ಕರ್ನಾಟಕ

ಮಂಡ್ಯ ಜಿಲ್ಲೆಗೆ ಕೆಆರ್‌ಎಸ್‌ನಿಂದ ಏಕಾಏಕಿ ನಿಲುಗಡೆ

Pinterest LinkedIn Tumblr

krsಮಂಡ್ಯ,ಅ.೩೦-ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಜಲಾಶಯ ಬರಿದಾಗತೊಡಗಿದೆ. ಈ ಹಿನ್ನೆಲೆಯಲ್ಲಿ ಕೆಆರ್‌ಎಸ್‌ನಿಂದ ಮಂಡ್ಯ ಜಿಲ್ಲೆಯ ನಾಲೆಗೆ ಹರಿಸುತ್ತಿದ್ದ ನೀರನ್ನು ಏಕಾಏಕಿ ನಿಲ್ಲಿಸಿರುವುದು ರೈತರು ಆತಂಕಕ್ಕೊಳಗಾಗುವಂತೆ ಮಾಡಿದೆ.
ಜಿಲ್ಲೆಯ ನಾಲೆಗಳಿಗೆ ಹರಿಯುತ್ತಿದ್ದ ನೀರನ್ನು ಯಾವುದೇ ಮುನ್ಸೂಚನೆ ನೀಡದೆ ನಿಲ್ಲಿಸಿರುವುದರಿಂದ ರೈತರು ತಮ್ಮ ಬೆಳೆಗಳಿಗೆ ಮುಂದೇನು ಮಾಡುವುದು ಎನ್ನುವ ಆತಂಕಕ್ಕೆ ಸಿಲುಕಿವಂತಾಗಿದೆ. ಅಲ್ಲದೆ ನೀರು ಹರಿಯದಿದ್ದರೆ ಅಲ್ಪ ಸ್ವಲ್ಪ ಬೆಳೆದ ಬೆಳೆಯೂ ಕೈಗೆ ಬಾರದಂತಹ ಪರಿಸ್ಥಿತಿಯನ್ನು ಎದುರಿಸುವ ಸಂಕಷ್ಟಕ್ಕೆ ರೈತರು ಸಿಲುಕಿದ್ದಾರೆ.
ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗಿರುವುದೇ ಏಕಾ ಏಕಿ ಹೊರ ಹರಿವು ನಿಲ್ಲಿಸಲಾಗಿದೆ ಎಂದು ಮೂಲಗಳು ಹೇಳಿವೆ. ಈ ಬಗ್ಗೆ ಅಧಿಕಾರಿಗಳು ಯಾವ ಕಾರಣಕ್ಕೆ ನೀರು ನಿಲ್ಲಿಸಲಾಗಿದೆ ಎನ್ನುವ ಬಗ್ಗೆ ಮಾಹಿತಿ ನೀಡಬೇಕಾಗಿದೆ.
ಪ್ರಸ್ತುತ ಕೆಆರ್‌ಎಸ್ ನೀರಿನ ಮಟ್ಟ ೭೬.೩ ಅಡಿ ಇದ್ದು, ನೀರಿನ ಅಭಾವ ಎದುರಾಗುವ ಹಿನ್ನೆಲೆಯಲ್ಲಿ ಹೊರ ಹರಿವನ್ನು ನಿಲ್ಲಿಸಲಾಗಿದೆ. ಕೆಆರ್‌ಎಸ್ ಜಲಾಶಯಕ್ಕೆ ಸರಿಸುಮಾರ್ ೧೪೫೧ ಕ್ಯೂಸೆಕ್ ನೀರು ಬರುತ್ತಿದ್ದು, ಹೊರಹರಿವು ೨೦೫ ಕ್ಯೂಸೆಕ್ ಇದೆ.
ರಾಜ್ಯದಲ್ಲಿ ಸಕಾಲಕ್ಕೆ ಮಳೆಯಾಗೆ ಜಲಾಶಯಗಳು ತುಂಬಿಲ್ಲ,ಇದರ ನಡುವೆಯೇ ತಮಿಳುನಾಡಿಗೆ ನೀರು ಬಿಟ್ಟ ಪರಿಣಾಮ ಜಲಾಶಯಗಳು ಖಾಲಿ ಖಾಲಿ ಹೊಡೆಯುವಂತಾಗಿದೆ.
ಕೃಷ್ಣರಾಜ ಸಾಗರದ ಜಲಾಶಯ ನೀರಿಲ್ಲದೆ ಬರಿದಾಗಿದ್ದು, ಎಲ್ಲೆಲ್ಲಿಯೂ ಖಾಲಿ ಖಾಲಿ ಹೊಡೆಯುತ್ತಿದೆ. ಮಳೆ ಬರದಿದ್ದರೆ ಮುಂದಿನ ದಿನಗಳಲ್ಲಿ ನೀರಿಗೆ ತೀವ್ರ ಹಾಹಾಕಾರ ಎದುರಾಗುವ ಸಾಧ್ಯತೆಗಳಿವೆ.
ಮಂಡ್ಯ ಜಿಲ್ಲೆಯ ರೈತರು ಬೆಳೆದ ಬೆಳೆಗಳಿಗೆ ಜೊತೆಗೆ ಕೆಆರ್‌ಎಸ್ ಸೇರಿದಂತೆ ವಿವಿಧ ಜಲಾಶಯಗಳನ್ನೇ ಕುಡಿಯುವ ನೀರಿಗೆ ಅವಲಂಬಿಸಿರುವ ಪಟ್ಟಣಗಳಲ್ಲಿ ಮುಂಬರುವ ದಿನಗಳಲ್ಲಿ ಮತ್ತಷ್ಟು ತೊಂದರೆ ಎದುರಿಸಬೇಕಾಗುವ ಆತಂಕವಿದೆ.

Comments are closed.