ಕರ್ನಾಟಕ

ಹಗಲಿನಲ್ಲಿ ಟಿಪ್’ಟಾಪಾಗಿರುವ ಪತಿ …ರಾತ್ರಿಯಲ್ಲಿ ಸೀರೆ ಧರಿಸುತ್ತಾರಂತೆ ! ಬೇಸತ್ತಿರುವ ಪತ್ನಿಯಿಂದ ಪೊಲೀಸರಿಗೆ ದೂರು

Pinterest LinkedIn Tumblr

husband-wife-problem-solution

ಬೆಂಗಳೂರು: ರಾತ್ರಿ ವೇಳೆಯಲ್ಲಿ ನನ್ನ ಸೀರೆ ಧರಿಸುವ ನನ್ನ ಗಂಡ ಹಗಲಿನಲ್ಲಿ ಟಿಪ್’ಟಾಪಾಗಿ ಡ್ರಸ್ ಮಾಡಿಕೊಂಡು ಐಟಿ ಕಂಪನಿಯಲ್ಲಿ ಸಾಫ್ಟ್’ವೇರ್ ಇಂಜಿನಿಯರ್ ಕೆಲಸಕ್ಕೆ ಹೋಗುತ್ತಾನೆ ಎಂದು ತನ್ನ ಪತಿಯ ನಡವಳಿಕೆಯ ವಿರುದ್ಧ ಬೇಸತ್ತಿರುವ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

ಪತಿ-ಪತ್ನಿ ಇಬ್ಬರೂ ಟೆಕ್ಕಿಗಳಾಗಿದ್ದು, ಬೆಂಗಳೂರಿನ ಇಂದಿರಾನಗರದ ನಿವಾಸಿಗಳಾಗಿದ್ದಾರೆ. ಗಂಡ ಪ್ರತಿದಿನ ರಾತ್ರಿ ಸೀರೆ ಉಟ್ಟು, ಮೇಕಪ್ ಮಾಡಿಕೊಂಡು ಮಹಿಳೆಯರಂತೆ ವರ್ತಿಸುತ್ತಿದ್ದರಿಂದ ಬೇಸತ್ತ ಮಹಿಳೆ ವಿಚ್ಛೇದನ ನೀಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಪತಿಯೂ ಸಮ್ಮತಿಸಿರುವುದಾಗಿ ತಿಳಿದುಬಂದಿದೆ. ಈ ಇಬ್ಬರಿಗೂ ವನಿತಾ ಸಹಾಯ ವಾಣಿಯಲ್ಲಿ ಕೌನ್ಸಿಲಿಂಗ್ ಮಾಡಲಾಗಿದೆ.

ಈ ದಂಪತಿ 1 ವರ್ಷದ ಹಿಂದೆ ಮದುವೆಯಾಗಿದ್ದಾರೆ. ಮದುವೆಯಾದ ಮೊದಲ ದಿನದಿಂದಲೂ ತನ್ನ ಪತಿ ರಾತ್ರಿ ವೇಳೆ ಸೀರೆ ಉಟ್ಕೊಂಡು ಮೇಕಪ್ ಮಾಡುತ್ತಾರೆ. ಹಗಲಿನಲ್ಲಿ ಸಾಫ್ಟ್‍ವೇರ್ ಎಂಜಿನಿಯರ್ ನಂತೆ ಡ್ರೆಸ್ ಮಾಡ್ಕೊಂಡು ಕಚೇರಿಗೆ ಹೋಗ್ತಾರೆ.ಮಾತ್ರವಲ್ಲದೇ ರಾತ್ರಿ ವೇಳೆ ಮಹಿಳೆಯರಂತೆ ವರ್ತಿಸುತ್ತಾರೆ ಅಂತಾ ಪತ್ನಿ ಆರೋಪಿಸಿದ್ದಾರೆ.

Comments are closed.