ಕರ್ನಾಟಕ

ಹೆಂಡತಿ ಸ್ನಾನದ ದೃಶ್ಯ ತೋರಿಸಿ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನಿಗೆ ಧರ್ಮದೇಟು

Pinterest LinkedIn Tumblr

ಕುಣಿಗಲ್: ಹೆಂಡತಿ ಸ್ನಾನ ಮಾಡುವ ದೃಶ್ಯಗಳನ್ನು ವೀಡಿಯೋ ಮಾಡಿಕೊಂಡು ಶಾಲೆಯಲ್ಲಿ ಮಕ್ಕಳಿಗೆ ತೋರಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಶಿಕ್ಷಕನಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ತಾಲೂಕಿನ ವಡ್ಡರಕುಪ್ಪೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ದಯಾನಂದಮೂರ್ತಿ ಗ್ರಾಮಸ್ಥರಿಂದ ಗೂಸಾ ತಿಂದ ವಿಕೃತ ಕಾಮಿ ಶಿಕ್ಷಕ.

ಈ ಕಾಮುಕ ಶಿಕ್ಷಕ ಒದೆ ತಿನ್ನುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕುಣಿಗಲ್ ಪಟ್ಟಣದ ಕೋಟೆ ಬಡಾವಣೆಯ ಸರಕಾರಿ ಶಾಲೆಯಲ್ಲಿ ಇಂತದೇ ಘನಂದಾರಿ ಕೆಲಸ ಮಾಡಿ ಸಾರ್ವಜನಿಕರಿಂದ ಧರ್ಮದೇಟು ತಿಂದು ವರ್ಗಾವಣೆಯಾಗಿದ್ದ. ಈಗ ಇದೇ ಚಾಳಿ ಮುಂದುವರೆಸಿ ಮತ್ತೆ ಗೂಸಾ ತಿಂದಿದ್ದಾನೆ.
(VK)

Comments are closed.