ಕರಾವಳಿ

ಬೆಳ್ತಂಗಡಿಯಲ್ಲಿ ಹತ್ತು ಮಂದಿಯ ತಂಡದಿಂದ ಮೂವರ ಮೇಲೆ ಹಲ್ಲೆ : ಅಸ್ಪತ್ರೆಗೆ ದಾಖಲು

Pinterest LinkedIn Tumblr

ಮಂಗಳೂರು, ಡಿಸೆಂಬರ್ 05 : ಮಸೀದಿ ವಿಚಾರಕ್ಕೆ ಸಂಬಂಧ ಪಟ್ಟಂತೆ ಎರಡು ತಂಡಗಳ ನಡುವೆ ಇದ್ದ ಮನಸ್ತಾಪ ವಿಕೋಪಕ್ಕೆ ತಿರುಗಿದ್ದು, ತಂಡವೊಂದು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಗೇರುಕಟ್ಟೆ ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು.ಹಳೆಯ ದ್ವೇಷದ ಹಿನ್ನೆಲೆಯಲ್ಲಿ 10 ಜನರ ತಂಡ 3 ಯುವಕರ ಮೇಲೆ ದಾಳಿ ನಡೆಸಿದೆ. ಲಾಂಗು ಮಚ್ಚುಗಳಿಂದ ತಂಡ ದಾಳಿ ನಡೆಸಿದದ್ದು ಗೇರುಕಟ್ಟೆ ಬಸ್ ಸ್ಟಾಂಡ್ ಬಳಿ ಸಾರ್ವಜನಿಕರ ಎದುರೇ ಗ್ಯಾಂಗ್ ವಾರ್ ನಡೆದಿದೆ.

ಹಲ್ಲೆಯಿಂದ ಗಾಯಗೊಂಡವರನ್ನು ಗೇರುಕಟ್ಟೆ ನಿವಾಸಿಗಳಾದ ತಸ್ಲೀಂ,ಹಾರಿಸ್,ಶಿಹಾಬ್ ಎಂದು ಗುರುತಿಸಲಾಗಿದೆ.ತಸ್ಲೀಮ್ ಹಾಗೂ ಹಾರಿಸ್ ಸಹೋದರರಾಗಿದ್ದು ಇವರು ಗೇರುಕಟ್ಟೆ ಬಸ್ ತಂಗುದಾಣದ ಸಮೀಪದ ಅಂಗಡಿಯೊಂದರಲ್ಲಿ ಕುಳಿತಿದ್ದರು. ಅಲ್ಲಿಗೆ ಬಂದ ತಂಡ ತಸ್ಲೀಮ್‍, ಸಮೀಪದಲ್ಲೇ ಇದ್ದ ಹಾರಿಸ್ ಹಾಗು ಶಿಹಾಬ್‍ ರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ ಎನ್ನಲಾಗಿದೆ.

ತಸ್ಲೀಮ್ ನ ತಲೆ, ಮುಖಕ್ಕೆ ಗಂಭೀರ ಗಾಯಗಳಾದ್ದು, ಹಾರಿಸ್ ನ ತಲೆ ಹಾಗೂ ಕಾಲಿಗೆ ಗಾಯವಾಗಿದೆ. ಗಾಯಾಳುಗಳನ್ನು ಮಂಗಳೂರಿನ ಖಾಸಾಗಿ ಆಸ್ಪತ್ರೆ ಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಗೇರುಕಟ್ಟೆ ನಿವಾಸಿಗಳಾದ ಯಾಕುಬ್, ಉಮರಬ್ಬ, ರವೂಫ್, ಇರ್ಫಾನ್, ರಿಝ್ವಾನ್, ಅಬೂಬಕರ್, ಆದಂ ಶಾಫಿ, ಹೈದರ್ ಹಾಗೂ ಇತರರ ತಂಡ ಹಲ್ಲೆ ನಡೆಸಿರುವುದಾಗಿ ಗಾಯಗೊಂಡವರು ಬೆಳ್ತಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮಸೀದಿಯ ವಿಚಾರದಲ್ಲಿ ಎರಡೂ ತಂಡಗಳ ನಡುವೆ ಮನಸ್ತಾಪ ವಿದ್ದು ಮೊನ್ನೆ ಭಾನುವಾರದಂದು ಈ ಎರಡು ತಂಡಗಳ ನಡುವೆ ಘರ್ಷಣೆ ಸಂಭವಿಸಿತ್ತು ಎಂದು ಹೇಳಲಾಗಿದೆ.

ಬೆಳ್ತಂಗಡಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

Comments are closed.