ಮಂಗಳೂರು: ರಾಗಿ ಅತ್ಯಧಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳನ್ನೊಳಗೊಂಡಿದೆ. ಇದು ಒಂದು ಆಹಾರ ಬೆಳೆಯಾಗಿದ್ದು ಮಕ್ಕಳು ದೊಡ್ಡವರೆನ್ನೆದೆ ಉಪಯೋಗಿಸಬಹುದು. ರಾಗಿಮುದ್ದೆ ಅತ್ಯಂತ ಜನಪ್ರಿಯ ಆಹಾರ ಪ್ರಕಾರವಾಗಿದೆ. ರಾಗಿ ಆಫ್ರಿಕ ಮತ್ತು ಏಷ್ಯಾದ ಹಲವಾರು ಒಣ ಪ್ರದೇಶಗಳಲ್ಲಿ ಬೆಳೆಯಲಾಗುವ ಒಂದು ಬಗ್ಗೆಯ ಆಹಾರ ಧ್ಯಾನ ಇತಿಯೋಪಿಯ ಮೂಲಕ ಈ ವಾರ್ಷಿಕ ಬೆಳೆಯ ಸುಮಾರು 4000 ವರ್ಷಗಳ ಹಿಂದೆ ಭಾರತಕ್ಕೆ ತರಲಾಯಿತು.
ರಾಗಿಯ ಉಪಯೋಗಗಳು :
ರಾಗಿ ಹಿಟ್ಟಿನಿಂದ ರೊಟ್ಟಿ, ಮುದ್ದೆ, ಉಪ್ಪಿಟ್ಟು, ದೋಸೆ , ಗಂಜಿ ಹಾಲ್ಬಾಯಿ (ಸಿಹಿ) ಎಂಬ ತಿನಿಸುಗಳನ್ನು ತಯಾರಿಸುತ್ತಾರೆ. ಮಕ್ಕಳ ಪೌಷ್ಠಿಕ ಆಹಾರವೆಂದರೆ – ಒಡ್ಡರಾಗಿಹಿಟ್ಟು. ಇದು ಅತ್ಯಂತ ಮಿಟಮಿನ್ ಯುಕ್ತ ಅಹಾರ, ಜೀರ್ಣಿಸಿಕೊಳ್ಳಲು ಸುಲಭ. ಇದನ್ನು ಸೇವಿಸಿ ಬೆಳೆದ ಮಕ್ಕಳು ಬಹಳ ಆರೋಗ್ಯದಿಂದಲೂ ಗಟ್ಟಿ ಮುಟ್ಟಾಗಿಯೂ ಇರುತ್ತಾರೆ. ಮಧುಮೇಹ(ಡಾಯಾಬೆಟೆಸ್) ರೋಗಿಗಳಿಗೆ ಇದು ವೈದ್ಯರಿಂದ ಶಿಫಾರಸ್ ಪಡೆದ ಪೇಯ . ರಾಗಿ ಅರಳನ್ನು ಹುರಿದು ಅದನ್ನು ನುಣ್ಣಗೆ ಬೀಸಿ ಪುಡಿಮಾಡಿ ಅದಕ್ಕೆ ಸರಿಯಾದ ಪ್ರಮಾಣದಲ್ಲಿ ಬೆಲ್ಲದ ಪುಡಿಬೆರೆಸಿ, ಹುಣಕೆಹುಳಿ, ಯಾಲಕ್ಕಿ ಪುಡಿ ಸೇರಿಸಿ ಸೇವಿಸಿದರೆ ಬಹಳ ಚೆನ್ನಾಗಿರುತ್ತದೆ. ಅರಳು ಪುಡಿಯನ್ನು ಮೊಸರಿನಲ್ಲಿ ಸೇರಿಸಿ , ಸಕ್ಕರೆ ಅಥವಾ ಬೆಲ್ಲದ ಜೊತೆಯೂ ಸೇವಿಸಿಬಹುದು.
ಪೋಷಕಾಂಶಗಳ ವಿವರ ;
ರಾಗಿ ಅತ್ಯಧಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣ್ಣದ ಅಂಶಗಳನ್ನೊಳಗೊಂಡಿದೆ, ಇದು ಒಂದು ಉತ್ತಮ ಆಹಾರ ಬೆಳೆಯಾಗಿದ್ದು ಮಕ್ಕಳು ದೊಡ್ಡವರೆನ್ನದೆ ಉಪಯೋಗಿಸಬಹುದು ರಾಗಿಮುದ್ದೆ ಅತ್ಯಂತ ಜನಪ್ರೀಯ ಆಹಾರ ಪ್ರಕಾರವಾಗಿದೆ. ರಾಗಿ ಹೆಚ್ಚಿನವರಿಗೆ ಇಷ್ಟವಾಗುವುದಿಲ್ಲ ಏಕೆಂದರೆ ಅದರ ರುಚಿ ಸಪ್ಪೆಯಾಗಿರುವುದರಿಂದ ಆದರೆ ರಾಗಿ ನಮ್ಮ ದೇಹದಲ್ಲಿ ಉಂಟುಮಾಡುವ ಜಾದೂ ನಿಮಗೆ ತಿಳಿಯಿತೆಂದರೆ ಇಂದೆ ನೀವು ಅದನ್ನು ಬಳಸಲು ಪ್ರಾರಂಭಿಸುವಿರಿ. ಹೆಚ್ಚಾಗಿ ರಾಗಿಯನ್ನು ಅಗೆಯುವುದಕ್ಕಿಂತ ನುಂಗುವುದು ವಾಡಿಕೆ
ರಾಗಿಯಿಂದ ತಯಾರಿಸುವ ಪ್ರತಿಯೊಂದು ಆಹಾರ ಪದಾರ್ಥವು ದೇಹಕ್ಕೆ ತಂಪು ಮತ್ತು ಆರೋಗ್ಯ ವರ್ಧಕ ರಾಗಿ ಧಾನ್ಯಗಳಲ್ಲಿ ಶ್ರೇಷ್ಠವಾದುದು.ಅದಕ್ಕಿರುವ ಮಹತ್ವ ಘನತೆ ಬೇರೆ ಧ್ಯಾನಗಳಿಗಿಲ್ಲ ರಾಗಿಯಿಂದ ಮಾಡಲಾದ ರಾಗಿಮುದ್ದೆ ದೇಹಕ್ಕೆ ತುಂಬಾ ತಂಪು.
ರಾಗಿಯಿಂದಾಗುವ ಉಪಯೋಗಗಳು:
1. ದೇಹದ ಕೊಬ್ಬನ್ನು ಹಾಗೂ ತೂಕ ಇಳಿಸುವಲ್ಲಿ ಸಹಕಾರಿ.
2. ಮೂಳೆಗಳಿಗೆ ಉತ್ತಮ : ರಾಗಿ ಮುದ್ದೆಯ ಇನ್ನೊಂದು ಪರಿಣಾಮಕಾರಿ ಪ್ರಯೋಜನವೆಂದರೆ ನಿಮ್ಮ ಮೂಳೆಗಳನ್ನು ಬಲಪಡಿಸುವ ಶಕ್ತಿಯನ್ನು ಇದು ಹೊಂದಿದೆ. ಇದರಲ್ಲಿ ಹೆಚ್ಚು ಪ್ರಮಾಣದ ಕ್ಯಾಲ್ಯಿಯಂ ಮತ್ತು ಮಿಟಮಿನ್ ಡಿ ಇದ್ದು ಮಕ್ಕಳಿಗೆ ಹಾಗೂ ವೃದ್ಧರಿಗೆ ಅವಶ್ಯಕವಾಗಿರುವ ಕೆಲವೊಂದು ಪ್ರಮುಖ ಅಂಶಗಳನ್ನು ಇದು ಹೊಂದಿದೆ.
3. ಮಧುಮೇಹಿಗಳಿಗೆ ಸೂಕ್ತ : ಆಧುನಿಕ ಜೀವನದಲ್ಲಿ ಒತ್ತಡದಲ್ಲೇ ಬದುಕಿ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಮಧುಮೇಹಿಗಳಿಗೆ ರಾಗಿ ಉತ್ಪನ್ನಗಳು ರಾಮಬಾಣವಿದ್ಧಂತೆ ಅಪಾಯ ಮಟ್ಟವನ್ನು ರಾಗಿ ಮುದ್ದೆ ಕಡಿಮೆ ಮಾಡುತ್ತದೆ.
4. ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾದುತ್ತದೆ: ರಾಗಿಯಲ್ಲಿರುವ ಅಮೀನೋ ಆಸಿಡ್ ಲೆಸಿತಿನ್ ಹಾಗೂ ಮೆಥೊನಿನ್ ನಿಮ್ಮ ಜೀರ್ಣಂಗವ್ಯ್ಗದಲ್ಲಿಎಉವ ಹೆಚ್ಚುವರಿ ಕೊಬ್ಬನ್ನು ಕೆಳಮಟ್ಟಕ್ಕೆ ತರುವ ಮೂಲಕ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ.
5. ನೀವು ಒಬ್ಬ ಅನೀಮಿಕ್ ಆಗಿದ್ದರೆ ;’ ನೀವು ಅನಿಮೀಯಾದಿಂದ ಬಳಲುತ್ತಿದರೆ ನಿಮ್ಮ ದೇಹಕ್ಕೆ ಅಗತ್ಯವಾಗಿರುವ ನೈಸರ್ಗಿಕ ಐರನ್ನ ಮೂಲ ರಾಗಿ ಗಿಡವಾಗಿದೆ.
6. ನಿಮಗೆ ರಿಲ್ಯಾಕ್ಸ ಅಗಲು ಸಹಕಾರಿ: ರಾಗಿಗಿರುವ ಇನ್ನೊಂದು ಮಹತ್ವದ ಗುಣವೆಂದರೆ ಅದು ನಿಮಗೆ ರಿಲ್ಯಾಕ್ಸ್ ಅಗುವಂತೆ ಮಾಡುತ್ತದೆ. ಒತ್ತಡಪೂರ್ಣ ಜೀವನದಿಂದ ಮುಕ್ತಿ ಸುಗಲು ನಿಮ್ಮ ಪಥ್ಯದಲ್ಲಿ ಸೇರಿಸಬೇಕಾದ ಒಂದು ಉತ್ತಮ ಸಾಮಾಗ್ರಿ ಎಆಗಿ ಮುದ್ದೆಯಾಗಿದೆ.
7.ದೇಹವನ್ನು ತಂಪುಗೊಳಿಸುತ್ತದೆ: ಬೇಸಿಗೆ ಸಮಯದಲ್ಲಿ ನಿಮ್ಮದೇಹದಲ್ಲಿ ತಂಪಾಗಿಸುವ ಶಕ್ತಿ ರಾಗಿಗಿದೆ. ಬೇಸಿಗೆ ಸಮಯದಲ್ಲಿ ಕಂಡುಬರುವ ಹಲವಾರು ರೋಗಗಳಿಗೆ ಪರಿಣಾಮಕಾರಿ ಮದ್ದು ಸಹ ರಾಗಿಯಾಗಿದೆ.
8. ಸದೃಡತೆಗೆ : ನಿಮ್ಮ ಸಾಮರ್ಥ್ಯ ಮತ್ತು ರೋಗ ನಿರೋಧಕ ವ್ಯವಸ್ಥೆಯನ್ನು ಸುಧಾರಿಸಲು, ರಾಗಿ ಮುದ್ದೆಯನ್ನು ನಿಮ್ಮ ಅಯ್ಕೆಯಾಗಿಸಿಕೊಳ್ಳಿ ಇದರಲ್ಲಿ ಪ್ರೋಟೀನ್ ಮಿಟಮಿನ್ ಗೌ ನಿಮ್ಮನ್ನು ದೈಹಿಕವಾಗಿ ಅರೋಗ್ಯವಾಗಿರಿಸುತ್ತದೆ.
9. ಮಲಬ್ಬದ್ಧತೆಗೆ ಉಪಯೋಗಕಾರಿ : ರಾಗಿ ಮುದ್ದೆಯಲ್ಲಿರುವ ಫೈಬರ್ ಗುಣ ಮಲಬದ್ಧತೆಗೆ ಸಹಾಯಕಾರಿ . ನೀವು ಸುಲಭವಾದ ಮಲಬದ್ಧತೆಯನ್ನು ಹೊಂದಲು ನಿತ್ಯವೂ ರಾಗಿಮುದ್ದೆ ಸೇವಿಸಿ
10.ಥೈರಾಯ್ಡ್ ಸಮಸ್ಯೆಗಳಿಂದ ಬಳಲುತ್ತಿದರೆ: ಹೌದು, ರಾಗಿ ಮುದ್ದೆಯ ಆರೋಗ್ಯಕಾರಿ ಪ್ರಯೋಜವೆಂದರೆ ನಿಮ್ಮ ಥೈರಾಯ್ಡ್ ಅನ್ನು ಆರೋಗ್ಯಪೂರ್ಣವಾಗಿರಿಸುತ್ತದೆ. ಹೈಪೋಥೈರಾಯ್ಡ್ ನಿಂದ ಬಳಲುತ್ತಿರುವವರಿಗೆ ಇದು ಉತ್ತಮ.
11. ನೂತನ ತಾಯಂದಿರುಗೆ: ನೂತನ ತಾಯಂದಿರಿಗೆ ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಮತ್ತು ಹಾಲಿನ ಉತ್ಪಾದನೆಯಲ್ಲಿ ರಾಗಿ ಹಕಾರಿಯಾದುದು.
12. ರಾಗಿ ತಂಪು ಗುಣ ಹೊಂದಿರುವ ಸ್ವಾತಿಕ ಆಹಾರ : ಮುಖ್ಯವಾಗಿ ಇದು ಪಿತ್ತಹರ ರಾಗಿಯ ಗಂಜಿಯನ್ನು ನಿತ್ಯವೂ ಸೇವಿಸಿದರೆ ದೇಹ ತಂಪಾಗುತ್ತದೆ. ರಕ್ತವೃದ್ಧಿಯಾಗುತ್ತದೆ.
ವೈದರು ಕೊಡುವ ವಿಟಮಿನ್ ಮಾತ್ರೆಗಳನ್ನು ನುಂಗುವ ಬದಲು ರಾಗೀ ಗಂಜಿಯನ್ನು ನಿಯಮಿತವಾಗಿ ಚಿಟಿಕೆ ಉಪ್ಪು ಹಾಗೂ ಮಜ್ಜಿಗೆಯೊಂದಿಗೆ ಸೇವಿಸಿ ಬಳಲಿಕೆ ಮಾಯವಾಗಿ ಶರೀರವೂ ಹಾಯೆನಿಸುವುದು. ಇದರಲ್ಲಿರುವ ಪೋಷಕಾಂಶಗಳು ಬಹುಬೇಗನೆ ಜೀರ್ಣವಾಗುವಂಥವು.