ಶಿರೂರ: 10 ಕ್ವಿಂಟಲ್ ಜೋಳದ ಚೀಲಗಳನ್ನು ಬಂಡಿ ಮೇಲೆ ಹಾಕಿಕೊಂಡು 11ಕಿ.ಮೀ. ಬಂಡಿ ಎಳೆಯುವುದು ಸಾಧ್ಯವೇ..?
ಇದು ಸಾಧ್ಯ ಎಂದು ತೋರಿಸಿಕೊಟ್ಟಿದ್ದಾರೆ 22ರ ಹರೆಯದ ಸಾಹಸಿ ಯಲ್ಲಪ್ಪ ಹಿರೇಕುಂಬಿ.
ಇಲ್ಲಿಯ ಶ್ರೀ ಸಿದ್ದೇಶ್ವರ ಹಾಗೂ ಲಿಂ.ಸಿದ್ಧಲಿಂಗ ಶ್ರೀಗಳ ಜಾತ್ರೆಯ ಅಂಗವಾಗಿ ಸೋಮವಾರ ಹಮ್ಮಿಕೊಂಡ ಈ ಸಾಹಸ ಪ್ರದರ್ಶನದಲ್ಲಿ ಯಲ್ಲಪ್ಪ ಶಿರೂರಿನಿಂದ ಕಮತಗಿಯವರೆಗೆ ಬಂಡಿ ಎಳೆದು ಸೈ ಎನಿಸಿಕೊಂಡಿದ್ದಾನೆ. ಬಸ್ ನಿಲ್ದಾಣ ಸಮೀಪದ
ಸಿದ್ಧಲಿಂಗ ಶ್ರೀಗಳ ಮೂರ್ತಿಗೆ ಪೂಜೆ ಸಲ್ಲಿಸಿ ಹಾದಿ ಬಸವೇಶ್ವರ ದೇವಸ್ಥಾನ ಮುಂಭಾಗ ಬೆಳಗ್ಗೆ 7.30ಕ್ಕೆ ನೊಗವನ್ನು ಹೆಗಲೇರಿಸಿಕೊಂಡು ಶಿರೂರಿನಿಂದ ಹೊರಟ ಈತ ಬೆಳಗ್ಗೆ 9.40ಕ್ಕೆ 11 ಕಿ.ಮೀ. ಅಂತರದ ಕಮತಗಿಯ ಶ್ರೀ ಹೊಳೆ ಹುಚ್ಚೇಶ್ವರ
ಮಠ ತಲುಪಿ ಎಲ್ಲರ ಗಮನ ಸೆಳೆದಿದ್ದಾನೆ. ಗ್ರಾಮಸ್ಥರು ಯುವಕನ ಸಾಹಸಕ್ಕೆ ಮೆರವಣಿಗೆ ಮಾಡಿ ಸನ್ಮಾನಿಸಿ ಕಾಣಿಕೆ ನೀಡಿದ್ದಾರೆ.
-ಉದಯವಾಣಿ