ಬೆಂಗಳೂರು: ಫೈರಿಂಗ್ ಸ್ಟಾರ್ ಹುಚ್ಚವೆಂಕಟ್ ಮತ್ತೆ ಸುದ್ದಿಯಾಗಿದ್ದು, ಈ ಬಾರಿ ಯುವಕನೊಬ್ಬನ ಕೈಯಲ್ಲಿ ಹೆಲ್ಮೆಟ್ ಏಟು ತಿಂದು.
ಸದಾ ಕಿಡಿ ಕಾರುತ್ತಾ ಸುದ್ದಿಯಾಗುವ ವೆಂಕಟ್ ನವೆಂಬರ್ 29 ರಂದು ಯಶವಂತಪುರದಲ್ಲಿ ಊಟ ತರಲೆಂದು ತೆರಳಿದಾಗ ಧೃಡಕಾಯದ ಯುವಕನೊಬ್ಬ ವಿನಾಕಾರಣ ಕಿರಿಕ್ ಮಾಡಿ ಹೆಲ್ಮೆಟ್ನಿಂದ ಹುಚ್ಚ ವೆಂಕಟ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಈ ಬಗ್ಗೆ ಹುಚ್ಚ ವೆಂಕಟ್ ಯಾವುದೇ ದೂರು ನೀಡಿರುವ ಬಗ್ಗೆ ವರದಿಯಾಗಿಲ್ಲ. ಮಾಧ್ಯಮದವರು ಕೇಳಿದಾಗ ‘ಇಂಥಹದ್ದು ಯಾವಗಲೂ ನನ್ನ ಲೈಫಲ್ಲಿ ಆಗುತ್ತಾ ಇರುತ್ತದೆ’ಎಂದಿದ್ದಾರೆ.
ಅದಾಗ್ಯೂ ಹುಚ್ಚ ವೆಂಕಟ್ ಅವರು ಹಲ್ಲೆ ಬಳಿಕ ಸುಮ್ಮನೆ ಹೋಗಿರುವುದು ಮತ್ತು ಇರುವುದು ಅಚ್ಚರಿ ಮೂಡಿಸಿದೆ.
-ಉದಯವಾಣಿ