ಮಂಗಳೂರು: ಯಾವುದೇ ತಾಯಿಗಾದರು ಸಿಸೇರಿಯನ್ನಂತಹ ನೋವಿನ ಮತ್ತು ದೇಹವನ್ನು ಜರ್ಜರಿತಗೊಳಿಸುವಂತಹ ಶಸ್ತ್ರ ಚಿಕಿತ್ಸೆ ತೀವ್ರ ಯಾತನಾಮಯವಾಗಿರುತ್ತದೆ. ಅದಕ್ಕಾಗಿ ಅವರು ಮತ್ತೆ ಸಿಸೇರಿಯನ್ ಮಾಡಿಸಿಕೊಳ್ಳುವುದು ತಪ್ಪಿದರೆ ಸಾಕು ಎಂದು ಕಾಯುತ್ತಾರೆ. ಆದರೆ ಸಿಸೇರಿಯನ್ ಇಲ್ಲದೆ ಎರಡನೆ ಹೆರಿಗೆಯನ್ನು ಸಾಮಾನ್ಯ ಹೆರಿಗೆಯಾಗಿ ಹೇಗೆ ಮಾಡಿಸಿಕೊಳ್ಳುವುದು ಎಂಬ ಕುರಿತು ಇವರಿಗೆ ಹಲವಾರು ಸಂಶಯಗಳು ಇರುತ್ತವೆ. ನಿಮಗೂ ಕೆಲವೊಂದು ಸಂಶಯಗಳು ಇವೆಯಲ್ಲವೇ? ಮುಂದೆ ಓದಿ
ಸಿಸೇರಿಯನ್ ಸೆಕ್ಷನ್ ಆದ ನಂತರ ಸಾಮಾನ್ಯ ಹೆರಿಗೆಯಾಗುವುದು ಎಂದರೇನು?
ಒಂದು ವೇಳೆ ನೀವು ಸಿ-ಸೆಕ್ಷನ್ ಶಸ್ತ್ರ ಚಿಕಿತ್ಸೆಯ ಮೂಲಕ ಮಗುವನ್ನು ಪಡೆದಿದ್ದಲ್ಲಿ, ಮುಂದಿನ ಬಾರಿ ನೀವು ಸಾಮಾನ್ಯ ಹೆರಿಗೆಯ ಆಯ್ಕೆಯನ್ನು ಮಾಡಿಕೊಳ್ಳಬಹುದು. ಈ ಪ್ರಕ್ರಿಯೆಯನ್ನು ಸಿಸೇರಿಯನ್ ಸೆಕ್ಷನ್ ಆದ ನಂತರ ಸಾಮಾನ್ಯ ಹೆರಿಗೆ ಎಂದು ಕರೆಯುತ್ತಾರೆ. ಇದನ್ನು ಇಂಗ್ಲೀಷಿನಲ್ಲಿ ವ್ಯಾಜೈನಲ್ ಬರ್ತ್ ಆಫ್ಟರ್ ಸಿ-ಸೆಕ್ಷನ್ ಅಥವಾ ವಿಬಿಎಸಿ(VBAC) ಎಂದು ಸಂಕ್ಷಿಪ್ತವಾಗಿ ಕರೆಯುತ್ತಾರೆ.
ನಿಮ್ಮ ಮುಂದಿನ ಹೆರಿಗೆಯು ಸಾಮಾನ್ಯ ಹೆರಿಗೆಯಾಗಿರುತ್ತದೆ ಎಂದು ಯಾರೂ ನಿಮಗೆ ಖಾತರಿಯನ್ನು ನೀಡುವುದಿಲ್ಲ. ವಾಸ್ತವ ಏನೆಂದರೆ ನಿಮಗೆ ಈ ಹಿಂದೆ ಸಿಸೇರಿಯನ್ ಹೆರಿಗೆ ಮಾಡಿದ್ದಲ್ಲಿ ಈ ಬಾರಿ ಸಾಮಾನ್ಯ ಹೆರಿಗೆ ನೋವನ್ನು ಅನುಭವಿಸುವ ಪ್ರಯೋಗವನ್ನು ಪರೀಕ್ಷಿಸಲು ತಿಳಿಸಬಹುದು. ಇದನ್ನು ಟ್ರೈಯಲ್ ಆಫ್ ಲೇಬರ್ ಆಪ್ಟರ್ ಎ ಪ್ರೀವಿಯಸ್ ಸಿಸೇರಿಯನ್ ಡೆಲಿವರಿ ಅಂದರೆ TOLAC ಎಂದು ಸಂಕ್ಷಿಪ್ತವಾಗಿ ಹೆಸರಿಸುತ್ತಾರೆ. ಇದು ಒಂದು ವೈದ್ಯಕೀಯ ತಂಡದ ಸಹಾಯದೊಂದಿಗೆ ನೀವು ಸಾಮಾನ್ಯವಾಗಿ ಮಗುವಿಗೆ ಜನ್ಮವನ್ನು ನೀಡಲು ಮಾಡುವ ಪ್ರಯತ್ನವಾಗಿರುತ್ತದೆ. ಆದರೂ ಒಂದು ವೇಳೆ ಈ ಪ್ರಯತ್ನ ವಿಫಲಗೊಂಡಲ್ಲಿ, ಮತ್ತೆ ನಿಮಗೆ ಸಿ-ಸೆಕ್ಷನ್ ಹೆರಿಗೆಯನ್ನು ಮಾಡಿಸಲಾಗುತ್ತದೆ.
ವಿಬಿಎಸಿಯ ಪ್ರಯೋಜನಗಳು ಯಾವುವು?
ಸಿಸೇರಿಯನ್ ಹೆರಿಗೆಗಿಂತ ಸಾಮಾನ್ಯ ಹೆರಿಗೆಯು ಕೆಲವೊಂದು ಪ್ರಯೋಜನಗಳನ್ನು ಹೊಂದಿರುತ್ತದೆ. ಅವುಗಳು ಯಾವುವೆಂದರೆ:
ಒಂದು ವೇಳೆ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯುವಂತಿದ್ದಲ್ಲಿ, ವಿಬಿಎಸಿಯು ಭವಿಷ್ಯದಲ್ಲಿ ಸಿ-ಸೆಕ್ಷನ್ ಹೆರಿಗೆಗಳನ್ನು ಮತ್ತು ಅದರ ತೊಡಕುಗಳನ್ನು ತಡೆಯುತ್ತದೆ.
ಶೀಘ್ರವಾಗಿ ಚೇತರಿಸಿಕೊಳ್ಳಬಹುದು ಮತ್ತು ಆಸ್ಪತ್ರೆಯಲ್ಲಿ ಕಡಿಮೆ ಅವಧಿ ಇರಬಹುದು.
ಇನ್ಫೆಕ್ಷನ್ ಉಂಟಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ.
ರಕ್ತ ಮರುಪೂರಣ ಮಾಡಬೇಕಾದ ಅಪಾಯವನ್ನು ಕಡಿಮೆ ಮಾಡುತ್ತದೆ
ವಿಬಿಎಸಿಯಲ್ಲಿ ನನ್ನ ಆಯ್ಕೆಗಳು ಯಾವುವು?
ಯಶಸ್ವಿ ವಿಬಿಎಸಿಗೆ ನಿಮ್ಮ ಆಯ್ಕೆಗಳು ಹಲವಾರು ಅಂಶಗಳ ಮೇಲೆ ಅವಲಂಬಿತರಾಗಿರುತ್ತವೆ. ನಿಮ್ಮ ವೈದ್ಯರು ಗರ್ಭಾವಧಿಯಲ್ಲಿ ನಿಮ್ಮನ್ನು ಕೂಲಂಕುಷವಾಗಿ ಪರಿಶೀಲಿಸಿ ವಿಬಿಎಸಿಗೆ ಹೋಗಬೇಕೆ ಅಥವಾ ಬೇಡವೇ ಎಂದು ನಿರ್ಧರಿಸುತ್ತಾರೆ.
ಕೆಲವೊಂದು ಅಂಶಗಳು ವಿಬಿಎಸಿಗೆ ಅನುಕೂಲಕರವಾಗಿರುತ್ತವೆ. ಅವುಗಳು ಈ ಕೆಳಕಂಡಂತಿವೆ:
* ಒಂದು ವೇಳೆ ನೀವು ಸಾಮಾನ್ಯ ಆರೋಗ್ಯಕರವಾದ ಗರ್ಭವನ್ನು ಧರಿಸಿದ್ದಲ್ಲಿ
*ಮಗುವಿನ ಗಾತ್ರವು ಸಾಮಾನ್ಯ ಮಟ್ಟದಲ್ಲಿದ್ದಲ್ಲಿ
* ಮಗುವಿನ ತಲೆಯು ಕೆಳಮುಖವಾಗಿ ನೆಲೆಗೊಂಡಿದ್ದಲ್ಲಿ
* ಹಿಂದೆ ಸಿ-ಸೆಕ್ಷನ್ ಮಾಡಿಸಲು ಕಾರಣವಾಗಿದ್ದ ಅಂಶವು ಈಗ ಪುನರಾವರ್ತನೆಯಾಗದಿದ್ದಲ್ಲಿ
* ಒಂದಕ್ಕಿಂತ ಹೆಚ್ಚು ಸಿ-ಸೆಕ್ಷನ್ ಹೆರಿಗೆಗಳನ್ನು ನೀವು ಮಾಡಿಸಿಕೊಳ್ಳದಿದ್ದಲ್ಲಿ
* ಹಿಂದಿನ ಸಿ-ಸೆಕ್ಷನ್ ಹೆರಿಗೆಯನ್ನು ಲೋ ಟ್ರಾನ್ಸ್ವರ್ಸ್ ಕಟ್ ಮೂಲಕ ಮಾಡಿದ್ದಲ್ಲಿ (ಕೆಳ ಹೊಟ್ಟೆಯ ಮೇಲೆ ಅಡ್ಡಡ್ಡವಾಗಿ ಕತ್ತರಿಸಿದ್ದಲ್ಲಿ)
* ಗರ್ಭಕೋಶದ ಮೇಲೆ ಹೆಚ್ಚಿನ ಗಾಯದ ಕಲೆಗಳು ಇಲ್ಲದಿದ್ದಲ್ಲಿ
* ಗಡುವಿನ ದಿನಾಂಕಕ್ಕೆ ಮೊದಲು ನೀವು ಹೆರಿಗೆ ನೋವಿಗೆ ಒಳಗಾದಲ್ಲಿ
* ಅಂತಹ ಸಂದರ್ಭಗಳಲ್ಲಿ ನಿಮಗೆ ವಿಬಿಎಸಿ ಮಾಡಿಸಲು ನಿಮ್ಮ ವೈದ್ಯರು ಶಿಫಾರಸು ಮಾಡಬಹುದು.
* ವಿಬಿಎಸಿ ಮಾಡಿಸಿಕೊಳ್ಳಬೇಡಿ ಎಂದು ವೈದ್ಯರು ಯಾವಾಗ ಹೇಳಬಹುದು?
* ನಿಮ್ಮ ಗರ್ಭಾವಧಿಯ ಸ್ಥಾನಮಾನ ಮತ್ತು ಸ್ಥಿತಿಗೆ ಅನುಗುಣವಾಗಿ ನಿಮ್ಮ ವೈದ್ಯರು ವಿಬಿಎಸಿ ಮಾಡಿಸಿಕೊಳ್ಳದಿರಲು ನಿಮಗೆ ಶಿಫಾರಸು ಮಾಡಬಹುದು. ಅದು ಯಾವಾಗ ಎಂದರೆ:
* ಒಂದು ವೇಳೆ ನಿಮಗೆ ಎರಡಕ್ಕಿಂತ ಹೆಚ್ಚು ಸಿ-ಸೆಕ್ಷನ್ ಹೆರಿಗೆಗಳು ಆಗಿದ್ದಲ್ಲಿ
* ಮಗುವಿನ ಗಾತ್ರವು ತುಂಬಾ ದೊಡ್ಡದಿದ್ದಲ್ಲಿ
* ನೀವು ನಿಮ್ಮ ಹೆರಿಗೆಯ ಗಡುವು ದಿನಾಂಕವನ್ನು ಮೀರಿದ್ದಲ್ಲಿ
* ನಿಮ್ಮ ಕಡೆಯ ತ್ರೈಮಾಸಿಕದಲ್ಲಿ ನೀವು ಗರ್ಭಾವಧಿಗೆ ಸಂಬಂಧಿಸಿದ ತೊಡಕುಗಳನ್ನು ಎದುರಿಸುತ್ತಿದ್ದಲ್ಲಿ
ವಿಬಿಎಸಿ ಜೊತೆಗೆ ಬರಬಹುದಾದ ಅಪಾಯಗಳೇನು?
* ಸಿ-ಸೆಕ್ಷನ್ ನಂತರ ಸಾಮಾನ್ಯ ಹೆರಿಗೆ ಮಾಡಿಸಿಕೊಳ್ಳಲು ಇರುವ ಅತ್ಯಂತ ದೊಡ್ಡ ಸಮಸ್ಯೆ ಯಾವುದೆಂದರೆ, ಸಾಮಾನ್ಯ ಹೆರಿಗೆಯು ತಾಯಿಯ ಗರ್ಭಕೋಶದ ಗಾಯವನ್ನು ಛಿದ್ರ ಮಾಡಬಹುದು. ಇದು ತಾಯಿ ಮತ್ತು ಮಗು ಇಬ್ಬರನ್ನು ಅಪಾಯದಲ್ಲಿ ಸಿಲುಕಿಸುತ್ತದೆ. ಸಾಮಾನ್ಯ ಹೆರಿಗೆಯು ವಿಫಲವಾದಲ್ಲಿ ತಾಯಿಗೆ ರಕ್ತದ ಮರು ಪೂರಣ ಮಾಡಬೇಕಾಗುತ್ತದೆ.ತಾಯಿಗೆ ಇದರಿಂದ ಗರ್ಭಕೋಶದ ಇನ್ಫೆಕ್ಷನ್ ಬರುವ ಅಪಾಯ ಹೆಚ್ಚಿರುತ್ತದೆ ಒಂದು ವೇಳೆ ವಿಬಿಎಸಿ ವಿಫಲವಾದರೆ ತುರ್ತಾಗಿ ಸಿಸೇರಿಯನ್ ಹೆರಿಗೆ ಮಾಡಬೇಕಾಗುತ್ತದೆ.
ನನ್ನಷ್ಟಕ್ಕೆ ನಾನು ಹೇಗೆ ಸಿದ್ಧಗೊಳ್ಳಬೇಕು?
ಒಂದು ವೇಳೆ ನೀವು ಸಿಸೇರಿಯನ್ ಹೆರಿಗೆ ಮಾಡಿಸಿಕೊಂಡ ನಂತರ ಈ ಬಾರಿ ಸಾಮಾನ್ಯ ಹೆರಿಗೆ ಮಾಡಿಸಿಕೊಳ್ಳಬೇಕು ಎಂದುಕೊಂಡರೆ, ಮೊದಲು ನೀವು ಮಾನಸಿಕವಾಗಿ ಸಿದ್ಧಗೊಳ್ಳಬೇಕಾಗುತ್ತದೆ.
ಅದಕ್ಕಾಗಿ ನಾವು ಈ ಕೆಳಗೆ ನೀಡಿರುವ ಸಲಹೆಗಳನ್ನು ಪಾಲಿಸಲು ಆರಂಭಿಸಿ:
ಹೆರಿಗೆ ನೋವು ಬರುವವರೆಗೆ ಕಾಯಿರಿ, ಮತ್ತು ಕೊನೆಯ ತ್ರೈಮಾಸಿಕದಲ್ಲಿ ನಿಮ್ಮ ಗರ್ಭಾವಧಿಯನ್ನು ಗಮನವಿಟ್ಟು ನೋಡಿಕೊಳ್ಳಿ.
ಸುಸಜ್ಜಿತವಾದ ಮತ್ತು ಅನುಭವಿಗಳು ಇರುವ ವೈದ್ಯರಿರುವ ಆಸ್ಪತ್ರೆಗೆ ಹೋಗಿ ದಾಖಲಾಗಿ.
ಒಂದು ವೇಳೆ ಸಾಮಾನ್ಯ ಹೆರೆಗೆಗಾಗಿ ನಡೆಸುವ ಪ್ರಯತ್ನವು ವಿಫಲವಾದರೆ ಸಿಸೇರಿಯನ್ ಹೆರಿಗೆಗೆ ಸಿದ್ಧರಾಗಿರಿ. ಎಲ್ಲದ್ದಕ್ಕಿಂತ ಮುಖ್ಯವಾಗಿ ಆರೋಗ್ಯಕರವಾದ ಮಗುವು ಅಮೂಲ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಿ.
ಕೃಪೆ : ಮೊಡಸ್ಟಾ