ಕರ್ನಾಟಕ

ಮಹದೇವ ಪ್ರಸಾದ್‌ ನಿಧನ ನನಗೆ ತೀವ್ರ ಆಘಾತ ತಂದಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

Pinterest LinkedIn Tumblr

mahadevaprasad_eps

ಬೆಂಗಳೂರು: ಮಹದೇವ ಪ್ರಸಾದ್ ಅವರ ಅನಿರೀಕ್ಷಿತ ಸಾವು ನನಗೆ ತೀವ್ರ ಆಘಾತ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಮಹದೇವ ಪ್ರಸಾದ್‌ ಅವರು ನನ್ನ ಅತ್ಯಂತ ಆಪ್ತರಲ್ಲಿ ಒಬ್ಬರಾಗಿದ್ದರು. ಅವರ ಸಾವಿನಿಂದ ರಾಜ್ಯಕ್ಕೆ, ಪಕ್ಷಕ್ಕೂ ನಷ್ಟವಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಅವರ ಅಗಲಿಕೆಯಿಂದ ನನಗೂ ವ್ಯಯಕ್ತಿಕವಾಗಿ ನಷ್ಟವಾಗಿದೆ. ಅಜಾತ ಶತ್ರು ಆಗಿದ್ದ ಮಹದೇವ ಪ್ರಸಾದ್‌ ಶಿಸ್ತಿನ ಕೆಲಸಗಾರರಾಗಿದ್ದರು. ಸತತವಾಗಿ ಐದು ಬಾರಿ ಗೆದ್ದಿದ್ದ ಅವರು ಚುನಾವಣೆಗೆ ಎಷ್ಟು ಬಾರಿ ನಿಂತಿದ್ದರೂ ಗೆಲ್ಲುತ್ತಿದ್ದರೂ ಎಂದು ಸಿದ್ದರಾಮಯ್ಯ ಮಾಧ್ಯಮಗಳಿಗೆ ತಿಳಿಸಿದರು.

ಚಾಮರಾಜ ನಗರದ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷ ಗೆಲ್ಲಲು ಮಹದೇವ ಪ್ರಸಾದ್ ಕಾರಣ ಎಂದರು.

ದಕ್ಷ ಮಂತ್ರಿ, ಉತ್ತಮ ಸ್ನೇಹಿತನನ್ನು ಕಳೆದು ಕೊಂಡಿದ್ದೇನೆ. ಅವರದ್ದು ಚಿಕ್ಕ ವಯಸ್ಸು, ಸಾಯುವ ವಯಸ್ಸಲ್ಲ, ಯಾವುದೇ ಪಕ್ಷದಲ್ಲಿದ್ದರೂ ಅವರು ಪಕ್ಷ ನಿಷ್ಠೆಯಿಂದ ಇರುತ್ತಿದ್ದರು ಎಂದರು.

Comments are closed.