ರಾಷ್ಟ್ರೀಯ

AMU ಪ್ರೊಫೆಸರ್‌ನಿಂದ ತ್ರಿವಳಿ ತಲಾಕ್: ಪತ್ನಿಯಿಂದ ಆತ್ಮಹತ್ಯೆ ಬೆದರಿಕೆ

Pinterest LinkedIn Tumblr


ಹೊಸದಿಲ್ಲಿ: ಕಳೆದ ಎರಡು ತಿಂಗಳ ಹಿಂದೆಯಷ್ಟೇ ಸುಪ್ರೀಂಕೋರ್ಟ್ ತ್ರಿವಳಿ ತಲಾಕ್ ಮೇಲೆ ನಿಷೇಧ ಹೇರಿದೆ. ಆದರೆ, ಉತ್ತರ ಪ್ರದೇಶದ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥ ಯೂಸುಫ್ ಖಾನ್ ಪತ್ನಿಗೆ ತ್ರಿವಳಿ ತಲಾಕ್ ನೀಡಲು ಮುಂದಾಗಿದ್ದಾರೆ. ತನಗೆ ನ್ಯಾಯ ಸಿಗದಿದ್ದರೆ, ಕುಲಪತಿಯ ನಿವಾಸದ ಮುಂದೆ ಮಕ್ಕಳ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಈ ಪತ್ನಿ ಎಚ್ಚರಿಸಿದ್ದಾರೆ.

ಈ ಕುರಿತು ವಿಜಯ ಕರ್ನಾಟಕದ ಸಹೋದರ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾ ಜತೆ ಮಾತನಾಡಿದ ಪ್ರೊಫೆಸರ್ ಪತ್ನಿ ಯಾಸ್ಮಿನ್, ಕಳೆದ 27 ವರ್ಷಗಳಿಂದ ಆಲಿಗರ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಪತಿ ಯೂಸುಫ್, ತನಗೆ ವಾಟ್ಸಪ್ ಹಾಗೂ ಎಸ್‌ಎಂಎಸ್ ಮೂಲಕ ತ್ರಿವಳಿ ತಲಾಕ್ ನೀಡಿದ್ದಾರೆಂದು ಅಳಲು ತೊಡಿಕೊಂಡಿದ್ದಾರೆ.

‘ಪತಿ ಖಾನ್ ನನ್ನನ್ನು ಮನೆಯಿಂದ ಹೊರದಬ್ಬಿದ್ದು, ಇದೀಗ ಅತಂತ್ರಳಾಗಿದ್ದೇನೆ. ನ್ಯಾಯಕ್ಕಾಗಿ ಅವರಿವರ ಕಾಲು ಹಿಡಿಯುವ ಸ್ಥಿತಿ ತಲುಪಿದ್ದು, ಯಾರೂ ನನ್ನ ಸಹಾಯಕ್ಕೆ ಬರಲಿಲ್ಲ. ಸದ್ಯ, ಪೊಲೀಸರ ಸಹಾಯದಿಂದ ಪತಿಯ ಮನೆ ಸೇರಿದ್ದೇನೆ,’ ಎಂದು ಯಾಸ್ಮಿನ್ ಅಳಲು ತೋಡಿಕೊಂಡಿದ್ದಾರೆ.

ಆದರೆ, ತಲಾಕ್ ನೀಡಿರುವುದನ್ನು ಪ್ರೊಫೆಸರ್ ಖಾನ್ ಸಮರ್ಥಿಸಿಕೊಂಡಿದ್ದಾರೆ. ‘ನನ್ನ ಪತ್ನಿ ಯಾಸ್ಮಿನ್ ಕಳೆದ ಎರಡು ದಶಕಗಳಿಂದ ಕಿರುಕುಳ ನೀಡುತ್ತಿದ್ದು, ಪದವೀಧರೆ ಎಂದು ಸುಳ್ಳು ಹೇಳಿ ವಿವಾಹವಾಗಿದ್ದಾಳೆ. ನಾನು ವಾಟ್ಸಪ್ ಹಾಗೂ ಎಸ್‌ಎಂಎಸ್ ಮೂಲಕ ತಲಾಕ್ ನೀಡಿಲ್ಲ. ಷರಿಯಾ ಕಾನೂನಿನ ಪ್ರಕಾರವೇ ಸಮಯ ತೆಗೆದುಕೊಂಡು ಎರಡು ಬಾರಿ ತಲಾಕ್ ಹೇಳಿದ್ದೇನೆ. ಸೂಕ್ತ ಸಮಯ ನೋಡಿ ಮೂರನೇ ತಲಾಕ್ ಕೂಡ ನೀಡುತ್ತೇನೆ. ನನ್ನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ,’ ಎಂದು ಖಾನ್ ತಿಳಿಸಿದ್ದಾರೆ.

Comments are closed.