ಕರ್ನಾಟಕ

ನಾಯಿಗೆ ಸ್ನಾನ, ವಾಕಿಂಗ್‌ ಮಾಡಿಸೋ ವೆಂಚರ್‌

Pinterest LinkedIn Tumblr


ಮುದ್ದಿನ ನಾಯಿಗೆ ಜಾಸ್ತಿ ಸಮಯ ಕೊಡಲಾಗುತ್ತಿಲ್ಲ ಎಂಬ ಬೇಸರ ಹಲವರದ್ದು. ನಾಯಿ ಜೊತೆ ವಾಕಿಂಗ್‌ ಹೋಗಲು, ಅದಕ್ಕೆ ಸ್ನಾನ ಮಾಡಿಸಲು, ಅದರೊಂದಿಗೆ ಆಟವಾಡಲು ಟೈಂ ಸಿಗುತ್ತಿಲ್ಲವಲ್ಲ ಎಂದು ಇನ್ಮುಂದೆ ಚಿಂತಿಸಬೇಕಿಲ್ಲ. ಯಾಕಂದ್ರೆ, ನಿಮ್ಮ ನಾಯಿಗಾಗಿಯೇ “ಹಾಲಿಬೂ ಪೆಟ್‌ ವೆಂಚರ್‌’ ಪ್ರಾರಂಭವಾಗಿದೆ. ದೊಮ್ಮಲೂರಿನ “ಡಾಗ್‌ ಪಾರ್ಕ್‌’ ರೂವಾರಿಗಳಾದ, ಡಾಗ್‌ ಬಿಹೇವಿಯರ್‌ ಸ್ಪೆಷಲಿಸ್ಟ್‌ ಶ್ರೀಕಾಂತ್‌ ಶಂಕರ್‌ ಮತ್ತು ತಂಡದವರು ಈ ವೆಂಚರ್‌ ಆರಂಭಿಸಿದ್ದಾರೆ.

ಅವರು ನಿಮ್ಮ ಮನೆಗೇ ಬಂದು ನಾಯಿಯನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗುತ್ತಾರೆ. ನಾಯಿಗಳಿಗೆ ಟ್ರೈನಿಂಗ್‌ ಕೊಡುವ, ಮನೆಗೇ ಬಂದು ನಾಯಿಗೆ ಸ್ನಾನ ಮಾಡಿಸುವ ಸೇವೆಯೂ ಲಭ್ಯವಿದೆ. ಡಾಗ್‌ಪಾರ್ಕ್‌ ಬಳಿಯಲ್ಲಿ ಶ್ವಾನಗಳಿಗಾಗಿ ಮೋಜಿನ ಚಟುವಟಿಕೆಗಳನ್ನು, ಕಾರ್ಯಾಗಾರಗಳನ್ನೂ ನಡೆಸಲಾಗುತ್ತದೆ. ನಿಮ್ಮ ನಾಯಿ, ಇತರೆ ನಾಯಿಗಳೊಂದಿಗೆ ಆಟವಾಡುವಾಗ, ನೀವು ಕುಳಿತು ರಿಲ್ಯಾಕ್ಸ್‌ ಮಾಡಬಹುದು. ಶ್ವಾನಪ್ರಿಯರೆಲ್ಲರೂ ಒಟ್ಟಿಗೆ ಸೇರುವ ಸುಂದರ ತಾಣವೂ ಇದಾಗಿದೆ.

ಎಲ್ಲಿ?: ಡಾಗ್‌ ಪಾರ್ಕ್‌, ದೊಮ್ಮಲೂರು
ಫೇಸ್‌ಬುಕ್‌: DogParkBlr
ಸಂಪರ್ಕ: 9986863989

-ಉದಯವಾಣಿ

Comments are closed.