ಕರ್ನಾಟಕ

ಶಾಸ್ತ್ರೀಯ ಸಂಗೀತದಲಿ ಖ್ಯಾತಿಗಳಿಸಿದ ಗಾಯಕ ಬಾಲಮುರಳಿ ಕೃಷ್ಣ ವಿಧಿವಶ

Pinterest LinkedIn Tumblr

balamuarali_krishna

ಬೆಂಗಳೂರು : ಶಾಸ್ತ್ರೀಯ ಸಂಗೀತ ಖ್ಯಾತ ಗಾಯಕ ಮಂಗಲಂ ಪಲ್ಲಿ ಬಾಲಮುರಳಿಕೃಷ್ಣ (86) ಅನಾರೋಗ್ಯದಿಂದ ಚೆನ್ನೈನ ಸ್ವಗೃಹದಲ್ಲಿ ಇಂದು ನಿಧನರಾಗಿದ್ದಾರೆ.

ಜು.6,1930 ರಂದು ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಜನಿಸಿದ್ದರು. ಕನ್ನಡದ ಸಂಧ್ಯಾರಾಗ, ಹಂಸಗೀತೆ ಸೇರಿದಂತೆ ಹಲವಾರು ಸಿನಿಮಾದಲ್ಲಿ ಹಾಡಿದ್ದಾರೆ. ಕನ್ನಡ, ತಮಿಳು, ಬೆಂಗಾಲಿ, ಹಿಂದಿ ಸೇರಿದಂತೆ ಬಹುಭಾಷಾ ಗಾಯಕರಾಗಿರುವ ಇವರು 25 ಸಾವಿರಕ್ಕೂ ಹೆಚ್ಚು ಹಾಡನ್ನು ಹಾಡಿ ಶಾಸ್ತ್ರೀಯ ಸಂಗೀತ ದಿಗ್ಗಜ ಎನಿಸಿಕೊಂಡಿದ್ದಾರೆ.

ಶಾಸ್ತ್ರೀಯ ಸಂಗೀತದಲ್ಲಿ ತಮ್ಮದೇ ಚಾಪು ಮೂಡಿಸಿದ್ದರು. ಇವರ ಗಾಯನಕ್ಕೆ ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿಗಳು ಲಭಿಸಿವೆ.

Comments are closed.