ಕರ್ನಾಟಕ

ಕಾಲು ಮುರಿದುಕೊಂಡು ತೀವ್ರ ಅನಾರೋಗ್ಯಕ್ಕೀಡಾಗಿದ್ದ ಕಾಡಾನೆ ಸಿದ್ದ ಸಾವು

Pinterest LinkedIn Tumblr

sidda

ರಾಮನಗರ: ಕಾಲು ಮುರಿದುಕೊಂಡು ತೀವ್ರ ಅನಾರೋಗ್ಯಕ್ಕೀಡಾಗಿದ್ದ ಕಾಡಾನೆ ಸಿದ್ದ ಡಿ.8 ರಂದು ಮೃತಪಟ್ಟಿದೆ.

ಆಗಸ್ಟ್ ತಿಂಗಳಲ್ಲಿ ಬನ್ನೇರುಘಟ್ಟದಿಂದ ಆಹಾರಕ್ಕಾಗಿ ಹುಡುಕಾಟ ನಡೆಸುತ್ತಿದ್ದ ವೇಳೆಯಲ್ಲಿ ಕಾಡಾನೆಯ ಕಲು ಮುರಿದಿತ್ತು. ಕಾಲು ಮುರಿದುಕೊಂಡಿದ್ದ ಕಾಡಾನೆಗೆ ರಾಮನಗರದ ಮಂಚನಬೆಲೆಯ ಬಳಿ ಕಳೆದ 2-3 ತಿಂಗಳುಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ಹಲವು ದಿನಗಳ ಕಾಲ ಅನಾರೋಗ್ಯ ಎದುರಿಸಿದ್ದ ಕಾಡಾನೆ ಚೇತರಿಕೆ ಕಾಣುವ ಲಕ್ಷಣಗಳು ಇರಲಿಲ್ಲ. ಆದರೆ ಕಳೆದ ಕೆಲವು ದಿನಗಳ ಹಿಂದೆ ಕಾಡಾನೆ ಸಿದ್ದ ಚೇತರಿಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಚಿಕಿತ್ಸೆ ಫಲಕಾರಿಯಾಗದೇ ಸಿದ್ದ ಮೃತಪಟ್ಟಿದೆ.

ಕಾಡಾನೆ ಸಿದ್ದನ ಚಿಕಿತ್ಸೆಗಾಗಿ ಸರಕಾರ ಸಮಿತಿಯೊಂದನ್ನು ರಚಿಸಿ, ವ್ಯವಸ್ಥೆ ಮಾಡಿತ್ತು. ಅರಣ್ಯ ಇಲಾಖೆಯು ವೈಲ್ಡ್ ಲೈಫ್ ಎಸ್ ಒಎಸ್ ಎಂಬ ಸಂಸ್ಥೆ ಸಹಕಾರದ ಜತೆಗೆ ಸಿದ್ದನ ಚಿಕಿತ್ಸೆ ಬಗ್ಗೆ ನಿಗಾ ವಹಿಸುತ್ತಿತ್ತು. 25-30 ವರ್ಷದ ಕಾಡಾನೆಗೆ ಗುವಾಹಟಿ ಹಾಗೂ ಕೇರಳದ ವೈದ್ಯರು ಚಿಕಿತ್ಸೆ ನೀಡಿದ್ದರು.

Comments are closed.