ಕರ್ನಾಟಕ

ಹೆರಿಗೆಯ ಬಳಿಕ ಆಗುವ ಋತುಚಕ್ರ ಸುತ್ತ ಬೆಳೆದ ಸುಳ್ಳು ಮತ್ತು ಸತ್ಯ

Pinterest LinkedIn Tumblr

ಹೆರಿಗೆ ನಂತರ ಮೊದಲ ಮುಟ್ಟು ಯಾವಾಗ ಎಂಬುದನ್ನು ನಮ್ಮ ಹಿಂದಿನ ಸಂಚಿಕೆಯಲ್ಲಿ ನೀವು ಓದಿರುವಿರಿ. ಆದರೆ ಹೆರಿಗೆ ಬಳಿಕ ನಿಮ್ಮ ದೇಹದಲ್ಲಿ ಆಗುವ ಕೆಲವು ಬದಲಾವಣೆಗಳಿಂದ ಋತುಚಕ್ರದಲ್ಲಿ ಏರುಪೇರಾಗಬಹುದು. ಇದರ ಬಗ್ಗೆ ನೀವು ಸುಳ್ಳು ಹೇಳಿಕೆ ಮಾತುಗಳಿಗೆ ಕಿವಿಕೊಡದೆ ಸತ್ಯವನ್ನು ತಿಳಿದಿರುವುದು ಒಳ್ಳೆಯದು.

ಹೆರಿಗೆ ನಂತರ ನಿಮ್ಮ ಮೊದಲ ಮುಟ್ಟು ಸಂಪೂರ್ಣ ನಿಮ್ಮ ದೇಹದ ಸ್ಥಿತಿ ಮೇಲೆ ಅವಲಂಭಿತವಾಗಿರುತ್ತದೆ. ಅದರಲ್ಲೂ ದೇಹದಲ್ಲಿನ ಹಾರ್ಮೋನುಗಳ ಬದಲಾವಣೆ ಪ್ರಮುಖ ಪಾತ್ರವಹಿಸುತ್ತವೆ. ಹೆಚ್ಚಿನ ವಿವರಗಳನ್ನು ಕೆಳಗೆ ತಿಳಿಯಿರಿ.

೧.ನಿಮ್ಮ ಮೊದಲ ಮುಟ್ಟು ಇದೆ ದಿನ ಆಗುತ್ತದೆ ಎಂದು ಊಹಿಸುವುದು ಕಷ್ಟ, ವೈದ್ಯರು ಕೂಡ ಇದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ.

೨.ಇದರ ಜೊತೆಗೆ ನಿಮ್ಮನ್ನ ಕಾಡುವ ಸಮಸ್ಯೆ ಎಂದರೆ ರಕ್ತಸ್ರಾವ, ಇದು ಸಮಾನ್ಯವಾಗಿದ್ದರು ಇದರ ಬಗ್ಗೆ ಗಮನ ನೀಡಿ ಕಾಳಜಿವಹಿಸುವುದು ಉತ್ತಮ. ನಿಮ್ಮ ಸ್ರಾವದಲ್ಲಿ ಬದಲಾವಣೆ ಕಂಡರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ.

೩.ನೀವು ಮೊದಲಿನಂತೆ ಸರಿಯಾಗಿ ಅದೇ ಅವಧಿಗೆ ಮುಟ್ಟಾಗುವುದಿಲ್ಲ. ಅಂದರೆ ನೀವು ೨೮ ದಿನಗಳಿಗೆ ಮುಟ್ಟು ಅನುಭವಿಸಿದರೆ ಎರಡನೇ ಬಾರಿ ೨೦ ಅಥವಾ ೩೫ ದಿನಗಳಿಗೆ ಮುಟ್ಟನ್ನು ಅನುಭವಿಸಬಹುದು.

೪.ಕೆಲವು ಮಹಿಳೆಯರಿಗೆ ಋತುಸ್ರಾವ ನೋವಿನಿಂದ ಕೂಡಿರಬಹುದು. ಇದರ ಜೊತೆ, ವಾಕರಿಕೆ, ಊತ, ಭಾವನೆಗಳ ಬದಲಾವಣೆ, ಕೆಳ ಹೊಟ್ಟೆ ನೋವು ಮುಂತಾದ ತೊಂದರೆಗಳನ್ನು ಅನುಭವಿಸುವರು. ಇದರ ತೀವ್ರತೆ ಮತ್ತು ಸ್ಥಿತಿ ಅನ್ನು ಗಮನಿಸಿ ವೈದ್ಯರನ್ನು ಭೇಟಿ ಮಾಡುವುದು ಒಳ್ಳೆಯದು.

೫.ಮಗುವಿಗೆ ನೀವು ಎದೆಹಾಲುಣಿಸುವ ಸಮಯದಲ್ಲಿ ನೀವು ಮುಟ್ಟಿನ ದಿನವನ್ನು ಅನುಭವಿಸುವುದಿಲ್ಲ. ಹಾಲುಣಿಸುವುದನ್ನು ನಿಲ್ಲಿಸಿದ ನಂತರ ಮೊದಲಿನಂತೆ ಮರಳುವುದು.

೬.ಹೆರಿಗೆ ಬಳಿಕ ಋತುಚಕ್ರ ಏರುಪೇರಾಗಲು ದೇಹದಲ್ಲಿ ಬದಲಾಗುವ ರಸದೂತಗಳೇ ಕಾರಣ. ಮಗುವಿಗೆ ಸರಿಯಾಗಿ ಎದೆಹಾಲು ಉಣಿಸದೆ ಇರುವುದೇ ಕಾರಣ ಎಂದು ಸಂಶೋಧನೆಗಳು ಹೇಳಿವೆ.

 

 

Comments are closed.