ಕರ್ನಾಟಕ

ಗಂಟಲು ನೋವಿಗೆ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುತ್ತೀರಾ? ಹಾಗಿದ್ದರೆ ಇದನ್ನು ಓದಿ!

Pinterest LinkedIn Tumblr


ಬೆಂಗಳೂರು: ಗಂಟಲು ನೋವು, ಕೆಮ್ಮು ಬಂದ ತಕ್ಷಣ ನಾವು ಮೊದಲು ಮಾಡುವ ಮನೆ ಮದ್ದು ಎಂದರೆ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದು. ಆದರೆ ಹೀಗೆ ಮಾಡುವ ಮೊದಲು ಕ್ಷಣ ಯೋಚಿಸಿ.

ಆದರೆ ಗಂಟಲು ನೋವು ಬಂದ ತಕ್ಷಣ ಉಪ್ಪು ನೀರಿನಲ್ಲೇ ಬಾಯಿ ಮುಕ್ಕಳಿಸಬೇಕೆಂದಿಲ್ಲ. ಯಾಕೆಂದರೆ ಕೆಲವರಿಗೆ ಸೋಡಿಯಂ ಅಲರ್ಜಿಯಿರುತ್ತದೆ. ಅಂತಹವರಿಗೆ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದರಿಂದ ಪ್ರಯೋಜನವಾಗದು.

ಅಷ್ಟೇ ಅಲ್ಲ, ಇದು ಒಳ್ಳೆಯ ಉಪಾಯವೂ ಅಲ್ಲ. ವಿಪರೀತ ಕೆಮ್ಮಿದಾಗ ನಮ್ಮ ಗಂಟಲಿನಲ್ಲಿ ಒಂದು ರೀತಿಯ ಕೆರೆತ ಅಥವಾ ಗಾಯವಾಗಿರುತ್ತದೆ. ಈ ಸಂದರ್ಭದಲ್ಲಿ ಅದಕ್ಕೆ ಉಪ್ಪು ನೀರಿನಂತಹ ಕ್ಷಾರ ದ್ರಾವಣ ಹಾಕಿ ಮತ್ತಷ್ಟು ಉರಿಯಾಗಬಹುದು. ನೋವು ಹೆಚ್ಚಬಹುದು. ಹಾಗಾಗಿ ಉಪ್ಪು ನೀರಿಗಿಂತ ಖಾಲಿ ಹದ ಬಿಸಿ ನೀರಿನಲ್ಲಿ ಬಾಯಿ ಮುಕ್ಕಳಿಸಿದರೆ ಒಳ್ಳೆಯದು.

Comments are closed.