ಕರ್ನಾಟಕ

ಖಾಸಗಿ ಕಂಪನಿಯ ಮ್ಯಾನೇಜರ್ ಮೇಲೆ ಲೈಂಗಿಕ ದೌರ್ಜನ್ಯ: ಅಡುಗೆ ಭಟ್ಟನ ಬಂಧನ

Pinterest LinkedIn Tumblr

minor-rape-generic

ಬೆಂಗಳೂರು,ಡಿ.12-ಪಬ್‍ನಲ್ಲಿ ಕುಡಿದು ಮನೆಗೆ ನಡೆದುಕೊಂಡು ಹೋಗುತ್ತಿದ್ದ ಖಾಸಗಿ ಕಂಪನಿಯ ಮ್ಯಾನೇಜರ್‍ರೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಡುಗೆ ಭಟ್ಟನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮಬಂಗಾಳ ಮೂಲದ ಸಂಜಯ್(21)ಬಂಧಿತ ಆರೋಪಿಯಾಗಿದ್ದಾನೆ,ಇಂದಿರಾನಗರದ ಖಾಸಗಿ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದ 22 ವರ್ಷದ ಯುವಕರೊಬ್ಬರು ಕಳೆದ ಡಿ.5ರಂದು ಪಬ್‍ವೊಂದರಲ್ಲಿ ಕುಡಿದು ರಾತ್ರಿ 11ರ ವೇಳೆಯಲ್ಲಿ ಕೋರಮಂಗಲದ ಮೊದಲ ಬ್ಲಾಕ್‍ನಲ್ಲಿ ನಡೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಏಕಾಏಕಿ ಎದುರಾದ ಮದ್ಯದ ಅಮಲಿನಲ್ಲಿದ್ದ ಆರೋಪಿ ಸಂಜಯ್ ಮ್ಯಾನೇಜರ್ ಅವರ ಪ್ಯಾಂಟ್ ಬಿಚ್ಚಿ ಗುಪ್ತಾಂಗಕ್ಕೆ ಬಾಯಿ ಹಾಕಿ ಬಳಿಕ ಅದೇ ರೀತಿ ಮಾಡುವಂತೆ ಬೆದರಿಸಿದ್ದ.ಅದಕ್ಕೆ ಮ್ಯಾನೇಜರ್ ನಿರಾಕರಿಸಿದಾಗ ಹಿಂಭಾಗಕ್ಕೆ ಲೈಂಗಿಕ ಕ್ರಿಯೆ ನಡೆಸುವ ಯತ್ನ ಮಾಡಿ ಕತ್ತಲಲ್ಲಿ ಓಡಿ ಪರಾರಿಯಾಗಿದ್ದಾನೆ.
ಕುಡಿತದ ಅಮಲಿನಲ್ಲಿ ಮ್ಯಾನೇಜರ್‍ಗೆ ತಕ್ಷಣಕ್ಕೆ ಎನು ಮಾಡಬೇಕೆಂಬುದೇ ತೋಚದಾಗಿದ್ದು ಈ ಘಟನೆ ನಡೆದ ಅಪರಿಚಿತ ಯುವಕ ಘಟನೆ ಬಳಿಕ ಮ್ಯಾನೇಜರ್ ನಿಂದ ಕೋರಮಂಗಲ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಇನ್ಸ್‍ಪೆಕ್ಟರ್ ಅಜಯ್ ಅವರು ಕೋರಮಂಗಲದ ಹೊಟೇಲೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಐಪಿಸಿ ಸೆಕ್ಷನ್ 377ಮತ್ತು 506 ರ ಅಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಡಿಸಿಪಿ ಡಾ.ಬೋರಲಿಂಗಯ್ಯ ಅವರು ತಿಳಿಸಿದ್ದಾರೆ.

Comments are closed.