ಕರ್ನಾಟಕ

ಟಿಪ್ಪು ಜಯಂತಿ ಆಚರಣೆಗೆ ತಡೆ ನೀಡಲು ಹೈಕೋರ್ಟ್ ನಕಾರ

Pinterest LinkedIn Tumblr


ಬೆಂಗಳೂರು: ವಿವಾದಿತ ಟಿಪ್ಪು ಜಯಂತಿ ಆಚರಣೆಗೆ ತಡೆ ನೀಡಲು ಹೈಕೋರ್ಟ್ ವಿಭಾಗೀಯ ಪೀಠ ಮಂಗಳವಾರ ನಿರಾಕರಿಸಿದೆ. ಈ ಹಂತದಲ್ಲಿ ಟಿಪ್ಪು ಜಯಂತಿ ಆಚರಣೆಗೆ ತಡೆ ನೀಡಲು ಸಾಧ್ಯವಿಲ್ಲ ಎಂದು ಪೀಠ ಅಭಿಪ್ರಾಯವ್ಯಕ್ತಪಡಿಸಿದೆ.

ಟಿಪ್ಪು ಜಯಂತಿ ಆಚರಣೆಗೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಪಿಐಎಲ್ ಅನ್ನು ಹೈಕೋರ್ಟ್ ಪೀಠ ವಜಾಗೊಳಿಸಿದ್ದು, ಇದರಿಂದಾಗಿ ಟಿಪ್ಪು ಜಯಂತಿ ಆಚರಣೆಗಿದ್ದ ತೊಡಕು ನಿವಾರಣೆಯಾದಂತಾಗಿದೆ.

ಕಾರ್ಯಕ್ರಮಕ್ಕೆ ಮೂರು ದಿನ ಇದ್ದಲ್ಲಿ ತೀರ್ಪು ನೀಡಲು ಸಾಧ್ಯವಿಲ್ಲ, ಈ ಬಗ್ಗೆ ತಕರಾರು ಇದ್ದಲ್ಲಿ ನಾಲ್ಕು ವಾರ ಬಿಟ್ಟು ಅರ್ಜಿ ಸಲ್ಲಿಸಲು ಪೀಠ ಅರ್ಜಿದಾರರಿಗೆ ಸೂಚನೆ ನೀಡಿದೆ.

ಟಿಪ್ಪು ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಕನ್ನಡ ಸಂಸ್ಕೃತಿ ಇಲಾಖೆಯ ಸುತ್ತೋಲೆ ರದ್ದು ಕೋರಿ ಕೊಡಗಿನ ಕೆಪಿ ಮಂಜುನಾಥ ಎಂಬುವರು ಅರ್ಜಿ ಸಲ್ಲಿಸಿದ್ದರು.

 

-ಉದಯವಾಣಿ

Comments are closed.