ಕರ್ನಾಟಕ

ಮನೆಯೊಡೆಯ’ ಕಾಯ್ದೆ ಜಾರಿಗೆ ದಾರಿ ಸುಗಮ

Pinterest LinkedIn Tumblr


ವಿಧಾನ ಸಭೆ: ಕ್ಯಾಂಪ್‌, ಹಟ್ಟಿ, ಹಾಡಿ ಸೇರಿದಂತೆ ದಾಖಲಾಗದ ವಾಸಿಸುವ ಸ್ಥಳಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ, ಅಲ್ಲಿ ವಾಸಿಸುವವನನ್ನೇ ಮನೆಯೊಡೆಯನನ್ನಾಗಿ ಮಾಡುವ ಉದ್ದೇಶದ ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ವಿಧೇಯಕವನ್ನು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ವಿಧೇಯಕ ಮಂಡಿಸಿದರು. ಲಂಬಾಣಿ ತಾಂಡಾ, ಗೊಲ್ಲರಹಟ್ಟಿ,
ವಡ್ಡರಹಟ್ಟಿ, ಕುರುಬರ ಹಟ್ಟಿ, ನಾಯಕಹಟ್ಟಿ, ಮಂಜಾರೆ ಗ್ರಾಮ,ಹಾಡಿ, ದೊಡ್ಡಿ,ಪಾಳ್ಯ,ಕ್ಯಾಂಪ್‌, ಕಾಲೋ
ನಿಯಂಥ ದಾಖಲಾಗದ ವಾಸಿಸುವ ಸ್ಥಳಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲಾಗುವುದು. ಅಲ್ಲಿ ಸರ್ಕಾರಕ್ಕೆ ಸೇರಿದ ಭೂಮಿಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವಾಸದ ಮನೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ಭೂಮಿಯನ್ನು (4,000 ಚದರಡಿ) ಸಕ್ರಮಗೊಳಿಸುವ ಉದ್ದೇಶದಿಂದ ಈ ವಿಧೇಯಕ ಮಂಡಿಸಲಾಗಿದೆ. ಇದರಿಂದ 5 ಲಕ್ಷ ಕುಟುಂಬಗಳಿಗೆ ಭೂಮಿಯ ಹಕ್ಕು ದೊರೆಯಲಿದೆ ಎಂದು ಅಂದಾಜು ಮಾಡಲಾಗಿದೆ.

ಇತ್ತೀಚೆಗೆ “ವಾಸಿಸುವವನೇ ಮನೆಯೊಡೆಯ’ ಕುರಿತಂತೆ ಕಾಯ್ದೆಗೆ ತಿದ್ದುಪಡಿ ಮಾಡಿರುವ ಪ್ರಸ್ತಾಪಕ್ಕೆ ರಾಷ್ಟ್ರಪತಿಯವರ ಅಂಕಿತವೂ ದೊರೆತಿತ್ತು. ಈಗ ಕಂದಾಯ ರಹಿತ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ “ವಾಸಿಸುವವನೇ ಮನೆಯೊಡೆಯ’ನನ್ನಾಗಿ ಮಾಡಲು ಮತ್ತೂಂದು ತಿದ್ದುಪಡಿ ವಿಧೇಯಕ ಮಂಡಿಸಲಾಗಿದೆ.

ಯಾರಿಗಿಲ್ಲ ಭಾಗ್ಯ?: ಆದರೆ, ನೈಸರ್ಗಿಕ ಜಲ ಹರಿವು ಅಥವಾ ಕಣಿವೆ, ರಸ್ತೆಗಳು, ಹೆದ್ದಾರಿಗಳು, ಅರಣ್ಯ ಭೂಮಿ,
ಉದ್ಯಾನ, ಹೈಟೆನÒನ್‌ ವಿದ್ಯುತ್‌ ಮಾರ್ಗಗಳ ಕೆಳಗಿನ ಸ್ಥಳ, ವಿಮಾನ ನಿಲ್ದಾಣ ಸುತ್ತಲಿನ ಪ್ರದೇಶ, ಪಾರಂಪರಿಕ
ಸ್ಥಳಗಳಲ್ಲಿ ವಾಸವಾಗಿದ್ದರೆ ಅದನ್ನು ಸಕ್ರಮ ಮಾಡುವಂತಿಲ್ಲ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.

-ಉದಯವಾಣಿ

Comments are closed.