ಕರ್ನಾಟಕ

ಸಿಸಿಬಿ ಅಧಿಕಾರಿಗಳ ಸೋಗಿನಲ್ಲಿ 80 ಲಕ್ಷ ದರೋಡೆ ಮಾಡಿದ್ದ ನಿವೃತ್ತ ಡಿವೈಎಸ್ಪಿ ಬಂಧನ

Pinterest LinkedIn Tumblr

arrest

ಬೆಂಗಳೂರು: ನವೆಂಬರ್ 25 ರಂದು ನಗರದಲ್ಲಿ ನಡೆದಿದ್ದ 80 ಲಕ್ಷ ರು. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಡಿವೈಎಸ್ ಪಿ ಬಾಬು ನರೋನಾ ಮತ್ತು ಮುಖ್ಯ ಆರೋಪಿ ಲೋಹಿತ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ರು.80 ಲಕ್ಷ ಮೌಲ್ಯದ ಹೊಸ ನೋಟುಗಳನ್ನು ಕೊಟ್ಟರೆ, ನಾವು ರು 1 ಕೋಟಿ ಮೌಲ್ಯದ ಹಳೇ ನೋಟುಗಳನ್ನು ಕೊಡುತ್ತೇವೆ’ ಎಂದು ಸತೀಶ್ ಹಾಗೂ ಶಿವರಾಂ ಎಂಬ ರಿಯಲ್‌ ಎಸ್ಟೇಟ್ ಉದ್ಯಮಿಗಳನ್ನು ನಂಬಿಸಿದ್ದರು. ಶೇ. 20 ರಷ್ಟು ಕಮಿಷನ್ ಸಿಗುತ್ತದೆ ಎಂದು ಸಹ ಹೇಳಿದ್ದರು. ಇವರ ಮಾತನ್ನು ನಂಬಿದ್ದ ಸತೀಶ್ ಮತ್ತು ಶಿವರಾಮ್ ಮನೆಯಲ್ಲಿ 2000 ಹಾಗೂ 100 ರು ನೋಟುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಈ ವೇಳೆ ಸಿಸಿಬಿ ಅಧಿಕಾರಿಗಳ ಸೋಗಿನಲ್ಲಿ ಹಣವಿದ್ದ ಮನೆ ಮೇಲೆ ದಾಳಿ ನಡೆಸಿ ಹಣವನ್ನು ಕದ್ದೊಯ್ದಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದರು. ನೋಟು ನಿಷೇಧದ ನಂತರ ಮೊದಲು ಕಮಿಷನ್ ಗಾಗಿ ಹಣ ವಿನಿಮಯ ಮಾಡಿಕೊಡುತ್ತಿದ್ದ ನರೋನಾ, ಬೇಗ ಶ್ರೀಮಂತನಾಗುವ ದುರಾಸೆಯಿಂದ ಈ ದಾರಿ ಹಿಡಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.