ಕರ್ನಾಟಕ

ಕೂದಲ ಉದರುವಿಕೆಗೆ ಕೂದಲ ಸೋಂಕು ಕಾರಣವೇ… ಸರಳ ರೀತಿಯಲ್ಲಿ ಪತ್ತೆ ಹಚ್ಚಿ.

Pinterest LinkedIn Tumblr

hair

ಮಂಗಳೂರು: ನನ್ನ ಕೂದಲು ಉದುರಲು ಕಾರಣವೇನು’ ಎಂದು ಅನೇಕ ರೋಗಿಗಳು ನನ್ನಲ್ಲಿ ಕೇಳುತ್ತಾರೆ. ಹೆಲ್ಮಟ್ ಧರಿಸುವುದು ಇದಕ್ಕೆ ಕಾರಣವೇ ಅಥವಾ ಕೂದಲಿಗೆ ಸಾಕಷ್ಟು ಎಣ್ಣೆ ಹಚ್ಚದಿರುವುದು ಅಥವಾ ಬೆಂಗಳೂರಿಗೆ ಸ್ಥಳಾಂತರಗೊಂಡಿರುವುದು ಅಥವಾ ಚೆನ್ನಾಗಿ ತಿನ್ನದಿರುವುದು ಅಥವಾ ಸಾಕಷ್ಟು ನಿದ್ರೆ ಮಾಡದಿರುವುದು ಇದಕ್ಕೆ ಕಾರಣವೇ ಎಂದು ಕೇಳುತ್ತಾರೆ. ವಾಸ್ತವದಲ್ಲಿ ಏನೇ ಇರಲಿ, ಕೂದಲು ಉದುರುವಿಕೆಗೆ ಸಾಕಷ್ಟು ಕಾರಣಗಳಿವೆ. ಅವುಗಳಲ್ಲಿ ಕೆಲವು ಈ ರೀತಿ ಇವೆ.

ಎ. ಕೂದಲು ಉದುರುವ ಮಾದರಿ
ಸಾಮಾನ್ಯವಾಗಿ ನೆತ್ತಿಯ ಮೇಲೆ ಮತ್ತು ನಡು ಭಾಗದಲ್ಲಿ ಕೂದಲು ಉದುರುವಿಕೆ ಕಾಣಬಹುದು. ಆದರೆ ತಲೆ ಹಿಂಭಾಗದಲ್ಲಿ ಕೂದಲು ಸ್ವಲ್ಪಮಟ್ಟಿಗೆ ಹಾಗೆಯೇ ಉಳಿದಿರುತ್ತದೆ. ಈ ಮಾದರಿಯ ಕೂದಲು ಉದುರುವಿಕೆಗೆ ಅನುವಂಶಿಕತೆ ಅಥವಾ ಹಾರ್ಮೋನ್ ಏರಿಳಿತಗಳು ಕಾರಣವಾಗಿರುತ್ತವೆ. ಪಾಲಿಸಿಸ್ಟಿಕ್ ಅಂಡಾಶಯದ ರೋಗ ಮತ್ತು ಥೈರಾಯ್ಡ್ ಕಾಯಿಲೆ ಇದ್ದ ಮಹಿಳೆಯರಲ್ಲಿ ಕೂದಲುದುರುವಿಕೆಯಲ್ಲಿ ಹಾರ್ಮೋನುಗಳ ಪಾತ್ರ ಹೆಚ್ಚು ಕಂಡು ಬರುತ್ತದೆ.

ಬಿ. ನೆತ್ತಿಯ ಸೋಂಕು
ಶಿಲೀಂದ್ರ ಮತ್ತು ಬ್ಯಾಕ್ಟೀರಿಯಾವು ನೆತ್ತಿಯ ಸಾಮಾನ್ಯ ಸೋಂಕುಗಳ ವಿಧಗಳು. ಇಂತಹ ಪ್ರಕರಣಗಳಲ್ಲಿ ವಿಶೇಷವಾಗಿ ಕೂದಲು ಉದುರುವಿಕೆ ಜತೆಗೆ ತಲೆಹೊಟ್ಟು, ನೆತ್ತಿಯಲ್ಲಿ ತುರಿಕೆ, ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.

ಸಿ. ತೆಲೊಗನ್ ಎಫ್ಲವಿಯಮ್
ಈ ಸಮಸ್ಯೆಯಿಂದಲೂ ಕೂದಲು ಉದುರುತ್ತದೆ. ಅದಕ್ಕೆ ನೀರಿನ ಬದಲಾವಣೆ, ಒತ್ತಡ, ಥೈರಾಯ್ಡ್ ಮೊದಲಾದ ಅನಾರೋಗ್ಯ, ಕಾಮಾಲೆ ಮೊದಲಾದವುಗಳು ಕಾರಣ. ಸಾಮಾನ್ಯವಾಗಿ ಇದು ತಾತ್ಕಾಲಿಕವಾಗಿರುತ್ತದೆ, ಇದಕ್ಕೆ ಆರಂಭದಲ್ಲೇ ಚಿಕಿತ್ಸೆ ತೆಗೆದುಕೊಂಡರೆ ಉದುರುವಿಕೆ ಉಲ್ಭಣಾವಸ್ಥೆಗೆ ತಲುಪದಂತೆ ನಿಯಂತ್ರಿಸಬಹುದು.

ಅನೇಕ ಜನರಿಗೆ ಕೂದಲು ಉದುರುವಿಕೆಗೆ ಈ ಮೇಲಿನ ಮೂರು ಅಂಶದಲ್ಲಿ ಒಂದಾಗಿರುತ್ತದೆ. ಕೆಲವು ರೋಗಿಗಳಲ್ಲಿ ಎರಡು ವಿಧದ ಕೂದಲು ಉದುರುವಿಕೆ ಒಟ್ಟಿಗೇ ಉಂಟಾಗಬಹುದು. ಉದಾಹರಣೆಗೆ ವಂಶಪಾರಂಪರ್ಯ ಮತ್ತು ನೆತ್ತಿಯ ಸೋಂಕು ಒಟ್ಟಿಗೇ ಕಾಣಿಸಿಕೊಳ್ಳಬಹುದು. ಇದು ವೇಗವಾಗಿ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಈ ರೀತಿ ಉಂಟಾದರೆ ಸಮಸ್ಯೆ ಸ್ವಲ್ಪ ಜಟಿಲವಾಗುತ್ತದೆ.

ಕೂದಲು ಉದುರುವಿಕೆಗೆ ಪರಿಹಾರ:
ಫ್‌ಯುಇ ಕೂದಲು ಕಸಿ, ಪಿಆರ್‌ಪಿ ಮತ್ತು ಕಾಂಡಕೋಶ ಚಿಕಿತ್ಸೆಯಿಂದ ನಷ್ಟವಾಗಿರುವ ಕೂದಲನ್ನು ಮರು ಪಡೆಯಲು, ಬೊಕ್ಕವಾಗಿರುವ ಜಾಗದಲ್ಲಿ ಕೂದಲು ಬೆಳೆಯಲು, ದಟ್ಟವಾಗಲು ಹಾಗೂ ಅದರ ಸಾಂದ್ರತೆ ಹೆಚ್ಚಿಸಲು ಸಾಧ್ಯವಾಗುತ್ತದೆ ಹಾಗೂ ನಿಮ್ಮ ಕೂದಲಿನ ಫಾಲಿಕಲ್ಸ್ ಅನ್ನು ಗಟ್ಟಿಯಾಗಿಸಬಹುದು.
ತಲೆ ಸ್ವಲ್ಪ ಸ್ವಲ್ಪ ಬೋಳಾಗುತ್ತಿರುವುದು ಹಾಗೂ ಕೂದಲು ಉದುರುತ್ತಿರುವವರಿಗೆ ಹೈ ಡೆನ್ಸಿಟಿ ಹೇರ್ ಟ್ರಾನ್ಸ್‌ಪ್ಲಾಂಟೇಷನ್ ಸೂಕ್ತವಾಗಿದೆ. ಈ ರೀತಿಯ ಕಸಿಯು ನಿಮ್ಮ ಕೂದಲ ಸಾಂದ್ರತೆಯನ್ನು ಹೆಚ್ಚಿಸುವುದಲ್ಲದೆ, ಈ ಹಿಂದೆ ಕೂದಲು ಕಸಿ ಮಾಡಿಸಿಕೊಂಡು ಉತ್ತಮ ಫಲಿತಾಂಶ ಪಡೆಯದ ಜನರಿಗೂ ತುಂಬಾ ನೆರವಾಗುತ್ತದೆ.
ಮೈಕ್ರೊ ಹೇರ್ ಟ್ರಾನ್ಸ್‌ಪ್ಲಾಂಟೇಷನ್‌ನಿಂದ ಕಸಿಯಿಂದ ಒಂದೇ ಸೆಷನ್‌ನಲ್ಲಿ 9 ಸಾವಿರಕ್ಕೂ ಹೆಚ್ಚು ಫಾಲಿಕಲ್ಸ್ ಉತ್ಪಾದನೆಯಾಗಿ ಬೊಕ್ಕ ತಲೆಯ ಹೆಚ್ಚಿನ ಭಾಗವನ್ನು ಕವರ್ ಮಾಡಬಹುದಾಗಿದೆ. ಬಾಡಿ ಹೇರ್ ಟ್ರಾನ್ಸ್ ಪ್ಲಾಂಟೇಷನ್ ವಿಧಾನದ ಮೂಲಕ ಗಡ್ಡ, ಎದೆ ಭಾಗ ಮತ್ತು ತಲೆಯ ಹಿಂಬದಿಯಿಂದ ಕೂದಲನ್ನು ತೆಗೆದು ಬೊಕ್ಕವಾಗಿರುವ ಭಾಗದಲ್ಲಿ ಕಸಿ ಮಾಡಿ ಕೂದಲು ಬರುವಂತೆ ಮಾಡಲಾಗುತ್ತದೆ. ಕೂದಲ ಕಸಿಯನ್ನು ಪುರುಷರು ಮಾತ್ರವಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಕೂದಲು ನಷ್ಟವಾಗಿರುವ ಮಹಿಳೆಯರಿಗೂ ಮಾಡಲಾಗುತ್ತದೆ.

ಎಫ್ ಯುಇ ಕೂದಲ ಕಸಿ ವಿಧಾನದಲ್ಲಿ ವಿಶೇಷವಾದ ಮೆಷಿನ್ ಮೂಲಕ ತಲೆ ಹಿಂಬದಿಯ ಕೂದಲನ್ನು ಹೊರತೆಗೆದು ಬೋಳಾಗಿರುವ ಪ್ರದೇಶದಲ್ಲಿ ಅಳವಡಿಸಲಾಗುತ್ತದೆ. ಕೂದಲನ್ನು ಒಂದು ಸಲ ಕಸಿ ಮಾಡಿದ ನಂತರ ಅದು ಬೆಳೆಯಲು 3 ತಿಂಗಳು ಬೇಕಾಗುತ್ತದೆ. ಈ ರೀತಿಯಾಗಿ ಕಸಿ ಮಾಡಿಸಿಕೊಂಡ ಕೂದಲು ಶಾಶ್ವತವಾಗಿರುವುದು ಮಾತ್ರವಲ್ಲದೆ, ಸ್ಟೈಲ್ ಮಾಡಬಹುದು, ಗುಂಗುರು ಅಥವಾ ನೇರ ಮಾಡಿಕೊಳ್ಳಬಹುದು. ಒಟ್ಟಾರೆ ನಿಮ್ಮ ಮನಸ್ಸಿಗೆ ಇಷ್ಟವಾಗುವ ರೀತಿಯಲ್ಲಿ ಕೂದಲನ್ನು ವಿನ್ಯಾಸ ಮಾಡಿಕೊಳ್ಳಬಹುದು.

ಕಾಂಡಕೋಶ ಚಿಕಿತ್ಸಾ ವಿಧಾನದಲ್ಲಿ ನಿಮ್ಮದೇ ಕೂದಲಿನ ಕಾಂಡಕೋಶವನ್ನು ಬಳಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ. ಈ ಚಿಕಿತ್ಸಾ ವಿಧಾನದಿಂದ ಕೆಲವೇ ದಿನಗಳಲ್ಲಿ ನಿಮ್ಮ ಕೂದಲು ಉದುರುವುದು ಕಡಿಮೆಯಾಗಿ, ಹೊಸ ಕೂದಲು ಬೆಳೆದಿರುವುದನ್ನು ನೀವು ಗಮನಿಸಬಹುದು. ನಿಗದಿತ ಸಮಯದ ಅವಧಿಯಲ್ಲಿ ಹೊಸ ಕೂದಲು ದಟ್ಟವಾಗಿ , ಉದ್ದವಾಗಿ ಬೆಳೆಯುತ್ತವೆ.

ಲು ಜೋನ್ ಮೆಡ್‌ಸ್ಪಾ , ಜನರು ತಮ್ಮ ಅಗತ್ಯಕ್ಕೆ ತಕ್ಕಂತೆ ಎಫ್‌ಯುಇ, ಮೈಕ್ರೊ ಎಫ್‌ಯುಇ ಮತ್ತು ಮೈಕ್ರೊ ಹೈ ಡೆನ್ಸಿಟಿ ಹೇರ್ ಟ್ರಾನ್ಸ್‌ಪ್ಲಾಂಟೇಷನ್ ಆಯ್ಕೆಗಳನ್ನು ಆಯ್ದುಕೊಳ್ಳುವ ಮತ್ತು ಉತ್ತಮ ಸೇವೆ ನೀಡುವ ಏಕೈಕ ಕೇಂದ್ರವಾಗಿದೆ. ಉತ್ತಮ ಸಾಧನಗಳು, ನುರಿತ ಸರ್ಜನ್‌ಗಳು ಮತ್ತು ಟೆಕ್ನಿಷಿಯನ್‌ಗಳನ್ನು ಒಳಗೊಂಡ ಅತ್ಯಾಧುನಿಕ ಚಿಕಿತ್ಸಾ ವಿಧಾನವನ್ನು ಈ ಕೇಂದ್ರ ಒಳಗೊಂಡಿದೆ. ಸರ್ಜನ್‌ಗಳ ಕೌಶಲವು ನಿಮಗೆ ಉತ್ತಮ ಫಲಿತಾಂಶ ಹಾಗೂ ಅಸಾಧಾರಣ ತೃಪ್ತಿಯನ್ನು ಖಾತ್ರಿಪಡಿಸುತ್ತದೆ.

Comments are closed.