ಕರ್ನಾಟಕ

ಮಗಳನ್ನು ಚುಡಾಯಿಸಿದವನಿಗೆ ಬೆಲ್ಟ್ ನಲ್ಲಿ ಹೊಡೆತ!

Pinterest LinkedIn Tumblr

beltಮೈಸೂರು: ತನ್ನ ಮಗಳನ್ನು ಚುಡಾಯಿಸಿದ್ದಕ್ಕೆ ಸಿಡಿಮಿಡಿಗೊಂಡ ಆಕೆಯ ಅಪ್ಪ ಯುವಕನಿಗೆ ರಸ್ತೆ ಮಧ್ಯದಲ್ಲೇ ಗೂಸಾ ಕೊಟ್ಟ ಘಟನೆ ರಮಾವಿಲಾಸ ರಸ್ತೆಯಲ್ಲಿ ನಡೆದಿದೆ.

ಅನಿಲ್ ಎಂಬ ಯುವಕ ಮರಿಮಲ್ಲಪ್ಪ ಶಾಲೆಯ ವಿದ್ಯಾರ್ಥಿನಿಗೆ ಚುಡಾಯಿಸಿ ಹಿಂಸೆ ನೀಡುತ್ತಿದ್ದ. ವಿಷಯ ತಿಳಿದ ಯುವತಿಯ ಅಪ್ಪ ಶಾಲೆ ಬಳಿ ಅಗಮಿಸಿ ಸಿನಿಮೀಯ ರೀತಿಯಲ್ಲಿ ಬೆಲ್ಟ್ ನಿಂದ ಯುವಕನಿಗೆ ಥಳಿಸಿದ್ದಾರೆ. ಈ ವೇಳೆ ಸಾರ್ವಜನಿಕರು ಜಮಾಯಿಸಿದ್ದು, ವಿಷಯ ತಿಳಿದು ಅವರು ಕೂಡ ವಿದ್ಯಾರ್ಥಿನಿಯ ಅಪ್ಪನಿಗೆ ಸಾಥ್ ನೀಡಿ ಯುವಕನಿಗೆ ಧರ್ಮದೇಟು ನೀಡಿದ್ದಾರೆ.

ಘಟನೆಯ ಮಾಹಿತಿ ತಿಳಿದ ಸ್ಥಳೀಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಈ ವೇಳೆ ಪೆÇಲೀಸರು ಹೆಸರು ಕೇಳಿದಾಗ ಅನಿಲ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Comments are closed.