ಕರ್ನಾಟಕ

‘ಮೈಲಿಗೊಂದು ಬಿಯರ್’ ಉತ್ಸವ

Pinterest LinkedIn Tumblr

red_wine_medicin
ಬೆಂಗಳೂರು, ಡಿ ೨೩- ‘ಪಬ್ ಸಿಟಿ’ ಎಂದು ಗುರಿತಿಸಿಕೊಂಡಿರುವ ಉದ್ಯಾನ ನಗರಿಯಲ್ಲಿ ಆಗೊಮ್ಮೆ ಈಗೊಮ್ಮೆ ಬಿಯರ್ ಉತ್ಸವಗಳು ನಡೆಯುತ್ತಲೇ ಇರುತ್ತದೆ. ಆದರೆ ಈ ಬಾರಿ ನಡೆಯುತ್ತಿರುವ ಬಿಯರ್ ಉತ್ಸವ ನಿಜಕ್ಕೂ ಭಿನ್ನ……
ದೇಶದ ಅತ್ಯಂತ ದೊಡ್ಡ ‘ಬಿಯರ್ ಫೆಸ್ಟಿವಲ್’ ಎಂದು ಖ್ಯಾತಿ ಪಡೆದಿರುವ ‘ಅಕ್ಟೋಬರ್ ಫೆಸ್ಟ್’ ನಗರದಲ್ಲಿ ಭಾರಿ ಜನಸಮೂಹವನ್ನು ಸೆಳೆದಿದೆ, ಅದರಂತೆ ಇದೀಗ ಇನ್ನಷ್ಟು ಜನರನ್ನು ಆಕರ್ಷಿಸಲು ದೇಶದಲ್ಲೇ ಪ್ರಪ್ರಥಮ ಬಾರಿಗೆ ‘ಮೈಲಿಗೊಂದು ಬಿಯರ್’ ಎಂಬ ಉತ್ಸವಕ್ಕೆ ಸಿಲಿಕಾನ್ ನಗರ ಸಜ್ಜಾಗುತ್ತಿದೆ.
ಈ ಉತ್ಸವದ ಮಜಾನೇ ಬೇರೆ. ಪಾಲ್ಗೋಳುವ ಸ್ಫರ್ಧಿಗಳಿಗೆ ೧ ಪಿಂಟ್ ಬಿಯರ್ ನೀಡಲಾಗುವುದು ಅದನ್ನು ಕುಡಿದು ಕಾಲು ಮೈಲಿ ಓಡಿದರೆ ಇನ್ನೊಂದು ಪಿಂಟ್ ಬಿಯರ್, ಹೀಗೆ ೧ ಕಿಮೀ ವರೆಗೂ ಓಡಿದರೇ ಮತ್ತೆ ಮತ್ತೆ ಬಿಯರ್ ನೀಡುವುದೇ ವಿಶೇಷ. ಹಲವಾರು ವಿಭಾಗಗಳಲ್ಲಿ ನಡೆಯುವ ‘ಮೈಲಿಗೊಂದು ಬಿಯರ್’ ಉತ್ಸವದಲ್ಲಿ ಭಾಗವಹಿಸಲು ಯುವಜನತೆ ಕಾತುರದಿಂದ ಕಾಯುತ್ತಿದ್ದಾರೆ.
ಬ್ರಿಗೇಡ್ ಆರ್ಚಿಡ್ ಹಾಗೂ ರೆಡಿಯೋ ಇಂಡಿಗೋ ೯೧.೯ ವತಿಯಿಂದ ದೇವನಹಳ್ಳಿಯಲ್ಲಿ ಬರುವ ಜ.೧೫ರಂದು ಈ ಬೃಹತ್ ಉತ್ಸವವನ್ನು ಆಯೋಜಿಸಲಾಗುತ್ತಿದೆ, ಅದಕ್ಕಾಗಿ ಭಾರಿ ತಯಾರಿ ಕೂಡ ನಡೆಸಿದೆ. ಮೂರು ವಿಭಾಗಗಳಲ್ಲಿ ನಡೆಯುವ ಸ್ಪರ್ಧೆಯಲ್ಲಿ ಪುಲ್ ಬಿಯರ್‌ಮೈಲಿ, ಹಾಫ್ ಬಿಯರ್ ಮೈಲಿ, ತಂಡಗಳೊಂದಿಗೆ ಬಿಯರ್ ಸವಿಯುತ್ತಾ ಆಟವಾಡಬಹುದು.
ಕೊನೆ ಹಂತ ತಲುಪಿಸದರೇ ಅವರಿಗೆ ಚಾಂಪಿಯನ್ ಪಟ್ಟ ನೀಡಿ ಬಹುಮಾನವನ್ನು ಕೂಡ ನೀಡಲಾಗುವುದು. ಇದರೊಂದಿಗೆ ವಿಶೇಷ ಖಾದ್ಯ, ಸಂಗೀತ, ಇತರೆ ಆಟಗಳು ಇರಲಿವೆ. ಅಕ್ಟೋಬರ್ ಫೆಸ್ಟ್‌ನಲ್ಲಿ ಅಬ್ಬರದ ಸಂಗೀತದ ಜತೆಗೆ ಬಿಯರ್ ಹೀರುತ್ತಾ ‘ಅಕ್ಟೋಬರ್ ಫೆಸ್ಟ್‌ಗೆ ರಂಗು ತುಂಬಬಹುದು. ಅಲ್ಲದೇ ಸಾಹಿತ್ಯ ಉತ್ಸವದಲ್ಲಿ ಕಥೆ, ಕವಿತೆ ಕೇಳುತ್ತಾ ಬಿಯರು ಹೀರಬಹುದು, ಹಾಗೂ ಉತ್ಸವದಲ್ಲಿ ಪಾಲ್ಗೊಂಡಿದ್ದ ಹಲವರು ಮಟಮಟ ಮಧ್ಯಾಹ್ನದ ವೇಳೆ, ಬಿಯರ್ ಹೀರುತ್ತ ಗೋಷ್ಠಿಗಳನ್ನು ಆಲಿಸುತ್ತಿದ್ದ ದೃಶ್ಯ ಕಾಣಬಹುದು. ನಗರದಲ್ಲಿ ಹೀಗೆ ಬಿಯರ್ ಸವಿಯಲು ಸಾಕಷ್ಟು ಉತ್ಸವಗಳು ನಡೆಯುತ್ತಿದ್ದು, ಪ್ರತಿಬಾರಿ ಬಿಯರ್ ಉತ್ಸವಗಳು ಜನರ ಆಕರ್ಷಿಸಿ ಮನಸೂರೆಗೊಳ್ಳತ್ತಿದೆ.

Comments are closed.