ಕರ್ನಾಟಕ

1 ಕೋಟಿಯ ನಕಲಿ ವಾಚ್‌ಗಳ ವಶ

Pinterest LinkedIn Tumblr

watch
ಬೆಂಗಳೂರು,ಡಿ.೨೩-ರಾಡೋ,ಹುಬ್ಲೋಟ್,ತಿಸೋಟ್,ಒಮೇಗಾ,ಫಾಸಿಲ್ ಸೇರಿದಂತೆ ಪ್ರತಿಷ್ಠಿತ ಕಂಪನಿಗಳ ನಕಲಿ ವಾಚ್‌ಗಳ ಮಾರಾಟ ಜಾಲವನ್ನು ಭೇದಿಸಿ ಮೂವ್ವರನ್ನು ಬಂಧಿಸಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಪೊಲೀಸರು ೧ಕೋಟಿ ೮ಲಕ್ಷ ೨೦ ಸಾವಿರ ಮೌಲ್ಯದ ನಕಲಿ ವಾಚುಗಳನ್ನು ವಶಪಡಿಸಿಕೊಂಡಿದ್ದಾರೆ.
ಜೆ.ಜೆ.ನಗರದ ಎಂ.ಬಿ.ಷಫೀವುಲ್ಲಾ(೪೦) ಯಲಹಂಕದ ಅಬ್ರಾರ್(೨೩)ಗೋರಿಪಾಳ್ಯದ ಖಲೀಂ(೩೪)ಬಂಧಿತ ಆರೋಪಿಗಳಾಗಿದ್ದಾರೆ,ಬಂಧಿತರಿಂದ ೧ಕೋಟಿ ೮ಲಕ್ಷ ೨೦ ಸಾವಿರ ಮೌಲ್ಯದ ೫೪೧ ನಕಲಿ ವಾಚ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಶರತ್‌ಚಂದ್ರ ಅವರು ತಿಳಿಸಿದ್ದಾರೆ.
ಪ್ರತಿಷ್ಠಿತ ಕಂಪನಿಗಳ ನಕಲಿ ವಾಚ್‌ಗಳ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತ ಆಧರಿಸಿ ನಾಗಸಂದ್ರದ ಅನ್ವೇಶ್ ಐ.ಪಿ.ಆರ್ ಸರ್ವಿಸ್, ಚಿಕ್ಕಪೇಟೆ ಯ ಷಫಿವುಲ್ಲಾ ವಾಚ್ ಶಾಫ್,ಎ.ಜೆ.ಟೈಮ್ಸ್, ಎ.ಎಂ.ಟೈಮ್ಸ್‌ಗಳ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ.
ನಕಲು ವಾಚ್ ಗಳನ್ನು ಆರೋಪಿಗಳು ಮುಂಬೈ ಹಾಗೂ ಚನೈನಿಂದ ೩ ಸಾವಿರ ರಿಂದ ೪ಸಾವಿರ ರೂ ಗಳಿಗೆ ಖರೀದಿಸಿ ಅವುಗಳನ್ನು ಅಸಲಿ ಎಂದು ೭ರಿಂದ ೮ ಸಾವಿರ ರೂಗಳಿಗೆ ಮಾರಾಟ ಮಾಡುತ್ತಿರುವುದು ವಿಚಾರಣೆಯಲ್ಲಿ ಕಂಡುಬಂದಿದೆ. ಆರೋಪಿಗಳ ವಿರುದ್ದ ಚಿಕ್ಕಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.