ಕರ್ನಾಟಕ

ಸಾಮಾನ್ಯವಾಗಿ ಎಲ್ಲರೂ ತಿಳಿಯಲೇ ಬೇಕಾದ ಮನೆ ಮದ್ದುಗಳು

Pinterest LinkedIn Tumblr

mane_maddu_1

ತುಪ್ಪದ ಹೀರೆಕಾಯಿ:
*ತುಪ್ಪದ ಹೀರೆಕಾಯಿ ಪಲ್ಯ ತಿಂದರೆ ಮೂಗು, ಬಾಯಿ ಮತ್ತು ಗುಧದ್ವಾರದಿಂದ ಹೊರಬೀಳುವ ರಕ್ತ ತಟ್ಟನೆ ನಿಂತು ಹೋಗಿ ದೇಹಕ್ಕೆ ತಂಪು ನೀಡುತ್ತದೆ.
*ತುಪ್ಪದ ಹೀರೆಕಾಯಿ ಸೇವನೆಯಿಂದ ಮೂತ್ರ ವಿಷರ್ಜನೆಯಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಲವಣಗಳ ಕೊರತೆಯನ್ನು ಇದು ನೀಡುತ್ತದೆ.

ತೊಂಡೆಕಾಯಿ :
*ತೊಂಡೆಕಾಯಿ ಪಲ್ಯ ತಿಂದರೆ ರಕ್ತ ವೃದ್ದಿಯಾಗುತ್ತದೆ. ಇದನ್ನು ಹಸಿಯಾಗಿ ತಿಂದರೆ “ಎ” ಮತ್ತು “ಸಿ’ ವಿಟಮಿನ್ ಹೇರಳವಾಗಿ ಸಿಗುತ್ತದೆ.

ಬಸಳೆ ಸೊಪ್ಪು :
*ಬಸಳೆ ಸೊಪ್ಪನ್ನು ಸೇವಿಸಿದರೆ ದೇಹಕ್ಕೆ ತಂಪು. ಸಾರು ಮಾಡಿ ಅದಕ್ಕೆ ನಿಂಬೆ ಹಣ್ಣಿನ ರಸ ಹಾಕಿ ಸೇವಿಸಿದರೆ ಅರೋಗ್ಯ ವೃದ್ದಿಯಾಗುತ್ತದೆ.
*ಕಬ್ಬಿಣಾ೦ಷ ಕೊರತೆಯಿರುವ ಗರ್ಭಿಣಿಯರು ಮತ್ತು ಮಕ್ಕಳು ಸೇವಿಸಿದರೆ ಅವರ ಕೊರತೆ ದೂರವಾಗುವುದು.

ಅನಾನಸ್ ಹಣ್ಣಿನ ಗುಣಗಳು:
*ದಿನವೂ ಊಟದ ನಂತರ ಅನಾನಸ್ ಹಣ್ಣಿನ ಹೊಳುಗಳಿಗೆ ಸ್ವಲ್ಪ ಉಪ್ಪು ಹಾಗು ಕಾಳು ಮೆಣಸಿನ ಪುಡಿಯನ ಹಾಕಿ ತಿನ್ನೋದ್ರಿಂದ ಅಜೀರ್ಣ, ಅಮ್ಲಪಿತ, ಗಂಟಲು ಬೇನೆ, ದಿಪ್ಥಿರಿಯ ಹಾಗು ಹೃದಯ ದುರ್ಬಲತೆ ಶಮನವಗುತದೆ.

ಬಾರ್ಲಿ :
*ಬಾರ್ಲಿ ಗಂಜಿಯನ್ನು ಕುಡಿಯುವುದರಿಂದ ಕರಳು ಬೇನೆ , ಹೊಟ್ಟೆಹುಣ್ಣು , ಆಮಶಂಕೆ ಮತ್ತು ಅತಿಯಾದ ಉಷ್ಣ ನಿವಾರಣೆಯಾಗುತ್ತದೆ .
*ಬಾರ್ಲಿ ಗಂಜಿಯನ್ನು ಮಜ್ಜಿಗೆ ಮತ್ತು ನಿಂಬೆರಸದೊಂದಿಗೆ ಸೇವಿಸಿದರೆ ರಕ್ತದೊತ್ತಡ ಮತ್ತು ತಲೆನೋವ್ವು ಗುಣವಾಗುತ್ತದೆ.

ಬೇಲದ ಹಣ್ಣು :
*ಬೆಲ್ಲ ಹಾಕಿ ಬೇಲದ ಹಣ್ಣಿನ ಪಾನಕ ತಯಾರಿಸಿ ಏಲಕ್ಕಿ ಪುದಿಯನ್ನು ಹಾಕಿ ಸೇವಿಸುವುದರಿಂದ ಬಾಯಾರಿಕೆ ಕಡಿಮೆ ಆಗುವುದು. ಬಾಯಿಂದ ಹೊರಡುವ ದುರ್ನಾತ ಕಡಿಮೆಯಾಗುವುದು.
* ಬೇಲದ ಹಣ್ಣಿನ ಬೀಜವಿಲ್ಲದ ತಿರುಳಿಗೆ ಬೆಲ್ಲ ಹಾಕಿಕೊಂಡು ತಿಂದರೆ ಕಫಾ ನಿವಾರಣೆಯಾಗುವುದು.
*ಬೇಲದ ಹಣ್ಣನ್ನು ಕ್ರಮವಾಗಿ ತಿನ್ನುತ್ತಿದ್ದರೆ ಸಂತಾನ ಶಕ್ತಿಯ ಅಭಾವವಿರುವವರಿಗೆ ಫಲ ಪ್ರಾಪ್ತಿಯಾಗುವುದು.
* ಜೋತು ಬೀಳುವ ಸ್ತನಗಳು ಸ್ವಾಭಾವಿಕ ರೂಪಕ್ಕೆ ಬರಲು ಬೇಲದ ಹಣ್ಣನ್ನು ಹೆಚ್ಚಾಗಿ ಸೇವಿಸಬೇಕು.

ಮೆಣಸಿನ ಕಾಯಿ :
* ಮೆಣಸಿನ ಕಾಯಿ ಹಸಿರಾಗಿರುವಾಗಲೇ ಉಪಯೋಗಿಸಿದರೆ ಜೀರ್ಣಶಕ್ತಿ ಅಧಿಕವಾಗುವುದು. ಸಂಭೋಗದ ಆಸಕ್ತಿ ಹೆಚ್ಚುವುದು.
* ಮೆಣಸಿನ ಕಾಯಿಯ ಖಾರ ನಾಲಿಗೆಗೆ ಸೋಕಿದಾಗ ಲಾಲಾರಸ ಚನ್ನಾಗಿ ಸ್ರವಿಸುವುದು. ಮಲಬದ್ಧತೆ ಉಂಟಾಗುವ ಸಂಭವವಿರುವುದಿಲ್ಲ.

ಹಕ್ಕರಿಕೆ ಸೊಪ್ಪು :
*ಹಕ್ಕರಿಕೆ ಸೊಪ್ಪನ್ನು ಸವತೆಕಾಯಿಯೊಂದಿಗೆ ತಿನ್ನುತ್ತಿದ್ದರೆ ಲೈಂಗಿಕ ಆಶಕ್ತಿ ಅಧಿಕವಾಗುತ್ತದೆ. ಸರಾಗವಾಗಿ ಮಲ ವಿಸರ್ಜನೆಯಾಗುತ್ತದೆ.
* ಹಕ್ಕರಿಕೆ ಸೊಪ್ಪನ್ನು ನಿರಂತರವಾಗಿ ಬಳಸುವುದರಿಂದ ನಾಲಿಗೆಯ ರುಚಿ ಹೆಚ್ಚುವುದು. ದಂತ ಕ್ಷಯ ನಿವಾರಣೆಯಾಗುವುದು.

ಸಪೋಟ ಹಣ್ಣು:
* ಸಪೋಟ ಹಣ್ಣುಗಳನ್ನು ಸೇವಿಸುವುದರಿಂದ ವೀರ್ಯ ವೃದ್ದಿಯಾಗುತ್ತದೆ.
* ಸಪೋಟ ಹಣ್ಣನ್ನು ಜೇನುತುಪ್ಪದಲ್ಲಿ ಅದ್ದಿ ತಿಂದರೆ ಸಂಭೋಗ ಕ್ರಿಯೆ ವ್ರುದ್ದಿಯಗುವುದು. ಶೀಘ್ರ ವೀರ್ಯ ಸ್ಖಲನವಾಗುವುದಿಲ್ಲ.

ಸೀತಾಫಲ :
*ಸಿತಾಫಲವನ್ನು ತಿಂದರೆ ಮೊದಲು ಸ್ವಲ್ಪ ಉಷ್ಣ ವನ್ನುಂಟುಮಾಡಿ ಮಾಡಿ ಕೊನೆಗೆ ಅತ್ಯಂತ ತಮ್ಪನ್ನುಂಟು ಮಾಡುತ್ತದೆ.
*ಸೀತಾಫಲ ಶರೀರದ ಮಾಂಸವನ್ನು ಹೆಚ್ಚಿಸುತ್ತದೆ. ಸೀತಾಫಲದ ಒಣಗಿದ ಎಲೆಗಳ ಚೂರ್ಣ ಚರಮರೋಗಕ್ಕೆ ಉತ್ತಮ ಔಷದಿ.

ಸೌತೆಕಾಯಿ:
ಸೌತೆಕಾಯಿಯನ್ನು ಸಿಪ್ಪೆ ಸಹಿತ ಕತ್ತರಿಸಿ ಕಾಳುಮೆಣಸಿನ ಪುಡಿ ಮತ್ತು ಉಪ್ಪಿನೊಂದಿಗೆ ಸೇರಿಸಿಕೊಂಡು ತಿನ್ನುತ್ತಾ ಬಂದರೆ ಜೀರ್ಣಶಕ್ತಿ ಹೆಚ್ಚುವುದು. ಸೌತೆಕಾಯಿ ತಿರುಳಿನಿಂದ ಅಂಗಾಲು ಉಜ್ಜಿಕೊಂಡರೆ ಕಣ್ಣುಗಳ ಉರಿ ಶಾಂತವಾಗಿ ಚೆನ್ನಾಗಿ ನಿದ್ದೆ ಬರುತ್ತದೆ. ಮುಖದ ಚರ್ಮದ ಮೇಲೆ ಸೌತೆಕಾಯಿ ಚೂರುಗಳನ್ನು ತಿಕ್ಕಿದರೆ ಮುಖ ಕಾಂತಿಯುಕ್ತವಾಗುವುದು.

ಹೊಟ್ಟೆನೋವಿಗೆ: ಬೆಲ್ಲದಲ್ಲಿ ಕಾಳುಮೆಣಸಿನ ಪುಡಿ ಬೆರೆಸಿ ಸೇವಿಸಿದರೆ ನೋವು ಶಮನವಾಗುತ್ತದೆ

ಒಣಕೆಮ್ಮು: ಬೆಲ್ಲದಲ್ಲಿ ಅರಿಶಿಣಪುಡಿ ಸೇರಿಸಿ ಸೇವಿಸಿದರೆ ಒಣಕೆಮ್ಮು ನಿವಾರಣೆಯಾಗಿ ಗಂಟಲಿಗೆ ಹಿತವಾಗಿರುತ್ತದೆ.

ಕಡಲೇಕಾಯಿ.: ಒಂದು ಚಮಚ ಕಡಲೇಕಾಯಿ ಎಣ್ಣೆಗೆ ಅಷ್ಟೇ ಪ್ರಮಾಣದ ನಿಂಬೆ ರಸ ಬೆರೆಸಿ ರಾತ್ರಿ ಮುಖಕ್ಕೆ ಲೇಪಿಸುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಗೋಧಿ ಹಿಟ್ಟು ಹಾಗೂ ಶೇಂಗಾ ಹಿಟ್ಟು ಬೆರೆಸಿದ ರೊಟ್ಟಿಯು ಮಧುಮೇಹಿಗಳಿಗೆ ಹಿತ. ಶೇಂಗಾ ಹಿಂಡಿಯಲ್ಲಿ ಉತ್ತಮ ಸಸಾರಜನಕವಿದ್ದು, ದನಕರುಗಳಿಗೆ ಉತ್ತಮ.

Comments are closed.