ಕರ್ನಾಟಕ

ಬಾಂಬ್ ಸ್ಫೋಟ ಪ್ರಕರಣ: ಯಾಸಿನ್ ಭಟ್ಕಲ್ ಹಾಗೂ ನಾಲ್ವರ ವಿರುದ್ಧದ ಆರೋಪ ಸಾಬೀತು

Pinterest LinkedIn Tumblr

yasin

ಹೈದರಾಬಾದ್: 2013ರ ಹೈದರಾಬಾದ್ ಅವಳಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಯಾಸಿನ್ ಭಟ್ಕಲ್ ಹಾಗೂ ಇತರ ನಾಲ್ಕು ಆರೋಪಿಗಳು ತಪ್ಪಿತಸ್ಥರೆಂಬುದು ಸಾಬೀತಾಗಿದೆ. ಇಂಡಿಯನ್ ಮುಜಾಹಿದೀನ್ ಸಂಘಟನೆಯ ಸಹ ಸಂಸ್ಥಾಪಕ ಯಾಸಿನ್ ಭಟ್ಕಳ್, ಪಾಕಿಸ್ತಾನೀ ರಾಷ್ಟ್ರೀಯ ಜಿಯಾ ಉರ್ ರಹಮಾನ್ ಅಲಿಯಾಸ್ ವಾಕಾಸ್, ಅಸಾದುಲ್ಲಾ ಅಖ್ತರ್ ಅಲಿಯಾಸ್ ಹಡ್ಡಿ, ತಹಾಸೀನ್ ಅಖ್ತರ್ ಅಲಿಯಾಸ್ ಮೋನು ಮತ್ತು ಏಜಾಜ್ ಶೇಖ್ ಅವರನ್ನು ದೋಷಿ ಎಂದು ಪರಿಗಣಿಸಿ ವಿಶೇಷ ಎನ್’ಐಎ ಕೋರ್ಟ್ ಮಂಗಳವಾರ ತೀರ್ಪು ಹೊರಡಿಸಿದೆ. ಈ ಐವರಿಗೆ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದೆ. ಈ ಐವರು ಸದ್ಯ ಹೈದರಾಬಾದ್’ನ ಚೇರಲಪಲ್ಲಿ ಕಾರಾಗೃಹದಲ್ಲಿ ಬಂಧಿಸಿಡಲಾಗಿದೆ. ಇದೇ ವೇಳೆ, ಪ್ರಕರಣದ ಪ್ರಮುಖ ರೂವಾರಿ, ಇಂಡಿಯನ್ ಮುಜಾಹಿದೀನ್ ಸ್ಥಾಪಕ ರಿಯಾಜ್ ಭಟ್ಕಳ್ ನಾಪತ್ತೆಯಾಗಿದ್ದು, ಆತನ ವಿರುದ್ಧವೂ ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿದೆ.

2013ರ ಫೆಬ್ರವರಿ 21ರಂದು ಹೈದರಾಬಾದ್’ನ ದಿಲ್’ಸುಖ್’ನಗರ್’ನಲ್ಲಿನ ಕೋನಾರ್ಕ್ ಮತ್ತು ವೆಂಕಟಾದ್ರಿ ಚಿತ್ರಮಂದಿರಗಳ ಬಳಿ ಎರಡು ಬಾಂಬ್’ಗಳನ್ನು ಉಗ್ರಗಾಮಗಳು ಸ್ಫೋಟಿಸಿದ್ದರು. ಈ ಘಟನೆಯಲ್ಲಿ 18 ಜನರು ಬಲಿಯಾಗಿ 131 ಮಂದಿ ಗಾಯಗೊಂಡಿದ್ದರು.

Comments are closed.