ಕರ್ನಾಟಕ

ಹೋಟೆಲ್, ರೆಸ್ಟೋರೆಂಟ್’ಗಳ ಅವಧಿ ವಿಸ್ತರಣೆ

Pinterest LinkedIn Tumblr

gondia-hotel
ಬೆಂಗಳೂರು(ಡಿ.24): ನಗರದಲ್ಲಿ ಹೋಟೆಲ್, ರೆಸ್ಟೋರೆಂಟ್ಗಳ ಅವಧಿ ವಿಸ್ತರಿಸಲಾಗಿದೆ. ವೈನ್ ಶಾಪ್ ಹೊರತುಪಡಿಸಿ ಡಿಸೆಂಬರ್ 31ರ ರಾತ್ರಿ 2 ಗಂಟೆಯವರೆಗೂ ಹೋಟೆಲ್, ರೆಸ್ಟೋರೆಂಟ್ ಅವಧಿಯನ್ನು ವಿಸ್ತರಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್ ರೆಡ್ಡಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾಲೀಕರಿಗೆ ಸಾಕಷ್ಟು ಎಚ್ಚರವಹಿಸುವಂತೆ ಸೂಚನೆ ನೀಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಹುಡುಗಿಯರನ್ನು ಚುಡಾಯಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Comments are closed.