ಕರ್ನಾಟಕ

ಕಳ್ಳನನ್ನು ಹತ್ಯೆ ಮಾಡಿದ ಸೆಕ್ಯೂರಿಟಿ ಗಾರ್ಡ್!

Pinterest LinkedIn Tumblr

kalla
ಬೆಂಗಳೂರು,ಡಿ.23-ನಾಗರಬಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ನಿನ್ನೆ ಮಧ್ಯರಾತ್ರಿ ಕಳವು ಮಾಡಲು ಬಂದ ಕಳ್ಳನೊಬ್ಬ ಸೆಕ್ಯೂರಿಟಿ ಗಾರ್ಡ್ ಹಾರಿಸಿದ ಗುಂಡು ತಗುಲಿ ಮೃತಪಟ್ಟಿದ್ದಾನೆ.
ಮೃತಪಟ್ಟ ಕಳ್ಳನನನ್ನು ತುಮಕೂರು ಮೂಲದ ಮಾಳಗಾಳದ ಬೆಟ್ಟಯ್ಯ(50)ಎಂದು ಗುರುತಿಸಲಾಗಿದ್ದು ಆತನ ಜೊತೆ ಕಳವು ಮಾಡಲು ಬಂದಿದ್ದ ಇನ್ನಿಬ್ಬರು ಪರಾರಿಯಾಗಿದ್ದಾರೆ,
ಕಳ್ಳರ ಮೆಲೆ ಬಂದೂಕಿನಿಂದ ಗುಂಡು ಹಾರಿಸಿದ ಮಡಿಕೇರಿ ಮೂಲದ ಸೆಕ್ಯೂರಿಟಿ ಗಾರ್ಡ್ ಮೋಹನ್ ಕುಮಾರ್‍ನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಬಿಡಿಎ ಕಾಂಪ್ಲೆಕ್ಸ್‍ನ ಹಿಂಭಾಗದಲ್ಲಿ ಜೆಡಿಎಸ್ ಮುಖಂಡ ಜವರಾಯಿ ಗೌಡ ಮನೆ ನಿರ್ಮಾಣ ಮಾಡುತ್ತಿದ್ದು ಅಲ್ಲಿನ ಭದ್ರತೆಯನ್ನು ಖಾಸಗಿ ವಿಎಸ್‍ಎಸ್ ಏಜೆನ್ಸಿಗೆ ನೀಡಲಾಗಿತ್ತು ಏಜೆನ್ಸಿಯವರು ಮೋಹನ್‍ಗೌಡನನ್ನು ನಿರ್ಮಾಣ ಹಂತದ ಮನೆಯ ಭದ್ರತೆಗಾಗಿ ನಿಯೋಜಿಸಿದ್ದರು.
ಮೋಹನ್‍ಗೌಡ ಕಟ್ಟಡ ಕಾವಲು ಕಾಯುತ್ತಿದ್ದಾಗ ಮಧ್ಯರಾತ್ರಿ 2.30ರ ವೇಳೆ ಬೆಟ್ಟಯ್ಯ ಸೇರಿ ಮೂವರು ಕಳ್ಳರು ಕಟ್ಟಡದಲ್ಲಿ ಕÀಳ್ಳತನ ಮಾಡಲು ಬಂದು ನೆಲ ಮಹಡಿಯ ಬೀಗ ಹೊಡೆದು ಒಳನುಗ್ಗಿ ಎಲೆಕ್ಟ್ರಿಕ್ ವೈರ್ ಕೇಬಲ್‍ಗಳನ್ನು ದೋಚಲು ಯತ್ನಿಸಿದ್ದಾರೆ.
ಈ ವೇಳೆ ನಾಯಿಗಳು ಬೊಗಳಿದ ಶಬ್ದ ಕೇಳಿ ಮೋಹನ್‍ಕುಮಾರ್ ನೆಲ ಮಹಡಿಗೆ ಬಂದು ನೋಡಿ ಗಲಾಟೆ ಮಾಡಿ ಕಳ್ಳರನ್ನು ಓಡಿಸಲು ಯತ್ನಿಸಿದಾಗ ಓರ್ವ ದೊಣ್ಣೆಯಿಂದ ಹೊಡೆಯಲು ಬಂದಿದ್ದು ಸ್ವಯಂ ರಕ್ಷಣೆಗೆ ಬಂದೂಕಿನಿಂದ ಒಂದು ಸುತ್ತು ಗುಂಡು ಹಾರಿಸಿದ್ದಾನೆ.
ಅದು ಬೆಟ್ಟಯ್ಯಗೆ ತಗುಲಿ ಆತ ಮೃತಪಟ್ಟಿದ್ದು ಉಳಿದಿಬ್ಬರೂ ಪರಾರಿಯಾಗಿದ್ದು ಅವರಿಗಾಗಿ ಶೋಧ ನಡೆಸಲಾಗಿದೆ.ಬೆಟ್ಟಯ್ಯನ ಅಪರಾಧ ಹಿನ್ನಲೆಯನ್ನು ಪರಿಶೀಲನೆ ನಡೆಸುತ್ತಿದ್ದು ಗುಂಡು ಹಾರಿಸಿದ ಮೋಹನ್‍ಗೌಡನನ್ನು ವಿಚಾರಣೆಗೊಳಪಡಿಸಲಾಗಿದೆ, ಮಡಿಕೇರಿಯಿಂದ ಆತ ಬಂದೂಕು ತೆಗೆದುಕೊಂಡು ಬಂದಿದ್ದ ಎಂದು ತಿಳಿದು ಬಂದಿದೆ.
ಘಟನೆ ನಡೆದ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಚರಣ್‍ರೆಡ್ಡಿ,ಡಿಸಿಪಿ ಲಾಭೂರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕಾಮಾಕ್ಷಿಪಾಳ್ಯ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ.

Comments are closed.