ಕರ್ನಾಟಕ

ರಾಜ್ಯ ಸರ್ಕಾರದಿಂದ ಆದಿವಾಸಿಗಳಿಗೆ ಬೆತ್ತಲೆ ಭಾಗ್ಯ: ಕುಮಾರಸ್ವಾಮಿ

Pinterest LinkedIn Tumblr

HD-Kumarswamyclr-636x400
ಕೊಪ್ಪಳ: ಕೊಡಗಿನ ದಿಡ್ಡಳ್ಳಿಯ ಆದಿವಾಸಿಗಳಿಗೆ ಬೆತ್ತಲೆ ಭಾಗ್ಯ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೊಪ್ಪಳ ತಾಲೂಕಿನ ಕೋಳುರು ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಮೃತ ರೈತ ಸೋಮಪ್ಪನ ಮನೆಗೆ ಭೇಟಿ ನೀಡಿ ಮೃತನ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಕುಮಾರಸ್ವಾಮಿ 50 ಸಾವಿರ ರೂ. ಧನ ಸಹಾಯ ನೀಡಿದರು.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದಿಡ್ಡಳ್ಳಿಯ ಆದಿವಾಸಿಗಳಿಗೆ ಬೆತ್ತಲೆಯಾಗಿ ಓಡಾಡುವಂತ ಪರಿಸ್ಥಿತಿ ನಿರ್ಮಾಣಮಾಡಿದ್ದೇ ರಾಜ್ಯ ಸರ್ಕಾರ. ರಾಜ್ಯದ ಮುಖ್ಯಮಂತ್ರಿಗಳಾಗಿ ಆದಿವಾಸಿಗಳ ಬಗ್ಗೆ ಉಡಾಫೆಯಾಗಿ ಮಾತನಾಡಿದ್ದು ಸರಿಯಲ್ಲ. ಕೂಡಲೇ ಆದಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಅವರು ಆಗ್ರಹಿಸಿದರು.

ಸಾಲಮನ್ನಾ ಮಾಡಲಿ: ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಲಿವೆ. ಇದನ್ನು ತಡೆಯಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿಲ್ಲ, ಬದಲಾಗಿ ರೈತರ ಆತ್ಮಹತ್ಯೆಯನ್ನು ಕಡೆಗಣಿಸುತ್ತಿದೆ. ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಮೀನಾಮೇಷ ಎಣಿಸುತ್ತಿದೆ. ಕೇಂದ್ರ ಸರ್ಕಾರ ಶೇ.50ರಷ್ಟು ಕೊಡಲಿ ಎಂದು ಕಾಯುತ್ತಿದೆ. ಅದಕ್ಕೆ ಕೇಂದ್ರ ಸರ್ಕಾರ ಕೊಡುವ ಮುನ್ನ ರಾಜ್ಯ ಸರ್ಕಾರ ಉಳಿದ ಶೇ.50ರಷ್ಟಾದ್ರು ಸಾಲ ಮನ್ನಾ ಮಾಡಿ ತೋರಿಸಲಿ ಎಂದು ಸಿದ್ದರಾಮಯ್ಯಗೆ ಸವಾಲು ಹಾಕಿದರು.

ಅಧಿಕಾರಿಗಳ ಮೂಲಕ ಲೂಟಿ: ರಾಜ್ಯ ಸರ್ಕಾರ ಕೇಂದ್ರದ ಮುಂದೆ ಹೋಗಿ ಧರಣಿ ಮಾಡಲಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೆಸೆರೆರೆಚಾಟದ ಮಧ್ಯೆ ರಾಜ್ಯದ ಜನತೆ ಕಂಗಾಲಾಗುತ್ತಿದ್ದಾರೆ. ರಾಜ್ಯ ಸರ್ಕಾರ ಅಧಿಕಾರಿಗಳ ಮೂಲಕ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಕೆಪಿಎಸ್‍ಸಿ, ಆರ್‍ಟಿಓ ಅಧಿಕಾರಿಗಳ ನೇಮಕಾತಿಯಲ್ಲಿಯೂ ಒಂದು ಕೋಟಿ ರೂ.ಗೆ ಬೇಡಿಕೆ ಇಟ್ಟು ಹಣ ಲೂಟಿ ಮಾಡುತ್ತಿದ್ದಾರೆ. ಸುಭೋದ್ ಯಾದವ್‍ರನ್ನು ಕೆಪಿಎಸ್‍ಸಿ ಅಧ್ಯಕ್ಷ ಸ್ಥಾನದಿಂದ ವರ್ಗಾವಣೆಗೊಳಿಸಿ ಶ್ಯಾಮ್ ಭಟ್‍ರನ್ನು ನೇಮಕ ಮಾಡಿದ್ದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.

Comments are closed.