರ್ಹ ಮತ್ತು ಜಾಮೀನುರಹಿತ ಅಪರಾಧವೆಂದು ಘೋಷಿಸಿದ ಕೇಂದ್ರದ ಕರಡು ವಿಧೇಯಕವನ್ನು ಉತ್ತರ ಪ್ರದೇಶ ಸರಕಾರ ಅನುಮೋದಿಸಿದೆ. ಈ ಮೂಲಕ ವಿಧೇಯಕಕ್ಕೆ ಸೈ ಎಂದ ಮೊದಲ ರಾಜ್ಯವಾಗಿ ದಾಖಲಾಗಿದೆ.

ಮೂರು ಬಾರಿ ತಲಾಕ್‌ ಎಂದು ಹೇಳುವ ಮೂಲಕ ಪತ್ನಿಗೆ ವಿಚ್ಛೇದನೆ ನೀಡಲು ಮುಂದಾಗುವ ಮುಸ್ಲಿಂ ವ್ಯಕ್ತಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲು ಪ್ರಸ್ತಾವಿತ ಕಾನೂನಿನಲ್ಲಿ ಉದ್ದೇಶಿಸಿಸಲಾಗಿದೆ. ಮಂಗಳವಾರ ರಾತ್ರಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಕರಡಿಗೆ ಅನುಮೋದನೆ ನೀಡಲಾಯಿತು.

ಕೇಂದ್ರದ ಕರಡು ವಿಧೇಯಕಕ್ಕೆ ರಾಜ್ಯಗಳು ಅನುಮೋದನೆ ನೀಡಿದ ಬಳಿಕ ಚಳಿಗಾಲದ ಅಧಿವೇಶನದಲ್ಲಿ ಅದನ್ನು ಮಂಡಿಸಲಾಗುತ್ತದೆ.

ಉತ್ತರ ಪ್ರದೇಶದಲ್ಲಿ ಈ ವರ್ಷ 243 ತ್ರಿವಳಿ ತಲಾಕ್‌ ಪ್ರಕರಣಗಳು ನಡೆದಿವೆ. ಸುಪ್ರೀಂಕೋಟ್‌ ಆದೇಶಕ್ಕೆ ಮೊದಲು 177 ಮತ್ತು ನಂತರ 66 ಪ್ರಕರಣಗಳು ನಡೆದಿವೆ.

Comments are closed.