ಕರ್ನಾಟಕ

ಡಿ.15 ಹಳೆಯ 500 ನೋಟು ಬಳಕೆಗೆ ಕೊನೇ ದಿನ

Pinterest LinkedIn Tumblr

noteನವದೆಹಲಿ: ಹಳೆಯ ₹500 ನೋಟು ಬಳಸಿ ಬಿಲ್‌ ಪಾವತಿ ಅಥವಾ ಔಷಧ ಖರೀದಿಸಲು ಡಿಸೆಂಬರ್‌ 15ರ ಮಧ್ಯರಾತ್ರಿ ವರೆಗೂ ಮಾತ್ರ ಅವಕಾಶವಿದೆ. ಅವಧಿ ವಿಸ್ತರಣೆ ಮಾಡದಿರಲು ಸರ್ಕಾರ ನಿರ್ಧರಿಸಿದೆ.

ಹಳೆಯ ನೋಟು ಬಳಸಿ ಮೊಬೈಲ್‌ ರೀಚಾರ್ಜ್‌ ಸೇರಿದಂತೆ ಇನ್ನಾವುದೇ ಪಾವತಿ ಸಾಧ್ಯವಿರುವುದಿಲ್ಲ. ಆದರೆ, ಬ್ಯಾಂಕ್‌ ಖಾತೆಗಳಿಗೆ ₹500 ಮುಖಬೆಲೆಯ ಹಳೆಯ ನೋಟುಗಳನ್ನು ಜಮೆ ಮಾಡಲು ಅಡ್ಡಿಯಿಲ್ಲ. ಹಳೆಯ ನೋಟುಗಳ ಬಳಕೆ ಡಿಸೆಂಬರ್‌ 15ರ ಮಧ್ಯರಾತ್ರಿ ಕೊನೆಗೊಳ್ಳಲಿದೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ ದಾಸ್‌ ಟ್ವೀಟಿಸಿದ್ದಾರೆ.

Exemptions for use of old Rs.500 notes will end on 15 Dec midnight.Sections of media reporting wrongly as if it’s tonight.

— Shaktikanta Das (@DasShaktikanta) December 14, 2016

Comments are closed.