ರಾಷ್ಟ್ರೀಯ

ಈ ‘ಲೇಡಿ ಪೊಲೀಸ್‌’ ಲುಕ್‌ಗೆ ದಂಗಾದ ನೆಟ್ಟಿಗರು

Pinterest LinkedIn Tumblr


ಹೊಸದಿಲ್ಲಿ: ಇಂಟರ್‌ನೆಟ್‌ ಮತ್ತು ಸಾಮಾಜಿಕ ಜಾಲತಾಣದಲ್ಲಿ ನಾವು ಪ್ರತನಿತ್ಯ ವೈರಲ್‌ ಸುದ್ದಿಗಳನ್ನು ನೋಡುತ್ತಲೇ ಇರುವತ್ತೇವೆ. ಆದರೆ ಇದರೆ ಇದು ಎಷ್ಟರ ಮಟ್ಟಿಗೆ ನಿಜ ಎಂಬುದನ್ನು ನಾವೇ ಪರೀಕ್ಷಿಸಿಕೊಳ್ಳಬೇಕು. ಇದಕ್ಕೆ ಪೂರಕವಾಗುವ ವಿಚಾರವೆಂದರೆ ಇತ್ತೀಚೆಗೆ ಭಾರೀ ಸಂಚಲನ ಮೂಡಿಸಿರುವ ಪಂಜಾಬ್‌ನ ಸುಂದರ ಲೇಡಿ ಪೊಲೀಸ್‌ ಒಬ್ಬರ ಫೋಟೋ.

ಹೌದು! ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವೀಟರ್, ವಾಟ್ಸ್ಯಾಪ್‌ಗಳಲ್ಲಿ ಪೊಲೀಸ್‌ ಗೆಟಪ್‌ನಲ್ಲಿರುವ ಯುವತಿಯೊಬ್ಬಳ ಚಿತ್ರಕ್ಕೆ ‘ಹರ್ಲೀನ್‌ ಮನ್‌ ಪಂಜಾಬಿ ಪೊಲೀಸ್‌, ನನ್ನನ್ನು ಬಂಧಿಸಿ’, ‘ಹರ್ಲೀನ್ ಮನ್ ಪಂಜಾಬಿನ ಪೊಲೀಸ್ ಅಧಿಕಾರಿಯಾದಾಗಿನಿಂದ ಜನರು ಜೈಲು ಸೇರಲು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ!’ ಎಂದು ಅಡಿ ಬರಹಗಳ ಮೂಲಕ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿದೆ. ಹೆಚ್ಚಿನ ಜನ ಈಕೆಯನ್ನು ಪೊಲೀಸ್‌ ಅಧಿಕಾರಿಯೆಂದೇ ನಂಬಿದ್ದಾರೆ ಕೂಡಾ.

ಆದರೆ ಸತ್ಯವೇ ಬೇರೆಯದಾಗಿದೆ, ಪೋಟೋದಲ್ಲಿ ಪೊಲೀಸ್ ವಸ್ತ್ರ ಧರಿಸಿರುವ ಮಹಿಳೆ ಹರ್ಲೀನ್ ಮನ್ ಅಲ್ಲ, ಬದಲಾಗಿ ಪೋಟೋದಲ್ಲಿರುವವರು ಬಾಲಿವುಡ್ ನಟಿ, ಕೈನಾಥ್ ಅರೋರಾ. ಆಕೆ ತೊಟ್ಟಿದ್ದ ಬ್ಯಾಡ್ಜ್ ಮೇಲೆ ಹರ್ಲೀನ್ ಮನ್ ಅನ್ನೋ ಹೆಸರಿತ್ತು. ಹೀಗಾಗಿ ಈಕೆಯನ್ನು ಪಂಜಾಬ್‌ ಪೊಲೀಸ್‌ ಎಂದೇ ಎಲ್ಲರೂ ನಂಬಿದ್ದಾರೆ. ಆದರೆ ಈಕೆ ‘ಜಗ್ಗಾ ಜ್ಯೂಂಡೆ’ ಎಂಬ ಪಂಜಾಬಿ ಸಿನಿಮಾ ಚಿತ್ರೀಕರಣದ ವೇಳೆ ಈ ರೀತಿ ಪೊಲೀಸ್ ವಸ್ತ್ರ ಧರಿಸಿದ್ದರು. ಇದು ವೈರಲ್‌ ಆಗಿತ್ತು.

Comments are closed.