ಕರ್ನಾಟಕ

ವಿಕೃತಕಾಮಿ ಉಮೇಶ್ ರೆಡ್ಡಿಯ ನೇಣಿಗೆ ಬೆಳಗಾವಿಯ ಹಿಂಡಲಗಾದಲ್ಲಿ ಸಿದ್ಧತೆ

Pinterest LinkedIn Tumblr

umeshಬೆಳಗಾವಿ: ವಿಕೃತ ಕಾಮಿ, ಸರಣಿ ಹಂತಕ ಉಮೇಶ್ ರೆಡ್ಡಿಗೆ ನೇಣು ಕುಣಿಕೆ ಸಿದ್ಧವಾಗಿದೆ. ಹಿಂಡಲಗಾ ಜೈಲಿನಲ್ಲಿ ಇಂದು ಮರಣ ದಂಡನೆ ವಿಧಿಸುವ ಪ್ರಕ್ರಿಯೆ ತಾಲೀಮು ನಡೆಸಲಾಯಿತು.

ಉಮೇಶ್ ರೆಡ್ಡಿ ಸುಪ್ರೀಂ ಕೋರ್ಟ್‍ನಲ್ಲಿ ಗಲ್ಲು ಶಿಕ್ಷೆ ಪ್ರಶ್ನಿಸಿ ಮತ್ತೆ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿಯ ವಿಚಾರಣೆ ಇನ್ನೂ ಆಗಿಲ್ಲ. ಆದರೂ ಹಿಂಡಲಗಾ ಜೈಲಿನ ಅಧಿಕಾರಿಗಳು ಗಲ್ಲಿಗೆ ಏರಿಸಲು ಸಿದ್ಧತೆ ಆರಂಭಿಸಿದ್ದಾರೆ.

ಜೈಲಿಗೆ ಬೇರೆ ಬೇರೆ ಜೈಲಿನ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ. ಸಿಮೆಂಟ್ ಚೀಲಗಳಿಗೆ ಹಗ್ಗ ಕಟ್ಟಿ ತಾಲೀಮು ನಡೆಸಲಾಗುತ್ತಿದೆ. ಕಳೆದ 33 ವರ್ಷಗಳ ನಂತರ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಮರಣದಂಡನೆ ಶಿಕ್ಷೆಯ ಕುಣಿಕೆಯೊಂದು ಸಿದ್ಧವಾಗುತ್ತಿದೆ.

ಅಧಿಕಾರಿಗಳು ಸಹ ಹಾಗೊಂದು ವೇಳೆ ಯಾವುದೇ ಕ್ಷಣದಲ್ಲಿ ನೇಣಿಗೆ ಏರಿಸುವ ಸಂದರ್ಭ ಎದುರಾದರೂ ಸಹ ಅದನ್ನು ನೇರವೇರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಉಮೇಶ ರೆಡ್ಡಿ 2006 ರಿಂದಲೇ ಹಿಂಡಲಗಾ ಜೈಲಿನಲ್ಲಿದ್ದಾನೆ. ಜತಗೆ ಮರಣದಂಡನೆ ಶಿಕ್ಷೆಗೆ ಗುರಿಯಾದ 27 ಜನ ಕೈದಿಗಳು ಈ ಜೈಲಿನಲ್ಲಿದ್ದಾರೆ. ಈ ಪೈಕಿ ಇಬ್ಬರು ಮಹಿಳಾ ಕೈದಿಗಳು ಸಹ ಸೇರಿದ್ದಾರೆ.

ಉಮೇಶ್ ರೆಡ್ಡಿ ಯಾರು?
1969ರಲ್ಲಿ ಚಿತ್ರದುರ್ಗ ತಾಲೂಕು ಬಸಪ್ಪ ಮಾಳಿಗೆ ಗ್ರಾಮದಲ್ಲಿ ಜನಿಸಿದ್ದ ಉಮೇಶ್ ರೆಡ್ಡಿ ಸಿಆರ್‍ಪಿಎಫ್‍ಗೆ ಸೇರಿ ಜಮ್ಮು ಕಾಶ್ಮೀರದಲ್ಲಿ ಸೇವೆ ಆರಂಭಿಸಿದ್ದ. ಆದರೆ ಅಲ್ಲಿ ಅತ್ಯಾಚಾರಕ್ಕೆ ಯತ್ನಿಸಿ ಮರಳಿ ಊರಿಗೆ ಬಂದಿದ್ದ. ನೆರೆ ಮನೆಯ ಮಹಿಳೆಯರ ಒಳ ಉಡುಪುಗಳನ್ನು ಕದಿಯುತ್ತಿದ್ದ ಈತ ಅದನ್ನು ಧರಿಸಿ ವಿಕೃತ ಸುಖವನ್ನು ಅನುಭವಿಸುತ್ತಿದ್ದ. ವಿಳಾಸ ಮತ್ತು ನೀರು ಕೇಳುವ ನೆಪದಲ್ಲಿ ಒಬ್ಬಂಟಿ ಗೃಹಿಣೆಯರ ಮನೆಗೆ ನುಗ್ಗಿ ಅತ್ಯಾಚಾರ ಎಸಗಿ ಕೊಲೆ ಮಾಡುತ್ತಿದ್ದ. ಒಟ್ಟು 18 ಮಹಿಳೆಯರನ್ನು ಕೊಲೆ ಮಾಡಿದ್ದ. 1997ರಲ್ಲಿ ಮೊದಲ ಬಾರಿಗೆ ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ ಈತ ನಂತರ 1998, 1999, 2002ರಲ್ಲಿ ಪರಾರಿಯಾಗಿದ್ದ. 2002 ಮೇ 17ರಂದು ಅಂತಿಮವಾಗಿ ಬೆಂಗಳೂರಿನ ಯಶವಂತಪುರ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ.

Comments are closed.