ಕರ್ನಾಟಕ

ತಾಯಂದಿರು ಎದೆಹಾಲು ನೀಡುವಾಗ ಮೊಬೈಲ್ ಬಳಸಬಾರದು ಏಕೆ ?

Pinterest LinkedIn Tumblr

ಎದೆಹಾಲು ಉಣಿಸುವುದು ಮಗುವಿಗೆ ಪೋಷಕಾಂಶಗಳನ್ನು ನೀಡಿ ಅದಕ್ಕೆ ಬೆಳೆಯಲು ಸಹಾಯ ಮಾಡುವ ಒಂದು ಅತಿಮುಖ್ಯ ಕಾರ್ಯ. ಎದೆಹಾಲು ಉಣಿಸುವಾಗ ಅಮ್ಮಂದಿರು ಸ್ತಬ್ದವಾಗಿ ಕುಂತಿರಬೇಕು ಇಲ್ಲ ಮಲಗಿಕೊಂಡು ಮಗುವು ಹಾಲು ಕುಡಿಯುತ್ತಿರುವುದನ್ನು ನೋಡಬೇಕು. ಆದರೆ ಪ್ರಶ್ನೆ ಏನೆಂದರೆ, ಅಮ್ಮನು ಈ ಸಮಯವನ್ನು ಕಳೆಯುವುದಾದರು ಹೇಗೆ?

ಎದೆಹಾಲು ನೀಡುವಾಗ ಅಮ್ಮಂದಿರು ಮೊಬೈಲ್ ಅನ್ನು ಬಳಸುವುದು ಸಹಜ. ಅದು ಅಂತರ್ಜಾಲದಲ್ಲಿ ಏನನ್ನಾದರೂ ಹುಡುಕುವುದಾಗಲಿ ಅಥವಾ ಇನ್ನ್ಯಾರೋ ಜೊತೆಗೆ ಚಾಟ್ ಮಾಡಲಾಗಲಿ ಅಥವಾ ಬಟ್ಟೆ ಖರೀದಿಸಲು ಆಗಲಿ, ನಾವೆಲ್ಲಾ ಒಂದು ರೀತಿ ತಂತ್ರಜ್ಞಾನದ ಆಳುಗಳು ಆಗಿದ್ದೇವೆ. ಆದರೆ ತಜ್ಞರು ಎದೆಹಾಲು ನೀಡುವಾಗ ಮೊಬೈಲ್ ಬಳಸುವುದು ಮಕ್ಕಳು ಬೆಳೆದಂತೆ ಅವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಮಕ್ಕಳಿಗೆ ಹಾನಿ ಉಂಟುಮಾಡುತ್ತದೆ ಎಂದು ಹೇಳುತ್ತಾರೆ.

ನೀವು ಎದೆಹಾಲು ನೀಡುವಾಗ ಮೊಬೈಲ್ ಅನ್ನು ಏಕೆ ಬಳಸಬಾರದು ಎಂಬುದಕ್ಕೆ ಕೆಲವು ಕಾರಣಗಳು ಇಲ್ಲಿವೆ ಓದಿ.

1. ಕಣ್ಣಲ್ಲಿ ಕಣ್ಣಿಡುವುದು
ಅಮ್ಮ ಮತ್ತು ಮಗುವಿನ ನಡುವಿನ ಬಾಂಧವ್ಯ ಬೆಸೆಯಲು ಒಂದು ಮಟ್ಟಿಗಿನ ನೋಟದ ಮಿಲನವು ಬೇಕೇ ಬೇಕು. ಮಕ್ಕಳು ಹುಟ್ಟಿದ ತಕ್ಷಣ ಅವರ ಕಣ್ಣಿಗೆ ಕಾಣಿಸುವುದು ಕೇವಲ ಅಮ್ಮನ ಎದೆಯಿಂದ ಆಕೆಯ ಮುಖದವರೆಗೆ ಮಾತ್ರ. ಹೀಗಾಗಿ ಅವರು ನಿಮ್ಮ ಮೇಲೆಯೇ ಯಾವಾಗಲೂ ಕಣ್ಣಿಟ್ಟು ನಿಮ್ಮನ್ನು ಗುರುತಿಸಲು ಪ್ರಯತ್ನಿಸುತ್ತಾರೆ. ನಿಮ್ಮ ಮಗು ನಿಮ್ಮ ಮುಖವನ್ನು ನೋಡದೆ ಕೇವಲ ಮೊಬೈಲ್ ಅನ್ನೇ ನೋಡುತ್ತಾ ಕುಳಿತುಕೊಳ್ಳುತ್ತದೆ ಎಂದುಕೊಳ್ಳಿ, ಆಗ ನಿಮಗೆ ಆಗಲಿ ನಿಮ್ಮ ಮಗುವಿನ ಮೇಲೆ ಪ್ರೀತಿ ಅಥವಾ ಅದರೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳಲು ಸಾಧ್ಯವೇ? ಮಗುವಿಗೂ ಹಾಗೆಯೇ ಅನಿಸುವುದು.

2. ಗಮನ
ಒಂದು ವೇಳೆ ನಿಮ್ಮ ಮಗು ಸರಿಯಾಗಿ ಕಚ್ಚಿಕೊಂದಿಲ್ಲ ಎಂದುಕೊಳ್ಳಿ, ಆಗ ಫೋನಿನಲ್ಲಿ ಮುಳುಗಿರುವ ನಿಮ್ಮ ಗಮನಕ್ಕೆ ಅದು ಬರುತ್ತದೆಯೇ? ವ್ಯಂಗ್ಯ ಏನು ಎಂದರೆ, ಮುಂದೆ ಆಗುವ ತೊಂದರೆಗಳ ಅರಿವಿಲ್ಲದೆ, ಬಹುಶಃ ನೀವು ಈ ಲೇಖನವನ್ನು ಮಗುವಿಗೆ ಹಾಲು ನೀಡುತ್ತಾ ಓದುತ್ತಿರಬಹುದು.

3. ದೈಹಿಕ ಸ್ಪರ್ಶ
ನಿಮ್ಮ ಕೈಯಲ್ಲಿ ಫೋನು ಇದ್ದು ನಿಮ್ಮ ಕಣ್ಣುಗಳು ಅದರ ಮೇಲಿದ್ದರೆ, ಮಗು ನಿದ್ದೆ ಹೋದರೂ ನಿಮಗೆ ತಿಳಿಯುವುದಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ನಿಮ್ಮ ಮಗುವಿಗೆ ಬೇಕಾದಷ್ಟು ಹಾಲು ಸಿಕ್ಕಿತೇ ಎಂಬುದು ಕೂಡ ಗೊತ್ತಾಗುವುದಿಲ್ಲ. ನಿಮ್ಮ ಮಗುವು ಹಾಲು ಕುಡಿಯುತ್ತಾ ನಿದ್ದೆ ಹೋಗಬಹುದು. ನೀವು ನಿಮ್ಮ ಮಗುವನ್ನು ಸ್ಪರ್ಶಿಸುವುದು, ಅದನ್ನು ಸವರುವುದು ತುಂಬಾನೇ ಮುಖ್ಯ.

4. ವರ್ತನೆಯಲ್ಲಿನ ತೊಂದರೆಗಳು
ಮಕ್ಕಳ ಕಡೆ ಅವರು ಕೇಳಿದಾಗ ನೀವು ಗಮನ ಕೊಡದೇ ಇದ್ದರೆ ಅವರು ಹಠ ಮಾಡಲು ಪ್ರಾರಂಭಿಸುತ್ತಾರೆ. ನೀವು ಅವರ ಕಡೆ ನೋಡದೆ ಇದ್ದರೆ ಅವರು ಗಹಗಹಿಸಿ ನಗುತ್ತಾರೆ, ಮಂದಹಾಸ ಬೀರುತ್ತಾರೆ ಮತ್ತು ಸದ್ದನ್ನು ಮಾಡುತ್ತಾರೆ. ಅವರು ತಮ್ಮ ಪುಟ್ಟ ಕೈಗಳಿಂದ ನಿಮ್ಮನ್ನು ಹಿಡಿಯಲಿಕ್ಕೆ ಪ್ರಯತ್ನಸಿ ನೀವು ಅವರ ಕಡೆ ನೋಡುವಂತೆ ಮಾಡುತ್ತಾರೆ,

ನೀವು ಅವರ ಕಡೆ ನೋಡದೆ ಇದ್ದರೆ ಅಥವಾ ಅವರು ಮಾಡಿದ್ದನು ತಿರುಗಿಸಿ ನೀವು ಮಾಡದೆ ಇದ್ದರೆ, ಅವರಿಗೆ ತಾವು ದುರ್ಬಲರು ಮತ್ತು ಈ ಮನೆಯಲ್ಲಿ ತಾವು ಲೆಕ್ಕಕೆ ಇಲ್ಲ ಎಂಬ ಭಾವನೆಗೆ ಒಳಗಾಗುತ್ತಾರೆ. ಮಕ್ಕಳು ತುಂಬಾನೇ ಸೂಕ್ಷ್ಮ ಸ್ವಭಾವದವರಾಗಿದ್ದು, ನೀವು ಅವರನ್ನು ಬಹಳ ಸಮಯ ನೋಡುತ್ತಲೇ ಇರಬೇಕು.

5. ಯಂತ್ರೋಪಕರಣಗಳು ಹೊರಹಾಕುವ ಕಿರಣಗಳು
ಮಕ್ಕಳು ತುಂಬಾ ಪುಟ್ಟ ದೇಹದವರಾಗಿದ್ದು ಯಂತ್ರೋಪಕರನಗಳಿಂದ ಬಿಡುಗಡೆ ಆಗುವ ಕಿರಣಗಳನ್ನು ಅವುಗಳು ಸುಲಭವಾಗಿ ಹೀರಿಕೊಳ್ಳುವರು. ಇದು ಮಕ್ಕಳಿಗೆ ತುಂಬಾನೇ ಅಪಾಯಕಾರಿ ಆದಂತದ್ದು. ಇದು ಮಕ್ಕಳ ತಳಿ ನಿರ್ಮಾಣವನ್ನು ಬದಲಿಸಬಹುದು ಅಥವ ಕ್ಯಾನ್ಸರ್ ಕಣಗಳ ಬೆಳವಣಿಗೆಗೆ ಸಹಾಯ ಮಾಡಬಹುದು. ಅಲ್ಲದೆ ಇದು ಮಕ್ಕಳ ಮೆದುಳಿನ ಬೆಳೆವಣಿಗೆಯ ಪ್ರಕ್ರಿಯೆಗೂ ತೊಂದರೆ ಉಂಟು ಮಾಡುತ್ತದೆ ಎಂಬುದು ತಿಳಿದು ಬಂದಿದೆ.

ನೀವು ಕೇವಲ ನಿಮ್ಮ ಮಗುವಿಗೆ ಎದೆಹಾಲು ನೀಡುವ ಸಮಯದಲ್ಲಿ ಮೊಬೈಲ್ ಅನ್ನು ಕೈ ಬಿಡಿ ಎಂದರೆ ಅದು ನಿಮಗೆ ಇರಿಸುಮುರಿಸು ಉಂಟು ಮಾಡ ಬಾರದು. ಏಕೆಂದರೆ ಈ ಪ್ರಕ್ರಿಯೆಯು ಮಗುವಿನೊಂದಿಗೆ ಬಾಂಧವ್ಯ ಬೆಸೆಯಲು ಮತ್ತು ಅವರು ಹೇಗೆ ಬೆಳೆಯುತ್ತಾರೆ ಎಂಬುದನ್ನು ನಿರ್ಧರಿಸಲು ತುಂಬಾ ಮುಖ್ಯವಾಗಿ ಬೇಕಿರುವುದು.

Comments are closed.