ಕರ್ನಾಟಕ

ಎಟಿಎಂ ಹಣ ತುಂಬುವ ವಾಹನವೊಂದಿಗೆ ಚಾಲಕ ಪರಾರಿ

Pinterest LinkedIn Tumblr

vehicleಬೆಂಗಳೂರು: ವ್ಯಾನ್ ಚಾಲಕನೊಬ್ಬ 20 ಲಕ್ಷ ರುಪಾಯಿ ಹಣ ಹಾಗೂ ವಾಹನದೊಂದಿಗೆ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅಸ್ಸಾಂ ಮೂಲದ 25 ವರ್ಷದ ಸಿಬ್ಬನ್ ಹುಸೇನ್ ಎಂಬಾತ ಎಟಿಎಂಗೆ ಹಣ ಹಾಕುವ ವ್ಯಾನ್ ನೊಂದಿಗೆ ಪರಾರಿಯಾಗಿದ್ದಾನೆ. ಸೆಕ್ಯೂರ್ ವ್ಯಾಲ್ಯೂ ಇಂಡಿಯಾ ಕಂಪನಿಗೆ ಸೇರಿದ ವ್ಯಾನ್ 30 ಲಕ್ಷ ರುಪಾಯಿ ಹಣ ಎಟಿಎಂಗಳಿಗೆ ತುಂಬಲು ಹೊರಟಿತ್ತು. ಮಡಿವಾಳದಿಂದ ಹಣ ತುಂಬಿಸಿಕೊಂಡು ಹೋಗಿದ್ದ ವ್ಯಾನ್ ಸಂಜೆ 5 ಗಂಟೆ ಸುಮಾರಿಗೆ ಕೋರಮಂಗಲದ ಎಟಿಎಂವೊಂದರಲ್ಲಿ 2 ಲಕ್ಷ ಹಣ ತುಂಬಿತ್ತು.
ನಂತರ ಏರ್ ಪೋರ್ಟ್ ಠಾಣಾ ವ್ಯಾಪ್ತಿಯ ವಿಂಡ್ ಟನಲ್ ಕಡೆ ತೆರಳಿದ್ದ ವ್ಯಾನ್ ಈ ವೇಳೆ ಹಣ ತುಂಬಲು ಇದ್ದ ಸಿಬ್ಬಂದಿ ವ್ಯಾನ್ ನಲ್ಲಿ 20 ಲಕ್ಷ ಹಣ ಇದ್ದ ಟ್ರಂಕ್ ಹಾಗೂ ಚಾಲಕನನ್ನು ಬಿಟ್ಟು ಹೋಗಿದ್ದರು. ಆಗ ಚಾಲಕ 10 ಬಂಡಲ್ ನಲ್ಲಿದ್ದ 20 ಲಕ್ಷ ಮೌಲ್ಯದ ಹೊಸ 2000 ನೋಟುಗಳು ಹಾಗೂ ವ್ಯಾನ್ ಸಮೇತ ಪರಾರಿಯಾಗಿದ್ದ.
ಇಂದು ಮಧ್ಯಾಹ್ನ ಹೆಚ್ಎಸ್ಆರ್ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಂದೂರು ಸರ್ಕಲ್ ಬಳಿ 20 ಲಕ್ಷ ಹಣವಿದ್ದ ವ್ಯಾನ್ ಪತ್ತೆಯಾಗಿದೆ. ಚಾಲಕ ಪರಾರಿಯಾಗಿದ್ದಾನೆ.

Comments are closed.