ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಸೋಮವಾರ ರಾತ್ರಿ 1 ಗಂಟೆಯ ವೇಳೆಗೆ 900ಕ್ಕಿಂತಲೂ ಹೆಚ್ಚು ಎಲ್‍ಪಿಜಿ ಸಿಲಿಂಡರ್ ಸ್ಫೋಟಗೊಂಡ ಘಟನೆ ವರದಿಯಾಗಿದೆ.
ಇಲ್ಲಿರುವ ಖಾಸಗಿ ಗ್ಯಾಸ್ ಕಂಪನಿಯ ದಾಸ್ತಾನು ಮಳಿಗೆಯ ಹೊರಗೆ ಎರಡು ಟ್ರಕ್‍ನಲ್ಲಿಟ್ಟಿದ್ದ ಗ್ಯಾಸ್ ಸಿಲಿಂಡರ್ ಗಳು ಸ್ಫೋಟಗೊಂಡಿವೆ.
ಒಂದು ಟ್ರಕ್‍ನಲ್ಲಿ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಹತ್ತಿರವಿದ್ದ ಇನ್ನೊಂದು ಟ್ರಕ್ ಮತ್ತು ಪಕ್ಕದಲ್ಲಿ ನಿಲ್ಲಿಸಲಾಗಿದ್ದ ಬೊಲೆರೊ ವಾಹನಕ್ಕೂ ಬೆಂಕಿ ಹಬ್ಬಿದೆ.
ಈ ಘಟನೆಯಲ್ಲಿ ವಾಹನಗಳಿಗೆ ಮಾತ್ರ ಹಾನಿಯಾಗಿದ್ದು, ಜನರಿಗೆ ಅಪಾಯವೇನೂ ಸಂಭವಿಸಿಲ್ಲ.
ಅಗ್ನಿಶಾಮಕ ದಳದವರು ಬೆಂಕಿ ನಂದಿಸಿದ್ದು, ಘಟನೆಗೆ ಕಾರಣ ಏನು ಎಂಬುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ.