ರಾಷ್ಟ್ರೀಯ

ಭದ್ರತಾ ನಿಯಮ ಬದಿಗಿಟ್ಟು ದಿವ್ಯಾಂಗನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಕೋಹ್ಲಿ

Pinterest LinkedIn Tumblr


ಹೊಸದಿಲ್ಲಿ: ಹಲವು ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್‌ ತಂಡದ ನಾಯಕ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ವೇಳೆ ಕೋಪವನ್ನು ತೋರ್ಪಡಿಸಿಕೊಂಡಿರಬಹುದು. ಆದರೆ ಈ ಬಾರಿ ದಿವ್ಯಾಂಗ ಬಾಲಕನೊಂದಿಗೆ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಎಲ್ಲರ ಮೆಚ್ಚುಗೆಗೆ ಮತ್ತೊಮ್ಮೆ ಪಾತ್ರರಾಗಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದ ವೇಳೆ ವಿಮಾನ ನಿಲ್ದಾಣದಿಂದ ತೆರಳುತ್ತಿದ್ದ ಕೋಹ್ಲಿಗೆ ಗಾಲಿಕುರ್ಚಿ ಮೇಲೆ ಕುಳಿತು ಆಟೋಗ್ರಾಫ್‌ಗಾಗಿ ಕಾಯುತ್ತಿದ್ದ ಬಾಲಕನೊಬ್ಬ ಕಣ್ಣಿಗೆ ಬಿದ್ದಿದ್ದಾನೆ. ಕೂಡಲೇ ಈತನ ಬಳಿ ಧಾವಿಸಿದ ಕೋಹ್ಲಿ ಯಾವುದೇ ಭದ್ರತಾ ನಿಯಮಕ್ಕೆ ತಲೆಕೆಡಿಸಿಕೊಳ್ಳದೇ ಆತನಿಗೆ ಆಟೋಗ್ರಾಫ್‌ ನೀಡಿದ್ದಾರೆ. ಬಳಿಕ ಆತನೊಂದಿಗೆ ಸೆಲ್ಫಿ ಕೂಡಾ ತೆಗೆದುಕೊಂಡಿದ್ದಾರೆ.
ದಿವ್ಯಾಂಗ ಬಾಲಕನ ಸುತ್ತಲೂ ಮಕ್ಕಳು ನಿಂತು ಕೋಹ್ಲಿಗೆ ಶುಭ ಹಾರೈಸುತ್ತಿದ್ದರು, ಕೂಡಲೇ ಎಲ್ಲರೊಂದಿಗೂ ಸೆಲ್ಫಿ ಕ್ಲಿಕ್ಕಿಸಿಕೊಂಡ ಕೋಹ್ಲಿ ಎಲ್ಲರಿಗೂ ಆಟೋಗ್ರಾಫ್‌ ನೀಡಿದ್ದಾರೆ. ಈ ವೇಳೆ ತಮ್ಮ ನೆಚ್ಚಿನ ಆಟಗಾರ ಕೋಹ್ಲಿಯ ಚಿತ್ರವನ್ನು ಬಿಡಿಸಿಕೊಂಡು ಬಂದಿದ್ದ ಮಕ್ಕಳ ಚಿತ್ರವನ್ನೂ ಸಹ ಕೋಹ್ಲಿ ಪಡೆದಿದ್ದು, ಆ ಚಿತ್ರದಲ್ಲಿ ತಮ್ಮ ಸಹಿ ನೀಡಿ ಮತ್ತೆ ಅವರಿಗೆ ಮರಳಿಸಿದ್ದಾರೆ.

ಟಿ-20 ಪಂದ್ಯದಲ್ಲಿ ಕೋಹ್ಲಿ ತಂಡ ನ್ಯೂಜಿಲ್ಯಾಂಡ್‌ ವಿರುದ್ಧದ ಮೂರು ಪಂದ್ಯದಲ್ಲಿ ಎರಡು ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಂಡಿತ್ತು.

Comments are closed.