ಕರ್ನಾಟಕ

93 ಲಕ್ಷ ಹೊಸ ನೋಟು ಪತ್ತೆ ಹಚ್ಚಿದ ಇಡಿ:  7 ಜನರ ಬಂಧನ

Pinterest LinkedIn Tumblr

arrestಬೆಂಗಳೂರು: ರಾಜ್ಯದಲ್ಲಿ ತನಿಖಾಧಿಕಾರಿಗಳು ಗ್ರಾಹಕರ ಸೋಗು ಹಾಕಿ, ಏಳು ಜನರನ್ನು ಬಂಧಿಸಿದ್ದು, 93 ಲಕ್ಷ ರು. ಮೌಲ್ಯದ ಹೊಸ ನೋಟುಗಳೊಂದಿಗೆ ವಶಪಡಿಸಿಕೊಂಡಿದ್ದಾರೆ.

ಬಂಧಿತರಲ್ಲಿ ಓರ್ವ ಸರಕಾರಿ ಅಧಿಕಾರಿಯ ಸಂಬಂಧಿಕನಾಗಿದ್ದಾನೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ದಾಳಿ ನಡೆಸಿದರು.

ಬಂಧಿತರು ನೋಟು ವಿನಿಮಯಕ್ಕೆ 15 ರಿಂದ 35 ಶೇ ಕಮಿಷನ್ ಕೇಳುತ್ತಿದ್ದರು. ಬ್ಯಾಂಕ್ ಮತ್ತು ಎಟಿಎಂ ಎದುರು ಸರತಿ ಸಾಲು ಕಡಿಮೆಯಾದ ನಂತರ, ದೇಶಾದ್ಯಂತ ದಾಳಿ ಸಂದರ್ಭ, ಹೊಸ ನೋಟು ಲಭ್ಯವಾಗುತ್ತಿದೆ.

ಸೋಮವಾರ ದಕ್ಷಿಣ ದೆಹಲಿಯಲ್ಲಿ ವಕೀಲರ ನಿವಾಸಕ್ಕೆ ದಾಳಿಯಾದಾಗ 14 ಕೋಟಿ ರು. ಲಭ್ಯವಾಗಿದ್ದು, ಅವುಗಳನ್ನು ಮೂರು ಕಾರುಗಳಲ್ಲಿ ಆರು ಸೂಟ್ ಕೇಸುಗಳು ಮತ್ತು ಟ್ರಂಕುಗಳಲ್ಲಿ ಸಾಗಿಸಲಾಗಿತ್ತು. ಎರಡು ಸಾವಿರ ಮುಖಬೆಲೆಯ ಹೊಸ ನೋಟುಗಳ ಒಟ್ಟು 2.2 ಕೋ. ರು ದೊರಕಿದ್ದವು.

Comments are closed.