ಕರ್ನಾಟಕ

ಮೇಟಿ ಪ್ರಕರಣ: ನಾಲ್ಜು ಮಂದಿ ವಿರುದ್ಧ ವಿಜಯಲಕ್ಷ್ಮಿ ದೂರು

Pinterest LinkedIn Tumblr

vijayaಬಾಗಲಕೋಟ, ಡಿ. ೧೮ – ಮಾಜಿ ಸಚಿವ ಎಚ್.ವೈ.ಮೇಟಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ವಿಜಯಲಕ್ಷ್ಮೀ ತನಗೆ ಜೀವ ಬೆದರಿಕೆ ಇದೆ ಎಂದು ಇಲ್ಲಿಯ ನವನಗರದ ಪೊಲೀಸ್ ಠಾಣೆಯಲ್ಲಿ ತಡರಾತ್ರಿ ದೂರು ನೀಡಿದ್ದಾರೆ.
ಬಾಗಲಕೋಟೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೇದೆ ಸುಭಾಷ್ ಮುಗಳಖೋಡ ಸೇರಿ ಮಿರಜಕರ್, ಅಶೋಕ, ಸಿದ್ದಲಿಂಗ ಎಂಬ ನಾಲ್ಕು ಜನರ ಮೇಲೆ ನವನಗರದ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಮಹಿಳೆ ರಾತ್ರೋರಾತ್ರಿ ಬಂದು ಜೀವ ಬೆದರಿಕೆ ಆರೋಪದಡಿ ದೂರು ದಾಖಲಿಸಿದ್ದಾರೆ.
ನಾಲ್ಕು ಜನರಿಂದ ನನಗೆ ಜೀವ ಬೆದರಿಕೆ ಇದೆ ಎಂದು ಐಪಿಸಿ ಸೆಕ್ಷನ್ 307 ಕಾಯ್ದೆಯಡಿ ದೂರು ದಾಖಲಾಗಿದೆ.
ನವನಗರದ ಪೊಲೀಸ್ ಠಾಣೆಯಲ್ಲಿ ಸುಮಾರು 11 ಗಂಟೆಯವರೆಗೂ ಮಾಧ್ಯಮದವರು ಕಾಯುತ್ತಿದ್ದರು ಆದರೆ ಸಂತ್ರಸ್ತ ಮಹಿಳೆ ಮಾತ್ರ ಮಾಧ್ಯಮದವರ ಕಣ್ಣತಪ್ಪಿಸಿ ರಾತ್ರೋ ರಾತ್ರಿ ದೂರು ನೀಡಿ ಪರಾರಿಯಾದರು.
ಆದರೆ ಪೇದೆ ಸುಭಾಷ್ ಮುಗಳಖೋಡ ಮಾತ್ರ ಇನ್ನೂ ನಾಪತ್ತೆಯಾಗಿದ್ದಾರೆ.
ಜಗ್ಗಲಾರೆ, ಬಗ್ಗಲಾರೆ-ಮೇಟಿ
ರಾಸ ಲೀಲೆ ಸಿಡಿ ಬಿಡುಗಡೆಯಾದ ಬಳಿಕ ಮಾಜಿ ಸಚಿವ ಎಚ್.ವೈಮೇಟಿ ಅವರು ತಮ್ಮ ಸ್ವಗ್ರಾಮ ತಿಮ್ಮಾಪುರದಲ್ಲಿ ವಾಸ್ತವ್ಯ ಹೂಡಿದ್ದಾರೆ.
ಮಾಜಿ ಸಚಿವ ಮೇಟಿಯವರು ಗ್ರಾಮಕ್ಕೆ ಬರುತ್ತಿದ್ದಂತೆ ಅಮೀನಗಡ, ಕಮತಗಿ, ಶಿರೂರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಹಿತೈಷಿಗಳು, ಅಭಿಮಾನಿಗಳು ಆಗಮಿಸಿ ಭೇಟಿಯಾದರು.
ಈ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೇಟಿಯವರು ಇಡೀ ಪ್ರಕರಣದಲ್ಲಿ ನಾನು ನಿರಪರಾಧಿಯಾಗಿದ್ದೇನೆ. ನನ್ನ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು ಈ ಘಟನೆ ನಡೆಸಿದ್ದಾರೆ.ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಕಾರಣಕ್ಕೆ ಎದೆ ಗುಂದಬೇಡಿ,ಧೈರ್ಯದಿಂದ ಪಕ್ಷದಲ್ಲಿ ಕೆಲಸ ಮಾಡಿ ಎಂದು ಹೇಳಿದರು.
ಈ ಪ್ರಕರಣದ ನೆಪದಲ್ಲಿ ನನ್ನ ರಾಜಕೀಯ ಅಂತ್ಯವಾಯಿತು,ಎಲ್ಲವೂ ರಾಜಕಾರಣ ಮುಗಿದೆ ಬಿಡತಿ ಎಂದು ಕೇಳಿ ಬರುತ್ತಿದೆ.ಆದರೆ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುವುದು ಕನಸಿನ ಮಾತಾಗಿದೆ.ನನ್ನ ವಿರೋಧಿಗಳು ಈ ರೀತಿ ಇಲ್ಲಸಲ್ಲದ ಉಹಾಪೋಹಗಳನ್ನು ಹರಿ ಬಿಡುತ್ತಿದ್ದಾರೆ.ಅದಕೆ ನಾನು ಜಗ್ಗುವುದಿಲ್ಲ, ಬಗ್ಗಲ್ಲ. ಕೊನೆಯವರೆಗೂ ರಾಜಕೀಯದಲ್ಲಿರುತ್ತೇನೆ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

Comments are closed.