ಬಳ್ಳಾರಿ: ಇಲ್ಲಿನ ಮಾಹಿತಿ ಹಕ್ಕು ಕಾರ್ಯಕರ್ತ ರಾಜಶೇಖರ ಮುಲಾಲಿ ಅವರ ಮನೆಗೆ ಮಾಜಿ ಸೈನಿಕರು ಭದ್ರತೆ ಒದಗಿಸಿದ್ದಾರೆ.
ಎಚ್. ವೈ.ಮೇಟಿ ಅವರ ಕಾಮಕೇಳಿ ಪ್ರಕರಣ ಬೆಳಕಿಗೆ ತಂದಿರುವ ಮುಲಾಲಿ ಅವರು ತಮಗೆ ಪ್ರಾಣ ಬೆದರಿಕೆ ಇರುವುದಾಗಿ ಕೆಲವು ದಿನಗಳ ಹಿಂದೆ ಗಾಂಧಿನಗರ ಠಾಣೆಗೆ ದೂರು ನೀಡಿದ್ದರು.
ಬಳ್ಳಾರಿಯ ಕೆಎಂಎಫ್ ಡೈರಿಯ ಬಳಿ ಇರುವ ರಾಜಶೇಖರ್ ಮನೆಗೆ ಮಾಜಿ ಸೈನಿಕರ ಸಂಘದ ವತಿಯಿಂದ ಸ್ವಯಂ ಪ್ರೇರಿತವಾಗಿ ಭದ್ರತೆ ಒದಗಿಸಿದ್ದು, 20ಕ್ಕೂ ಹೆಚ್ಚು ಮಾಜಿ ಸೈನಿಕರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.